ಕೆಲಸದ ಒತ್ತಡ ಪಬ್ಲಿಕ್‌ ಸ್ಕೂಲ್ ನ ಟೀಚರ್ ಆತ್ಮಹತ್ಯೆ

8:10 PM, Monday, November 22nd, 2021
Share
1 Star2 Stars3 Stars4 Stars5 Stars
(No Ratings Yet)
Loading...

Amruthaಉಡುಪಿ  :  ಖಾಸಗಿ ಶಾಖೆಯ ಶಿಕ್ಷಕಿಯೊಬ್ಬರು ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾಗಿ  ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಮೂಡು ಅಲೆವೂರು ಎಂಬಲ್ಲಿ ನಡೆದಿದೆ.

ಮೃತರನ್ನು ವಿದ್ಯೋದಯ ಪಬ್ಲಿಕ್‌ ಸ್ಕೂಲ್ ನ ಶಿಕ್ಷಕಿ ಹಾಗೂ ಮೂಡು ಅಲೆವೂರಿನ ಬಾಲಗೋಪಾಲ ಎಂಬವರ ಪುತ್ರಿ ಅಮೃತಾ ಎಂದು ಗುರುತಿಸಲಾಗಿದೆ.

ಅಮೃತಾ ವಿದ್ಯೋದಯ ಪಬ್ಲಿಕ್‌ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಕಳೆದ 8 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಇದೇ ಚಿಂತೆಯಲ್ಲಿ ಮನನೊಂದ ಇವರು ಮನೆಯ ಕೋಣೆಯಲ್ಲಿ ಕುತ್ತಿಗೆಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English