ಮಂಗಳೂರು : ನಾವು ತಿನ್ನುವ ಆಹಾರ ನಮ್ಮ ಹಸಿವನ್ನು ನೀಗಿಸಿದರೆ, ಭಜನಾ ಸಂಕೀರ್ತನೆಯು ಜ್ಞಾನದ ಹಸಿವನ್ನು ನೀಗಿಸುವುದು. ಕೊರೋನಾ ತಡೆಗಟ್ಟುವಲ್ಲಿ ಮುಖಗವಸು ರಕ್ಷಣೆ ನೀಡಿದಂತೆ ವಿಕೃತ ಮನಸ್ಸಿನಿಂದ ರಕ್ಷಿಸಿಕೊಳ್ಳಲು ‘ಭಜನಾ ಸಂಕೀರ್ತನೆ’ಯೂ ಒಂದು ಸಾತ್ವಿಕವಾದ ರಕ್ಷಾ ಕವಚವಿದ್ದಂತೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿದರು.
ಕದ್ರಿ ಕಂಬಳ, ಮಲ್ಲಿಕಾ ಬಡಾವಣೆಯ, ಮಂಜುಪ್ರಾಸಾದ, ವಾದಿರಾಜ ಮಂಟಪದ ಪೇಜಾವರ ವಿಶ್ವೇಶತೀರ್ಥ ವೇದಿಕೆಯಲ್ಲಿ ನಗರದ ಆರ್ಯ ಸಮಾಜದ ಇಸ್ಕಾನ್ ಸಂಸ್ಥೆಯ ಅಕ್ಷಯ ಫೌಂಡೇಶನ್ ಮತ್ತು ಕಲ್ಕೂರ ಪ್ರತಿಷ್ಠಾನದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಆಹಾರದ ಕಿಟ್‌ಗಳ ವಿತರಣೆ ಹಾಗೂ ಭಜನಾ ಕಮ್ಮಟ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆವಹಿಸಿದ್ದರು.
ಇಸ್ಕಾನ್ ಸಂಸ್ಥೆಯ ಕಾರುಣ್ಯ ಸಾಗರ್‌ದಾಸ್ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊರೋನಾದ ಪರಿಣಾಮ ಸಂಕಷ್ಟಕ್ಕೀಡಾಗಿದ್ದ ಸುಮಾರು 150 ಮಂದಿಗೆ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಎಂ. ಬಿ. ಪುರಾಣಿಕ್, ಹರಿಕೃಷ್ಣ ಪುನರೂರು, ಮುಂಬೈ ಬಿಎಸ್‌ಕೆ ಎಸೋಸಿಯೇಶನ್‌ನ ಶಶಿಧರ ರಾವ್, ಸುಬ್ರಹ್ಮಣ್ಯ ಸಭಾದ ಅಧ್ಯಕ್ಷ ಶ್ರೀಕಾಂತ್ ರಾವ್ ಮೊದಲಾದವರು ಉಪಸ್ಥಿತರಿದ್ದರು. ಸುಧಾಕರ ರಾವ್ ಪೇಜಾವರ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ಮತ್ತು ನಾಗರಾಜ ರಾವ್ ನಿರ್ವಹಣೆಗೈದರು.
Click this button or press Ctrl+G to toggle between Kannada and English