ಮಂಗಳೂರು ವಿವಿ ಯುವ ರೆಡ್ ಕ್ರಾಸ್ ಘಟಕಕ್ಕೆ ರಾಜ್ಯ ಪ್ರಶಸ್ತಿ

8:42 PM, Tuesday, November 30th, 2021
Share
1 Star2 Stars3 Stars4 Stars5 Stars
(No Ratings Yet)
Loading...

Red Crossಮಂಗಳೂರು: ಯುವ ರೆಡ್ಕ್ರಾಸ್ನ ಚಟುವಟಿಕೆಗಳು ಮತ್ತು ಎಲ್ಲಾ ಹಂತಗಳಲ್ಲಿ ಯುವ ರೆಡ್ ಕ್ರಾಸ್ ನ್ನು ಬಲಪಡಿಸುವಲ್ಲಿ ನೀಡುವ ಬೆಂಬಲವನ್ನು ಗುರುತಿಸಿ ನೀಡಲಾಗುವ ʼಬೆಸ್ಟ್ ಪರ್ಫಾರ್ಮಿಂಗ್ ಯುನಿವರ್ಸಿಟಿʼ ಎಂಬ 2019-20 ನೇ ಸಾಲಿನ ಪ್ರಶಸ್ತಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ವಿಭಾಗವು ಭಾಜನವಾಗಿದೆ.

ಮಂಗಳವಾರ ಬೆಂಗಳೂರಿನ ರಾಜಭವನದ ಗ್ಲಾಸ್ ಹೌಸ್ ನಲ್ಲಿ ನಡೆದ ರೆಡ್ ಕ್ರಾಸ್ ವಾರ್ಷಿಕ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಅವರು ಪ್ರಶಸ್ತಿ ವಿತರಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹಾಗೂ ಮಂಗಳೂರು ವಿವಿ ಯೂತ್ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ.ಗಣಪತಿ ಗೌಡ ಪ್ರಶಸ್ತಿ ಸ್ವೀಕರಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English