ಕೆನರಾ ಬ್ಯಾಂಕಿನ ಕರೆನ್ಸಿ ಚೆಸ್ಟ್ ನಲ್ಲಿ ನಕಲಿ ನೋಟುಗಳು

10:14 PM, Thursday, December 2nd, 2021
Share
1 Star2 Stars3 Stars4 Stars5 Stars
(No Ratings Yet)
Loading...

Canara Bank  ಉಡುಪಿ : ದುಷ್ಕರ್ಮಿಗಳು 44 ನಕಲಿ ನೋಟುಗಳನ್ನು ಉಡುಪಿ ಕೋರ್ಟ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕಿನ ಕರೆನ್ಸಿ ಚೆಸ್ಟ್ ನಲ್ಲಿ  ಹಾಕಿರುವುದು ಪತ್ತೆಯಾಗಿವೆ.

ಕೆನರಾ ಬ್ಯಾಂಕ್ ಕರೆನ್ಸಿ ಚೆಸ್ಟ್ ನಲ್ಲಿ ಜು.14ರಿಂದ ಜು.15ರವರೆಗೆ ಆರ್‌ಬಿಐ ಡಿಪಾರ್ಟಮೆಂಟ್ ಬೆಂಗಳೂರು ಇವರು ಪರಿವೀಕ್ಷಣೆ ಮಾಡುವ ಸಂದರ್ಭದಲ್ಲಿ 2018ರ ನ.17ರಿಂದ 2021ರ ಆ.31ರವರೆಗೆ ವಿವಿಧ ಶಾಖೆಗಳಿಂದ ಕೆನರಾ ಬ್ಯಾಂಕ್ ಕರೆನ್ಸಿ ಚೆಸ್ಟ್ ಗೆ 44 ಖೋಟಾ ನೋಟುಗಳು ಬಂದಿರುವುದು ತಿಳಿದು ಬಂದಿದೆ.

ದುಷ್ಕರ್ಮಿಗಳು ನಕಲಿ ನೋಟುಗಳನ್ನು ತಯಾರಿ ಮಾಡಿ, ನೈಜ ನೋಟು ಗಳಂತೆ ಚಲಾವಣೆ ಮಾಡಿರುವುದಾಗಿ ಕರೆನ್ಸಿ ಚೆಸ್ಟ್‌ನ ಹಿರಿಯ ವ್ಯವಸ್ಥಾಪಕ ಸಂದೇಶ್ ರೋಡ್ರಿಗಸ್ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English