ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ದುಬೈನಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 15 ಲಕ್ಷ ರೂಪಾಯಿ ಮೊತ್ತದ 15 ಕೆ.ಜಿ. ಕೇಸರಿಯನ್ನು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕಾಸರಗೋಡು ಜಿಲ್ಲೆಯ ತಳಂಗರೆ ನಿವಾಸಿ ಮುಹಮ್ಮದ್ ಅಸ್ಲಂ(31) ಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಇರಾನ್ ಮೂಲದ ಕೇಸರಿಯನ್ನು ದುಬಾಯಿ ಮೂಲಕ ಕಾಸರಗೋಡಿಗೆ ಅಕ್ರಮವಾಗಿ ತರಿಸಿ, ವಿತರಿಸುವ ಜಾಲ ಇದಾಗಿದ್ದು, ಜಾಲದ ಸದಸ್ಯರು ಮುಹಮ್ಮದ್ ಅಸ್ಲಂ ಮೂಲಕ ಎರಡು ಬಾಕ್ಸ್‌ಗಳಲ್ಲಿ ಇದನ್ನು ಕಳುಹಿಸಿದ್ದಾರೆ. ಆರೋಪಿಯನ್ನು ಸಂಜೆ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ವಿಮಾನ ಮೂಲಕ ವಿದೇಶದಿಂದ ಕೇಸರಿ ಸಾಗಾಟ ವ್ಯಾಪಕವಾಗಿ ನಡೆಯುತ್ತಿದೆ. ಹಲವಾರು ಅಧಿಕಾರಿಗಳ, ಸ್ಕ್ಯಾನಿಂಗ್ ಯಂತ್ರದ ಕಣ್ಣು ತಪ್ಪಿಸಿ ಇದನ್ನು ಸಾಗಾಟ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವಶಪಡಿಸಿಕೊಂಡ ಕೇಸರಿಯಲ್ಲಿ ಇದು ಅತೀ ಹೆಚ್ಚು ಮೌಲ್ಯದ್ದಾಗಿದೆ.
Click this button or press Ctrl+G to toggle between Kannada and English