ಮುಂಬಯಿ: ಮಹಾನಗರದಲ್ಲಿ ವಿವಿಧ ಜಾತೀಯ ಸಂಘಟನೆಗಳ ಪ್ರಮುಖರು ಕ್ರೀಯಾಶೀಲರಾಗಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 21 ನೇ ವಾರ್ಷಿಕ ಮಹಾಸಭೆಯು ನ. 5 ರಂದು ಸಂಜೆ ಕುರ್ಲಾ ಪೂರ್ವ ಬಂಟರ ಭವನದ ಅನೆಕ್ಸ್ ಸಭಾಗೃಹದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಬಿಲ್ಲವ ಸಮಾಜದ ಮುಖಂಡ, ಹಿರಿಯ ರಾಜಕೀಯ ನಾಯಕ ಎಲ್ ವಿ. ಅಮೀನ್ ಅವರನ್ನು ಸಂಸ್ಥಾಪಕ ಅಧ್ಯಕ್ಷ ಜಯಕೃಷ್ಣ ಶೆಟ್ಟಿ ಯವರು ಹೂಗುಚ್ಛ ನೀಡಿ ಅಭಿನಂದಿಸುತ್ತಿದ್ದರು.
ನಂತರ ಜರಗಿದ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಮಿತಿಯ ಸಂಸ್ಥಾಪಕರೂ ಆದತೋನ್ಸೆ ಜಯಕೃಷ್ಣ ಶೆಟ್ಟಿ ಯವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ “ಮುಂಬಯಿ ಹಾಗೂ ಪರಿಸರಗಳಲ್ಲಿ ನೆಲೆಸಿದ ಕರಾವಳಿಯ ತುಳು ಕನ್ನಡಿಗರ ಸಂಘಟನೆಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಅಧಿಕ ಸಂಖ್ಯೆಯಲ್ಲಿ ಸೇರಿದ್ದು ಇವರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಲ್ಕು ಮಂದಿ ಗಣ್ಯರನ್ನು ಸನ್ಮಾನಿಸಲು ಸಂತೋಷವಾಗುತ್ತಿದೆ. ಈ ರೀತಿ ನಾವೆಲ್ಲರೂ ಒಂದಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮೂಲಕ ಹಿಂದಿನಂತೆ ಇನ್ನು ಮುಂದೆಯೂ ಕರಾವಳಿಯ ನಮ್ಮ ಜಿಲ್ಲೆಗಳ ಅಭಿವೃದ್ದಿಗಾಗಿ ಮತ್ತಷ್ಟು ಕ್ರೀಯಾಶೀಲರಾಗೋಣ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರೂ ನಿರ್ಗಮನ ಅಧ್ಯಕ್ಷರೂ, ಆದ ತೋನ್ಸೆ ಜಯಕೃಷ್ಣ ಶೆಟ್ಟಿಯವರು ನುಡಿದರು. ನೂತನ ಅಧ್ಯಕ್ಷರಾದ ಎಲ್. ವಿ. ಅಮೀನ್ ಹಾಗೂ ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯಿಂದ ಮುಂದೆಯೂ ಜಿಲ್ಲೆಗಳ ಅಭಿವೃದ್ದಿ ಕಾರ್ಯವು ಭರದಿಂದ ಸಾಗಲಿದೆ ಎಂದು ಅವರು ನುಡಿದರು.
ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತರಾದ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಬೈಕಂಪಾಡಿ, ಮುಂಬಯಿಯ ಖ್ಯಾತ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ, ಸಮಾಜ ಸೇವಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಸುರೇಶ್ ರಾವ್ ಮತ್ತು ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಯವರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಾದ ತೋನ್ಸೆ ಜಯಕೃಷ್ಣ ಶೆಟ್ಟಿ, ಎಲ್. ವಿ. ಅಮೀನ್, ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್ , ಉಪಾಧ್ಯಕ್ಷರು ಗಳಾದ, ಪಿ ಧನಂಜಯ ಶೆಟ್ಟಿ , ಹರೀಶ್ ಕುಮಾರ್ ಶೆಟ್ಟಿ, ಅರ್. ಕೆ. ಶೆಟ್ಟಿ, ನಿತ್ಯಾನಂದ. ಡಿ ಕೋಟ್ಯಾನ್ , ಐ ಆರ್ ಶೆಟ್ಟಿ , ರಾಮಚಂದ್ರ ಗಾಣಿಗ , ಜಿ ಟಿ ಆಚಾರ್ಯ, ಜತೆ ಕಾರ್ಯದರ್ಶಿ ದೇವದಾಸ್ ಕುಲಾಲ್ , ಮಾತ್ರವಲ್ಲದೆ ಎನ್. ಟಿ. ಪೂಜಾರಿ, ಹರೀಶ್ ಜಿ. ಅಮೀನ್, ಜಯಂತಿ ಉಳ್ಳಾಲ್, ಹ್ಯಾರಿ ಸಿಕ್ವೆರಾ, ತೋನ್ಸೆ ಸಂಜೀವ ಪೂಜಾರಿ ಹಾಗೂ ಇನ್ನಿತರ ಗಣ್ಯರು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಸನ್ಮಾನಿಸಿದರು.
ಸಮಿತಿಯ ಉಪಾಧ್ಯಕ್ಶರುಗಳಾದ ನಿತ್ಯಾನಂದ ಕೋಟ್ಯಾನ್, ಜಿ. ಟಿ ಆಚಾರ್ಯ, ಸಿಎ. ಐ. ಆರ್ ಶೆಟ್ಟಿ ಮತ್ತು ದಯಾಸಾಗರ ಚೌಟ ಸನ್ಮಾನಿತರನ್ನು ಪರಿಚಯಿಸಿದರು.
ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್ ವಂದನಾರ್ಪಣೆ ಮಾಡಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್
Click this button or press Ctrl+G to toggle between Kannada and English