ಪತ್ನಿ ಮಕ್ಕಳು ಮತಾಂತರವಾಗುವ ಆತಂಕದಿಂದ ಅವರನ್ನು ಕೊಂದು ನೇಣಿಗೆ ಶರಣಾದ ಡ್ರೈವರ್

9:54 PM, Wednesday, December 8th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

morgansgate-suicide ಮಂಗಳೂರು : ಪತ್ನಿ ಮಕ್ಕಳು  ಮತಾಂತರವಾಗುವ ಆತಂಕದಿಂದ  ಅವರಿಗೆ  ಫ್ರೈಡ್ ರೈಸ್ ನಲ್ಲಿ ವಿಷ ಹಾಕಿ ತಿನ್ನಿಸಿ ಪತಿಯೂ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಮೊರ್ಗನ್ಸ್ ಗೇಟ್ ಗೇಟ್ ನಲ್ಲಿ ಬುಧವಾರ ನಡೆದಿದೆ.

ನಾಗೇಶ್ ಶೇರಿಗುಪ್ಪಿ (30),ಆತನ ಪತ್ನಿ ವಿಜಯಲಕ್ಷ್ಮಿ( 26), ಸಪ್ನ (8) ಮತ್ತು ಸಮರ್ಥ್ (4) ಸಾವಿಗೀಡಾದವರು.

ಮೂಲತಃ ಬಾಗಲಕೋಟೆ ಬೀಳಗಿಯ ಸುನಗ್ ಗ್ರಾಮದವರಾಗಿದ್ದ ಕುಟುಂಬ ಕಳೆದ ೮ ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿತ್ತು. ನಾಗೇಶ್ ಶೇರಿಗುಪ್ಪ ಬರೆದ  ಡೆತ್ ನೋಟ್ ನಲ್ಲಿ ನೂರ್ ಜಹಾನ್ ಎಂಬ ಮಹಿಳೆಯ ಹೆಸರನ್ನು ಉಲ್ಲೇಖಿಸಿದ್ದು , ಆಕೆಯೇ ನಮ್ಮ ಸಾವಿಗೆ ಕಾರಣ. ಪತ್ನಿಯನ್ನು ತನ್ನ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸುತ್ತಿದ್ದಾಳೆ. ಇದೇ ಕಾರಣಕ್ಕೆ ಪತ್ನಿ ವಿಜಯಲಕ್ಷ್ಮಿ ಆಗಾಗ ಮನೆ ಬಿಟ್ಟು ಹೋಗುತ್ತಿದ್ದಳು ಎಂದು ನಾಗೇಶ್ ಆರೋಪಿಸಿದ್ದಾರೆ. ವಿಜಯಲಕ್ಷ್ಮಿ ನೂರ್ ಜಹಾನ್ ಮನೆಯಲ್ಲಿ ಮನೆ ಕೆಲಸಮಾಡುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿ ನೂರ್ಜಾನ್ ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ” ಎಂದು  ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

morgansgate-suicideನಾಗೇಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಆತ್ಮಹತ್ಯೆಗೂ ಮುನ್ನ ಪತ್ನಿ ಮತ್ತುಇಬ್ಬರು ಮಕ್ಕಳಿಗೆ ಫ್ರೈಡ್ ರೈಸ್ ನಲ್ಲಿ ವಿಷ ಹಾಕಿ ಹತ್ಯೆ ಮಾಡಿದ್ದಾನೆ. ಇವರು ಬಾಗಲಕೋಟೆ ಜಿಲ್ಲೆಯ ಬೀಳಗಿ ಗ್ರಾಮದ ಸುನಗ್ ಗ್ರಾಮದವರಾಗಿದ್ದಾರೆ. ನಾಗೇಶ್ ಡ್ರೈವರ್ ಆಗಿ ಮತ್ತು ವಿಜಯಲಕ್ಷ್ಮಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.

ಪತಿ ಪತ್ನಿಗಳಿಬ್ಬರ ನಡುವೆ ಗಳ ನಡುವೆ ಕಲಹವಿದ್ದು ನಾಗೇಶ್ ತನ್ನ ಪತ್ನಿಗೆ ಹಿಂಸೆ ನೀಡುತ್ತಿರುವ ಬಗ್ಗೆ ತಿಳಿದುಬಂದಿದೆ. ಅಕ್ಟೊಬರ್ ನಲ್ಲಿ ವಿಜಯಲಕ್ಷ್ಮಿ ತನ್ನಿಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಬಗ್ಗೆ ನಾಗೇಶ್ ದೂರು ನೀಡಿದ್ದರು. ಆದರೆ, ಕೆಲ ದಿನಗಳ ಬಳಿಕ ಆಕೆಯೇ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ತನ್ನ ಪತಿ ಹಿಂಸೆ ನೀಡುತ್ತಿದ್ದರಿಂದ ಸಂಬಂಧಿಕರ ಮನೆಯಲ್ಲಿ ಇದ್ದೆ. ಮತ್ತೆ ಪತಿಯೊಂದಿಗೆ ಸಂಸಾರ ಮಾಡುತ್ತಿದ್ದೇನೆ ಎಂದು ಹೇಳಿ ಹೋಗಿದ್ದರು.ಇದೀಗ ಈ ರೀತಿ ಆಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English