ದ.ಕ-ಉಡುಪಿ ಸ್ಥಳೀಯಾಡಳಿತ ವಿಧಾನ ಪರಿಷತ್‌ ಚುನಾವಣೆ, ಶೇ. 99.55 ಮತದಾನ

9:52 PM, Friday, December 10th, 2021
Share
1 Star2 Stars3 Stars4 Stars5 Stars
(No Ratings Yet)
Loading...

kota-srinivasa-poojary ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ವಿಧಾನ ಪರಿಷತ್‌ನ  ಚುನಾವಣೆ ಇಂದು ಶಾಂತಿಯುತವಾಗಿ ನಡೆದಿದ್ದು, ಶೇ. 99.55 ಮತದಾನವಾಗಿದೆ.

ದ.ಕ. ಜಿಲ್ಲೆಯ 231 ಹಾಗೂ ಉಡುಪಿ ಜಿಲ್ಲೆಯ 158 ಸಹಿತ ಉಭಯ ಜಿಲ್ಲೆಗಳ ಒಟ್ಟು 389 ಮತಗಟ್ಟೆಗಳಲ್ಲಿ ಒಟ್ಟು 6040 ಮತದಾರರಲ್ಲಿ ಸಂಜೆ 4 ಗಂಟೆಯ ವೇಳೆಗೆ 6013 ಮಂದಿ ಮತದಾನ ಮಾಡಿದ್ದಾರೆ.

ದ.ಕ. ಜಿಲ್ಲೆಯ 3290 ಗ್ರಾ.ಪಂ. ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆಯ 60 ಸದಸ್ಯರು, ನಗರ ಸಭೆಯ 62, ಪುರಸಭೆಯ 50, ಪಟ್ಟಣ ಪಂಚಾಯತ್‌ನ 49, ಸ್ಥಳೀಯಾಜಳಿತ ನಾಮ ನಿರ್ದೇಶಿತ 14 ಸದಸ್ಯರು ಹಾಗೂ ಸಂಸದ, ಶಾಸಕರು ಕೂಡಾ ಮತ ಚಲಾಯಿಸಿದ್ದಾರೆ.

ಬೆಳಗ್ಗೆ 8 ಗಂಟೆಯ ವೇಳೆಗೆ ಎಲ್ಲಾ ಮತಗಟ್ಟೆಗಳಲ್ಲಿ ಮತದಾನ ಆರಂಭಗೊಂಡಿದ್ದು, 2915 ಪುರುಷ ಮತದಾರರಲ್ಲಿ 2902 ಮಂದಿ ಮತ ಚಲಾಯಿಸಿದ್ದರೆ, 3125 ಮಹಿಳಾ ಮತದಾರರಲ್ಲಿ 3111 ಮಂದಿ ಮತ ಚಲಾಯಿಸಿದ್ದಾರೆ. ಬೈಂದೂರು, ಹೆಬ್ರಿ, ಮೂಡಬಿದ್ರೆ, ಬಂಟ್ವಾಳ, ಕಡಬ ತಾಲೂಕುಗಳಲ್ಲಿ ಶೇ. 100 ಮತದಾನವಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಮತಗಟ್ಟೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್ ಬೆಳಗ್ಗೆ ಸುಮಾರು 9.30ರ ವೇಳೆಗೆ ಮತ ಚಲಾಯಿಸಿದರು. ಈ ಸಂದರ್ಭ ಮೇಯರ್ ಪ್ರೇಮಾನಂದ ಶೆಟ್ಟಿ, ಮನಪಾ ಪ್ರತಿಪಕ್ಷದ ಹಿರಿಯ ಸದಸ್ಯ ಶಶಿಧರ ಹೆಗ್ಡೆ, ವಿನಯರಾಜ್ ಸೇರಿದಂತೆ ಹೆಚ್ಚಿನ ಸದಸ್ಯರ ಆಗಮಿಸಿ ಮತ ಚಲಾಯಿಸಿದರು. ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜಾ ಅವರು ಕೂಡಾ ಮತಗಟ್ಟೆ ಹೊರ ಭಾಗದಲ್ಲಿ ಆಗಮಿಸಿ ಪಕ್ಷದ ಸದಸ್ಯರಿಗೆ ಮತ ಚಲಾವಣೆಗೆ ಹುರಿದುಂಬಿಸಿದರು.

ಶಾಸಕ ಡಾ ವೈ. ಭರತ್ ಶೆಟ್ಟಿಯವರು ಕೂಡಾ ಮನಪಾ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದು, ಆ ಸಂದರ್ಭ ಉಪ ಮೇಯರ್ ಸುಮಂಗಲಾ ರಾವ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು ಮತದಾನ ಮಾಡಿದರು. ಮನಪಾದ ಮತಗಟ್ಟೆಯಲ್ಲಿ ಬೆಳಗ್ಗೆ 9.30ರಿಂದ 10 ಗಂಟೆಯ ಸುಮಾರಿಗೆ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವುದು ಕಂಡು ಬಂತು.

ಪಾಲಿಕೆಯಲ್ಲಿ ಕಾಂಗ್ರೆಸ್‌ನ 14 ಸದಸ್ಯರು ಹಾಗೂ ಎಸ್‌ಡಿಪಿಐಯಿಂದ ಇಬ್ಬರು ಸದಸ್ಯರು ಇದ್ದು, ಅವರು ಎಲ್ಲರೂ ಮತ ಚಲಾಯಿಸಿದ್ದಾರೆ. ಮಹಾನಗರ ಪಾಲಿಕೆಯ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್‌ನಿಂದ ಪೋಲಿಂಗ್ ಏಜೆಂಟೇ ಇರಲಿಲ್ಲ. ಜೆಡಿಎಸ್‌ನಿಂದ ಮತದಾನದ ಹಕ್ಕು ಹೊಂದಿದ್ದ ವಿಧಾನಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮತ ಚಲಾಯಿಸಿಲ್ಲ. ಉಳ್ಳಾಲ ನಗರಸಭೆಯಲ್ಲಿ ಬೆಳಗ್ಗೆ ಶಾಸಕ ಯು.ಟಿ.ಖಾದರ್ ಮತ ಚಲಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ದಕ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್, ಈ ಕೇಂದ್ರದಲ್ಲಿ ನಮಗೆ 14 ಮತಗಳಿದ್ದವು. ಎಲ್ಲ ಮತದಾರರು ಜೊತೆಯಾಗಿ ಬಂದು ಮತ ಚಲಾವಣೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ದ.ಕ. ಜಿಲ್ಲೆಯಾದ್ಯಂತ ಹೆಚ್ಚಿನ ಕಡೆ ಹೆಚ್ಚಿನ ಕಡೆ ಮಧ್ಯಾಹ್ನದೊಳಗೆ ಪೂರ್ಣ ಮತ ಚಲಾವಣೆಗೊಂಡಿದ್ದರೂ, ಮತದಾನ ನಡೆಸಲು ನಿಗದಿಪಡಿಸಿದ ಅವಧಿಯಂತೆ ಸಾಯಂಕಾಲ ನಾಲ್ಕು ಗಂಟೆ ತನಕ ಎಲ ಅಧಿಕಾರಿಗಳು ಮತಗಟ್ಟೆಗಳಲ್ಲಿ ಕಾದು ಪ್ರಕ್ರಿಯೆ ಪೂರ್ಣಗೊಳಿಸಿದರು.

ಕೋಟತಟ್ಟು ಗ್ರಾಮ ಪಂಚಾಯತ್‌ಗೆ ಬೇಟಿ ನೀಡುವ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ನ 13 ಜನ ಸದಸ್ಯರು ಕೋಟ ಶ್ರೀನಿವಾಸ್ ಪೂಜಾರಿಯವರ ಭಾವಚಿತ್ರದ ಮುಖವಾಡ ಧರಿಸಿ ಅವರನ್ನು ಸ್ವಾಗತಿಸಿದರು.

ವಿವಿಧ ತಾಲೂಕುಗಳಲ್ಲಿ ಮತಚಲಾವಣೆಯಾದ ಮತಗಳ ವಿವರ ಇಂತಿದೆ:

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಒಟ್ಟು 258 ಮತದಾರರಲ್ಲಿ 123 ಪುರುಷ ಹಾಗೂ 135 ಮಹಿಳಾ ಮತದಾರರಿದ್ದು ಅಲ್ಲಿ ಶೇ. 100 ರಷ್ಟು ಮತದಾನವಾಗಿದೆ.

ಕುಂದಾಪುರದಲ್ಲಿ ಒಟ್ಟು 614 ಮತದಾರರಿದ್ದು, 296 ಪುರುಷ ಹಾಗೂ 318 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 295 ಪುರುಷರು ಹಾಗೂ 314 ಮಹಿಳೆಯರು ಸೇರಿದಂತೆ ಒಟ್ಟು 609 ಮಂದಿ ಮತ ಚಲಾಯಿಸಿದ್ದು, ಶೇ. 99.19 ರಷ್ಟು ಮತದಾನವಾಗಿದೆ.

ಬ್ರಹ್ಮಾವರದಲ್ಲಿ ಒಟ್ಟು 427 ಮತದಾರರಲ್ಲಿ 210 ಪುರುಷ ಹಾಗೂ 217 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 208 ಪುರುಷ ಹಾಗೂ 217 ಮಹಿಳೆಯರು ಸೇರಿದಂತೆ 425 ಮಂದಿ ಮತ ಚಲಾಯಿಸಿದ್ದು, ಶೇ. 99.53 ರಷ್ಟು ಮತದಾನವಾಗಿದೆ.

ಉಡುಪಿ ತಾಲೂಕಿನಲ್ಲಿ ಒಟ್ಟು 369 ಮತದಾರರಲ್ಲಿ 181 ಪುರುಷ ಹಾಗೂ 188 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 181 ಪುರುಷ ಹಾಗೂ 187 ಮಹಿಳೆಯರು ಸೇರಿದಂತೆ 368 ಮಂದಿ ಮತ ಚಲಾಯಿಸಿದ್ದು, ಶೇ. 99.73 ರಷ್ಟು ಮತದಾನವಾಗಿದೆ.

ಕಾಪು ತಾಲೂಕಿನಲ್ಲಿ ಒಟ್ಟು 288 ಮತದಾರರಲ್ಲಿ 134 ಪುರುಷ ಹಾಗೂ 154 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 133 ಪುರುಷ ಹಾಗೂ 152 ಮಹಿಳೆಯರು ಸೇರಿದಂತೆ 285 ಮಂದಿ ಮತ ಚಲಾಯಿಸಿದ್ದು, ಶೇ. 98.96 ರಷ್ಟು ಮತದಾನವಾಗಿದೆ.

ಹೆಬ್ರಿ ತಾಲೂಕಿನಲ್ಲಿ ಒಟ್ಟು 122 ಮತದಾರರಲ್ಲಿ 57 ಪುರುಷ ಹಾಗೂ 65 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 57 ಪುರುಷ ಹಾಗೂ 65 ಮಹಿಳೆಯರು ಸೇರಿದಂತೆ 122 ಮಂದಿ ಮತ ಚಲಾಯಿಸಿದ್ದು, ಶೇ. 100 ರಷ್ಟು ಮತದಾನವಾಗಿದೆ.

ಕಾರ್ಕಳ ತಾಲೂಕಿನಲ್ಲಿ ಒಟ್ಟು 427 ಮತದಾರರಲ್ಲಿ 207 ಪುರುಷ ಹಾಗೂ 220 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 206 ಪುರುಷ ಹಾಗೂ 219 ಮಹಿಳೆಯರು ಸೇರಿದಂತೆ 425 ಮಂದಿ ಮತ ಚಲಾಯಿಸಿದ್ದು, ಶೇ. 99.53 ರಷ್ಟು ಮತದಾನವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನಲ್ಲಿ  ಒಟ್ಟು 222 ಮತದಾರರಲ್ಲಿ 110 ಪುರುಷ ಹಾಗೂ 112 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 110 ಪುರುಷ ಹಾಗೂ 112 ಮಹಿಳೆಯರು ಸೇರಿದಂತೆ 222 ಮಂದಿ ಮತ ಚಲಾಯಿಸಿದ್ದು, ಶೇ. 100 ರಷ್ಟು ಮತದಾನವಾಗಿದೆ.

ಮಂಗಳೂರು ತಾಲೂಕಿನಲ್ಲಿ ಒಟ್ಟು 769 ಮತದಾರರಲ್ಲಿ 375 ಪುರುಷ ಹಾಗೂ 394 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 371 ಪುರುಷ ಹಾಗೂ 392 ಮಹಿಳೆಯರು ಸೇರಿದಂತೆ 763  ಮಂದಿ ಮತ ಚಲಾಯಿಸಿದ್ದು, ಶೇ. 99.22 ರಷ್ಟು ಮತದಾನವಾಗಿದೆ.

ಬಂಟ್ವಾಳ ತಾಲೂಕಿನಲ್ಲಿ ಒಟ್ಟು 903 ಮತದಾರರಲ್ಲಿ 437 ಪುರುಷ ಹಾಗೂ 466 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 437 ಪುರುಷ ಹಾಗೂ 466 ಮಹಿಳೆಯರು ಸೇರಿದಂತೆ 903 ಮಂದಿ ಮತ ಚಲಾಯಿಸಿದ್ದು, ಶೇ. 100 ರಷ್ಟು ಮತದಾನವಾಗಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 678 ಮತದಾರರಲ್ಲಿ 324 ಪುರುಷ ಹಾಗೂ 354 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 324 ಪುರುಷ ಹಾಗೂ 352 ಮಹಿಳೆಯರು ಸೇರಿದಂತೆ 676 ಮಂದಿ ಮತ ಚಲಾಯಿಸಿದ್ದು, ಶೇ. 99.71 ರಷ್ಟು ಮತದಾನವಾಗಿದೆ.

ಪುತ್ತೂರು ತಾಲೂಕಿನಲ್ಲಿ ಒಟ್ಟು 375 ಮತದಾರರಲ್ಲಿ 184 ಪುರುಷ ಹಾಗೂ 191 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 181 ಪುರುಷ ಹಾಗೂ 191 ಮಹಿಳೆಯರು ಸೇರಿದಂತೆ 372 ಮಂದಿ ಮತ ಚಲಾಯಿಸಿದ್ದು, ಶೇ. 99.20 ರಷ್ಟು ಮತದಾನವಾಗಿದೆ.

ಸುಳ್ಯ ತಾಲೂಕಿನಲ್ಲಿ ಒಟ್ಟು 303 ಮತದಾರರಲ್ಲಿ 145 ಪುರುಷ ಹಾಗೂ 158 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 144 ಪುರುಷ ಹಾಗೂ 156 ಮಹಿಳೆಯರು ಸೇರಿದಂತೆ 300 ಮಂದಿ ಮತ ಚಲಾಯಿಸಿದ್ದು, ಶೇ. 99.01 ರಷ್ಟು ಮತದಾನವಾಗಿದೆ.

ಕಡಬ ತಾಲೂಕಿನಲ್ಲಿ ಒಟ್ಟು 285 ಮತದಾರರಲ್ಲಿ 132 ಪುರುಷ ಹಾಗೂ 153 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 132 ಪುರುಷ ಹಾಗೂ 153 ಮಹಿಳೆಯರು ಸೇರಿದಂತೆ 285 ಮಂದಿ ಮತ ಚಲಾಯಿಸಿದ್ದು, ಶೇ. 100 ರಷ್ಟು ಮತದಾನವಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English