ಶ್ರೀ ವೀರ ವೆಂಕಟೇಶ ದೇವರ ಅನ್ನಪೂರ್ಣೆ ( ಪಾಕ ಶಾಲೆ ) ಯ ಉದ್ಘಾಟನೆ

8:48 PM, Monday, December 13th, 2021
Share
1 Star2 Stars3 Stars4 Stars5 Stars
(No Ratings Yet)
Loading...

Annapoorneಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ನವೀಕೃತ ಅನ್ನಪೂರ್ಣೆ ( ಪಾಕ ಶಾಲೆ ) ಯ ಉದ್ಘಾಟನಾ ಸಮಾರಂಭವು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ನೆರವೇರಿತು . ಪ್ರಾರಂಭದಲ್ಲಿ ಶ್ರೀಗಳವರು ಬಂಟ್ವಾಳ್ ಮೊಕ್ಕಾಂ ನಿಂದ ಆಗಮಿಸಿದ್ದು ಶ್ರೀಗಳವರಿಗೆ ಮಂಗಳೂರು ಪೇಟೆಯ ವತಿಯಿಂದ ಪೂರ್ಣ ಕುಂಭ ಸ್ವಾಗತ ನೀಡಲಾಯಿತು .

ಶ್ರೀಗಳವರಿಂದ ಶ್ರೀ ವೀರ ವೆಂಕಟೇಶ ದೇವರ ಸನ್ನಿಧಿಯಲ್ಲಿ ಮಹಾ ಪ್ರಾರ್ಥನೆ ನಡೆಯಿತು ಇದೇ ಸಂದರ್ಭದಲ್ಲಿ ಬಳಿಕ ಬರುವ ವರ್ಷ ಜನವರಿ 25 ರಂದು ನಡೆಯಲಿರುವ ಶ್ರೀ ದೇವರ ಪುನಃ ಪ್ರತಿಷ್ಠಾ ದಶಮಾನೋತ್ಸವ ಹಾಗೂ ನೂತನ ಬ್ರಹ್ಮ ರಥ ಸಮರ್ಪಣೆ ನಡೆಯಲಿರುವುದರಿಂದ ಶ್ರೀಗಳವರಿಂದ ಪ್ರಾರ್ಥನೆ ನಡೆದು ಪ್ರಸಾದ ನೀಡಿದರು , ಬಳಿಕ ನವೀಕೃತ ಅನ್ನಪೂರ್ಣೆ ( ಪಾಕ ಶಾಲೆ ) ಯ ಉದ್ಘಾಟನಾ ಸಮಾರಂಭ ಶ್ರೀಗಳವರಿಂದ ದೀಪ ಪ್ರಜ್ವಲನೆಯ ಮುಖೇನ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು .

ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರಾದ ಸಿ ಎಲ್ ಶೆಣೈ , ಕೆ ಪಿ ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ , ಕೊಡುಗೈ ದಾನಿ ರಾಮದಾಸ್ ಕಾಮತ್ , ವೆಂಕಟೇಶ್ ಪೈ ಹಾಗೂ ಸಾವಿರಾರು ಭಜಕರು ಉಪಸ್ಥಿತರಿದ್ದರು .

ಚಿತ್ರ : ಮಂಜು ನೀರೇಶ್ವಾಲ್ಯ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English