ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲೆಯನ್ನು ಒಳಗೊಂಡ ಸ್ಥಳೀಯಾಡಳಿತದ ವಿಧಾನ ಪರಿಷತ್‌ನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಇಬ್ಬರೂ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಜಯ ಗಳಿಸಿದ್ದಾರೆ.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಖಾತೆ ಸಚಿವರಾಗಿರುವ ಕೋಟ ಶ್ರೀನಿವಾಸ 3,672 ಮತಗಳನ್ನು ಗಳಿಸಿ ಮತ್ತೊಮ್ಮೆ ರಾಜ್ಯ ಶಾಸಕಾಂಗದ ‘ಮೇಲ್ಮನೆ’ ಪ್ರವೇಶಿಸಿದ್ದಾರೆ. ಮಂಜುನಾಥ ಭಂಡಾರಿ 2,079 ಮತಗಳನ್ನು ಗಳಿಸಿ ಮೊದಲ ಬಾರಿ ‘ಮೇಲ್ಮನೆ’ ಪ್ರವೇಶಿಸಿದ್ದಾರೆ. ಎಸ್ ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆ 204 ಮತಗಳನ್ನು ಗಳಿಸಿದ್ದಾರೆ. 56 ಮತಗಳು ಅಸಿಂಧುವಾಗಿವೆ.
ಒಟ್ಟು ಚಲಾವಣೆಯಾಗಿರುವ 6,011 ಮತಗಳಲ್ಲಿ 56 ಮತಗಳು ಅಸಿಂಧುಗೊಂಡಿದ್ದರಿಂದ ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದಲ್ಲಿ ಗೆಲುವು ಸಾಧಿಸಲು 1,986 ಮತಗಳನ್ನು ಗಳಿಸಬೇಕಿತ್ತು.
Click this button or press Ctrl+G to toggle between Kannada and English