ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿಯಾಗಿ ಬರೆಯುವವರು ಪೇಮೆಂಟ್ ಕೊಡುತ್ತಾರೆ ಎಂದು ಬರೆಯುವವರು. ಸೋಷಿಯಲ್ ಮೀಡಿಯಾದಲ್ಲಿ ಬರೆದ ಮಾತ್ರಕ್ಕೆ ರಾಜೀನಾಮೆ ಕೊಡಲು ಅದು ಭಿಕ್ಷೆ ಅಲ್ಲ, ಸಂಘಟನೆ ಒಡೆಯುವುದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಸೋಷಿಯಲ್ ಮೀಡಿಯಾದಲ್ಲಿ ದುರ್ಬಲ ರಾಜಾಧ್ಯಕ್ಷ ಎಂದು ಹೇಳಿಕೆ ಕೊಟ್ಟ ಕೂಡಲೇ ಅವರು ದುರ್ಬಲವಾಗುವುದಿಲ್ಲ. ರಾಜಾಧ್ಯಕ್ಷ ಹುದ್ದೆ ಸಂಘಟನೆ ಅವರಿಗೆ ಕೊಟ್ಟಿರುವ ಜವಾಬ್ದಾರಿ. ಇದೆಲ್ಲ ಯಾರು ಪೇಮೆಂಟ್ ಕೊಡುತ್ತಾರೆ ಅವರಿಗೆ ಬರೆಯುವ ಸಂಸ್ಥೆಗಳು ನೈಜ ಕಾರ್ಯಕರ್ತರು ಇದನ್ನು ಮಾಡಿಲ್ಲ ಎಂದರು.
ಕೆಲವರು ಸಂಘಟನೆಯಲ್ಲಿ ಪದವಿ ಅಥವ ಹುದ್ದೆ ಕೇಳಿ ಬರುತ್ತಾರೆ ಸಿಗದಿದ್ದಾಗ ಈ ರೀತಿ ಬರೆಯುತ್ತಾರೆ ಎಂದು ವಾಗ್ದಾಳಿ ನಡೆಸಿದ ಅವರು ಕೆಲವರು ಸೋಷಿಯಲ್ ಮೀಡಿಯಾದ ಮೂಲಕ ಎಂಪಿ, ಎಂಎಲ್ ಎ ಆಗಬಹುದು ಎಂದು ತಿಳಿದುಕೊಂಡಿದ್ದರೆ. ಅದು ಮೂರ್ಖತನದ ಪರಮಾವಧಿ. ನಮ್ಮ ಸಂಸದರಿಂದ ಸಹಾಯ ಪಡೆದವರೇ ಸಂಸದರ ವಿರುದ್ಧ ಬರೆದಿದ್ದಾರೆ ಎಂದರು.
ರಾಜ್ಯಾಧ್ಯಕ್ಷರ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸಹ ಶಹಬ್ಬಾಸ್ ಗಿರಿ ವ್ಯಕ್ತಪಡಿಸಿದ್ದಾರೆ. ಅವರು ಚುನಾವಣೆ ಎದುರಿಸಿ ಪಕ್ಷವನ್ನು ಗೆಲ್ಲಿಸಿ ಬಲಪಡಿಸಿದ್ದಾರೆ. ಇದರ ಹಿಂದೆ ಅತೃಪ್ತ ಆತ್ಮ ಹಾಗೂ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಬಿಜೆಪಿ ಹಾಗೂ ಸಂಘಟನೆ ನಡುವೆ ಬಿರುಕು ಮೂಡಿಸಿ ಬಿಜೆಪಿಯ ಭದ್ರಕೋಟೆ ದ.ಕ ಜಿಲ್ಲೆಯನ್ನು ಒಡೆಯಬೇಕು ಎನ್ನುವ ಹುನ್ನಾರ ನಡೆಯುತ್ತಿದೆ. ಸೋಷಿಯಲ್ ಮೀಡಿಯಾ ಮೂಲಕ ಹಿಂದೂ ಸಂಘಟನೆ ಕಟ್ಟಲು ಸಾಧ್ಯವಿಲ್ಲ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದ ಮಾತ್ರಕ್ಕೆ ಸಂಘಟನೆ ಒಡೆಯುವುದಿಲ್ಲ ಎಂದರು.
ರಾಜ್ಯಾಧ್ಯಕ್ಷ ಮೂಲತಃ ಹಿಂದೂ ಸಂಘಟನೆಯಿಂದ ಬಂದವರು, ಈಗ ತೆಗಳಿದವರು ಯಾಕೆ ಈ ಹಿಂದೆ ಹೊಗಳಿದರು ಎಂದು ಪ್ರಶ್ನಿಸಿದ ಅವರು ಇವತ್ತು ರಾಜಕಾರಣದ ವ್ಯವಸ್ಥೆಯಲ್ಲಿ ಹಲವರು ರಾಜಕೀಯ ಪಕ್ಷಗಳಿಗೆ ಸಲಹೆಗಾರರಾಗಿದ್ದಾರೆ ಇಂದು ಬಿಜೆಪಿಗೆ, ನಾಳೆ ಕಾಂಗ್ರೆಸ್‌ಗೆ ನಾಡಿದ್ದು ಮತ್ತೊಂದು ಪಕ್ಷಕ್ಕೆ ಸಲಹೆಗಾರರಾಗ್ತಾರೆ. ಚುನಾವಣಾ ಸಮಯದಲ್ಲಿ ಕೆಲವು ಸಂಸ್ಥೆಗಳಿದ್ದವು, ಅವರು ಯಾರು ಪೇಮೆಂಟ್ ಕೊಡುತ್ತಾರೆ ಅವರಿಗೆ ಬರೆಯುತ್ತಾರೆ ಅಂತವರೇ ಬರೆದಿದ್ದಾರೆ ಎಂದ ಅವರು ನೈಜ ಕಾರ್ಯಕರ್ತರು ಈ ರೀತಿ ಬರೆಯುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಸ್ತೂರಿ ಪಂಜ, ರಾಧಾಕೃಷ್ಣ, ಸುಧೀರ್ ಕುಮಾರ್, ರವಿಶಂಕರ್ ಮಿಜಾರು, ಸುಧೀರ್ ಕುಮಾರ್ ಶೆಟ್ಟಿ ಇದ್ದರು.
Click this button or press Ctrl+G to toggle between Kannada and English