ಪೊಲೀಸ್ ಠಾಣೆಯ ಮೇಲೆ PFI ಕಾರ್ಯಕರ್ತರ ದಾಳಿ : ಆರೋಪಿಗಳ ಮೇಲೆ ದೇಶದ್ರೋಹದ ಕೇಸು ದಾಖಲಿಸಲು ಆಗ್ರಹ – ವಿಶ್ವ ಹಿಂದೂ ಪರಿಷದ್

9:10 PM, Monday, December 20th, 2021
Share
1 Star2 Stars3 Stars4 Stars5 Stars
(No Ratings Yet)
Loading...

VHP putturಪುತ್ತೂರು  : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಡಿಸೆಂಬರ್ 14ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ PFI – SDPI ನ ಕಾರ್ಯಕರ್ತರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನುಗ್ಗಿ, ಪೋಲೀಸರ ಮೇಲೆ ದಾಳಿ ನಡೆಸಿದ್ದು ಬಹಳ ಆತಂಕಕಾರಿ ಘಟನೆಯಾಗಿದ್ದು, ಜನರ ರಕ್ಷಣೆ ಮಾಡುವಂತಹ ಪೊಲೀಸರನ್ನೇ ಕೊಲೆ ಮಾಡಲು ಪ್ರಯತ್ನಿಸಿದ್ದು ಜಿಲ್ಲೆಯ ಸಮಸ್ತ ನಾಗರಿಕ ಸಮಾಜ ಈ ಕೃತ್ಯದಿಂದ ಭಯಭೀತರಾಗಿದ್ದಾರೆ. PFI ಕಾರ್ಯಕರ್ತರು ಅವರದ್ದೇ ಅಂಬುಲೆನ್ಸ್ ನಲ್ಲಿ ತಲುವಾರು, ಸೋಡಾ ಬಾಟಲಿಗಳು, ಕಲ್ಲುಗಳು, ಇನ್ನಿತರ ಮಾರಕ ಆಯುಧಗಳ ಸಹಿತ ಪೋಲೀಸರ ಮೇಲೆ ದಾಳಿ ನಡೆಸಿ ಅವರನ್ನು ಕೊಲೆ ಮಾಡಲು ಪ್ರಯತ್ನಿಸಿದ್ದು ಮಾತ್ರವಲ್ಲದೆ, ಪಕ್ಕದ ಮಸೀದಿಯಿಂದ 500 ಕ್ಕಿಂತಲೂ ಹೆಚ್ಚು ಜನರು ಏಕಾಕಿ ಏಕಿ ಬಂದು ಪೊಲೀಸ್ ಸ್ಟೇಷನ್ ನ ಕಿಟಕಿ ಗಾಜು ಪುಡಿ ಮಾಡಿ, ಇಲಾಖೆಯ ವಾಹನಗಳನ್ನು ದ್ವಂಸ ಮಾಡಿದ್ದಾರೆ. ಈ ಘಟನೆಯಲ್ಲಿ DYSP ಗಾನಕುಮಾರಿ, SI ಪ್ರಸನ್ನ ಮತ್ತು ಮಹಿಳಾ ಸಿಬ್ಬಂದಿ ಸೇರಿದಂತೆ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ. ಈ ಕೃತ್ಯವು ಪೂರ್ವಯೋಜಿತವಾಗಿದ್ದು, ಕೇರಳ ಭಾಗ ಮತ್ತು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವಾರು ಜಿಹಾದಿ ಮಾನಸಿಕತೆ ಇರುವ ಯುವಕರು ಈ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಇದೊಂದು ಭಯೋತ್ಪಾದಕ ಕೃತ್ಯವಾಗಿದೆ. ಬೆಂಗಳೂರಿನಲ್ಲಿ ಕೂಡ ಡಿಜೆ ಹಳ್ಳಿ, ಕೆಜೆ ಹಳ್ಳಿ ;ಪೊಲೀಸ್ ಠಾಣೆಯಲ್ಲಿ ಇವರು ಇಂತಹದ್ದೇ ಕೃತ್ಯ ಎಸಗಿದ್ದು ಅಲ್ಲಿ ಪೊಲೀಸ್ ವಾಹನ ಬೆಂಕಿ ಹಚ್ಚಿ, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟಮಾಡಿದ್ದಾರೆ ಅಲ್ಲದೆ ಪೊಲೀಸ್ ಠಾಣೆ ಮತ್ತು ಹತ್ತಾರು ಮನೆಗಳನ್ನು ದ್ವಂಸ ಮಾಡಿದ್ದಾರೆ. ಅಲ್ಲಿಯ ಘಟನೆಯನ್ನು ಖಂಡಿಸಿ ಸರಕಾರ ಆರೋಪಿಗಳ ಮೇಲೆ ದೇಶದ್ರೋಹದ ಕೇಸುಗಳನ್ನು ದಾಖಲಿಸಿತ್ತು. ಉಪ್ಪಿನಂಗಡಿಯಲ್ಲಿ ಕೂಡ ನಡೆದಂತಹ ಈ ಭಯಾನಕ ಕೃತ್ಯ ದೇಶದ ಸುರಕ್ಷತೆ ವ್ಯವಸ್ಥೆ ಮೇಲೆ ದಾಳಿ ಮಾಡಿದ್ದು ಅದರಿಂದ ಕಾನೂನು ಬಾಹಿರವಾದ ಈ ಕೃತ್ಯವನ್ನು PFI ಸಂಘಟನೆ ಮಾಡಿದೆ. ಇವರ ಮೇಲೆ ದೇಶದ ಬೇರೆ ಬೇರೆ ದೇಶ ದ್ರೋಹದ ಪ್ರಕರಣ ದಾಖಲಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಹತ್ತಾರು ಮುಗ್ದ ಹಿಂದೂಗಳ ಕೊಲೆಯಲ್ಲಿ ಇವರ ನೇರ ಪಾತ್ರವಿದೆ. ಹಾಗಾಗಿ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಈ ಕೃತ್ಯ ನಡೆಸಿದ ಎಲ್ಲಾ ಆರೋಪಿಗಳ ಮೇಲೆ ದೇಶದ್ರೋಹದ ಕೇಸನ್ನು ದಾಖಲಿಸಬೇಕೆಂದು ಜಿಲ್ಲಾಡಳಿತಕ್ಕೆ ಬಲವಾಗಿ ಆಗ್ರಹಿಸುತ್ತೇವೆ.

ಆರೋಪಿಗನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಹಿಂದೇಟು – ಬೃಹತ್ ಪ್ರತಿಭಟನೆಯ (DC ಕಚೇರಿ ಚಲೋ ) ಎಚ್ಚರಿಕೆ
ಮೀನು ಮಾರಾಟಗಾರರಾದ ಅಶೋಕ್, ಮೋಹನ್ ಮತ್ತು ಮಹೇಶ್ ಬಂಡಾರಿ ಎಂಬವರ ಮೇಲೆ 5 ಬೈಕ್ ಗಳಲ್ಲಿ ಬಂದ PFI ಕಾರ್ಯಕರ್ತರು ತಲವಾರಿನಿಂದ ಕೊಲೆ ಮಾಡಲು ಪ್ರಯತ್ನ ಪ್ರಕರಣದಲ್ಲಿ 3 ಜನರನ್ನು ಮಾತ್ರ ಬಂಧಿಸಿದ್ದು ಇನ್ನೂ 10 ಪ್ರಮುಖ ಆರೋಪಿಗಳ ಬಂಧನವಾಗಿಲ್ಲ. ತಲವಾರು ಹಿಡಿದು ಕೊಲೆ ಮಾಡಲು ಪ್ರಯತ್ನಿಸಿದ ಪ್ರಮುಖ ಆರೋಪಿಗಳಾದ PFI ಕಾರ್ಯಕರ್ತರಾದ ಅಜೀಜ್, ತಸ್ಲೀಮ್, ಸರ್ಫುದ್ದೀನ್, ಮುಸ್ತಫಾ, ರಫೀಕ್, ಆನ್ಸರ್ ಪೆರ್ನೆ, ಇರ್ಫಾನ್ ಕೋಲ್ಪೆ, ಸಿದ್ದಿಕ್ ನೆಲ್ಯಾಡಿ, ನೌಫಾಲ್ ಪೆರ್ನೆ ರವರನ್ನು ಇನ್ನೂ ಬಂಧನ ಮಾಡಿಲ್ಲ, ಅಷ್ಟು ಮಾತ್ರವಲ್ಲ ಪೊಲೀಸ್ ಠಾಣೆಗೆ ದಾಳಿ ನಡೆಸಿ ಪ್ರಕರಣದಲ್ಲಿ ಕೇವಲ 10 ಜನರನ್ನು ಬಂಧಿಸಿದ್ದು ನೂರಾರು ಜನರ ಬಂಧನವಾಗಬೇಕಾಗಿದೆ, ಆರೋಪಿಗಳು ಮಂಗಳೂರು ನಗರದ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಅರೋಗ್ಯ ಸುಳ್ಳು ನೆಪವೊಡ್ಡಿ ದಾಖಲಾಗಿದ್ದು ಅವರನ್ನು ಬಂಧಿಸುವ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸ್ ಇಲಾಖೆ SDPI – PFI ರವರ ಒತ್ತಡಕ್ಕೆ ಮಣಿದು ಎರಡು ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರು ದೇಶದ್ರೋಹಿ ಸಂಘಟನೆಯ ಒತ್ತಡಕ್ಕೆ ಮಣಿದು ಆರೋಪಿಗಳನ್ನು ಬಂದಿಸದ್ದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಹಿಂದೂ ಸಂಘಟನೆಗಳನ್ನು ಸೇರಿಸಿಕೊಂಡು ಬೃಹತ್ ಪ್ರತಿಭಟನೆಯ ಮುಖಾಂತರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತೇವೆ ಎಂದು ಎಚ್ಚರಿಸುತ್ತಾ, ಎಲ್ಲಾ ಆರೋಪಿಗಳನ್ನು ಬಂಧಿಸಿ ಇವರಿಗೆ ಕುಮ್ಮಕ್ಕು ನೀಡುತ್ತಿರುವ PFI – SDPI ಮುಖಂಡರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತದೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English