ಮಂಗಳೂರು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಹಾಲು ಸಂಗ್ರಹಣೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದ್ದು, ಮೌಲ್ಯವರ್ಧಿತ ಉತ್ಪನ್ನಗಳನ್ನು ಗ್ರಾಹಕರ ಬೇಡಿಕೆಗನುಗುಣವಾಗಿ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಹಾಲು ಉತ್ಪಾದಕರ ಹಾಲಿಗೆ ಹೆಚ್ಚಿನ ಮೌಲ್ಯ ನೀಡಲು ಶ್ರಮಿಸುತ್ತಿದೆ. ಒಕ್ಕೂಟವು ಗ್ರಾಹಕರಿಗೆ ಈಗಾಗಲೇ ನಂದಿನಿ ಸಿಹಿ ಉತ್ಪನ್ನಗಳಾದ ಪೇಡಾ, ಮೈಸೂರು ಪಾಕ್, ಬೈಟ್, ಕ್ಯಾಶು ಬರ್ಫಿ ಸ್ಥಳೀಯವಾಗಿ ಉತ್ಪಾದಿಸಿ ಮಾರಾಟ ಮಾಡುತ್ತಿದ್ದು, ಸದರಿ ಸಿಹಿ ಉತ್ಪನ್ನಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ. ಇದರೊಂದಿಗೆ ನೂತನ ಗೋಧಿ ಲಾಡು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಗ್ರಾಹಕರು ಖರೀದಿಸಿ, ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಕೋರಿದೆ.
ನಂದಿನಿ ಗೋಧಿ ಲಾಡು ಅತ್ಯುತ್ತಮ ಗುಣಮಟ್ಟದ ಗೋಧಿ ಹುಡಿ, ಶುದ್ಧ ತುಪ್ಪ, ಸಕ್ಕರೆ, ಏಲಕ್ಕಿ, ಗೋಡಂಬಿ, ಕೆನೆಭರಿತ ಹಾಲಿನ ಹುಡಿ ಬಳಸಿ ಆಧುನಿಕ ತಾಂತ್ರಿಕತೆಯಿಂದ ತಯಾರಿಸಲಾಗಿದ್ದು, ಬಿಡುಗಡೆಯ ಪೂರ್ವ ಮಾರುಕಟ್ಟೆ ಪರೀಕ್ಷಾ ಸಂದರ್ಭದಲ್ಲಿ ಗೋಧಿ ಲಾಡು ಉತ್ಪನ್ನದ ಗುಣಮಟ್ಟಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿರುತ್ತದೆ. ಎಲ್ಲಾ ಸುಸಂದರ್ಭಗಳಲ್ಲಿ ಉಡುಗೊರೆಯಾಗಿ ನೀಡಲು ಹಾಗೂ ಬಳಸಲು ಯೋಗ್ಯವಾಗಿದೆ ಎಂದು ಒಕ್ಕೂಟದ ಅಧ್ಯಕ್ಷರಾದ ಶ್ರೀ ರವಿರಾಜ ಹೆಗ್ಡೆ ಕೊಡವೂರುರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Click this button or press Ctrl+G to toggle between Kannada and English