ರಾಮನಗರ : ಚಿಲುಮೆ ಮಠದ ಪೀಠಾಧಿಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದರ ಬಗ್ಗೆ ಅವರ ಭಕ್ತರ ವಲಯದಲ್ಲಿ ಅನುಮಾನ ವ್ಯಕ್ತವಾಗಿದೆ.
ಆತ್ಮಹತ್ಯೆ ಮಾಡಿಕೊಂಡ 58 ವರ್ಷದ ಬಸವಲಿಂಗ ಸ್ವಾಮಿಗಳು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ ಚಿಲುಮೆ ಮಠದ ಗೋಡೆಗೆ ಅಳವಡಿಸಿದ್ದ ಕಬ್ಬಿಣದ ಗ್ರಿಲ್ ಗೆ ನೇಣು ಬಿಗಿದುಕೊಂಡು ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಣ್ಣ ಎಂಬುವರು ಮಠದಲ್ಲಿ ಇದ್ದ ದನ ಕರುಗಳನ್ನ ಕಟ್ಟಿ ಹಾಕಲು ಬಂದಿದ್ದರು. ಈ ವೇಳೆ ಸ್ವಾಮಿಜಿ ಯವರನ್ನು ಕರೆದಾಗ ಬರದೇ ಇದ್ದಾಗ, ಮಠದ ಒಳಗೆ ಹೋಗಿ ನೋಡದಾಗ ಬಸವಲಿಂಗ ಸ್ವಾಮೀಜಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಇದ್ದರು. ತಕ್ಷಣ ಪಕ್ಕದ ಬಂಡೆ ಮಠದ ಸ್ವಾಮೀಜಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಶವವನ್ನ ಹೊರಕ್ಕೆ ತೆಗೆಸಿದ್ದಾರೆ.
ಸ್ವಾಮೀಜಿಗಳ ಆರೋಗ್ಯ ಸರಿ ಇರಲಿಲ್ಲ. ಇದರಿಂದಾಗಿ ಸ್ವಾಮೀಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಮಠದಲ್ಲಿ ಹೇಳಿಕೊಳ್ಳುವಷ್ಟು ಕೆಲಸಗಾರರು ಕೂಡ ಇರಲಿಲ್ಲ ಹಾಗಾಗಿ ಮಠದಲ್ಲಿನ ಕೆಲಸಗಳನ್ನ ಸ್ವತಃ ಬಸವಲಿಂಗ ಸ್ವಾಮಿಗಳೇ ಮಾಡುತ್ತಿದ್ದರು.
ಸ್ವಾಮೀಜಿಯವರ ಸಾವಿನ ಬಗ್ಗೆ ಅವರ ಸಹೋದರ ಹೊನ್ನಸ್ವಾಮಯ್ಯಅನುಮಾನ ವ್ಯಕ್ತ ಪಡಿಸಿದ್ದು, ನಮಗೆ ಇದು ಅನುಮಾನ ಮೂಡುತ್ತಿದೆ. ಅವರೇ ಹಿಂದಿನ ದಿನ ಪೂಜೆ ಮಾಡಿ ಚಟುವಟಿಕೆಯಿಂದ ಇದ್ದರು. ಆದರೆ ಯಾವುದೇ ಕಾರಣ ಇಲ್ಲದೆ ಆತ್ಮಹತ್ಯೆ ಮಡ್ಡಿಕೊಂಡಿರುವುದರ ಬಗ್ಗೆ ಅನುಮಾನ ಇದೆ ಎಂದಿದ್ದಾರೆ.
ಕುದೂರು ಪೊಲೀಸರು ಮತ್ತು ಜಿಲ್ಲಾ ಎಸ್.ಪಿ ಎಸ್. ಗಿರೀಶ್ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಎಸ್ಪಿ ಎಸ್.ಗಿರೀಶ್ ಮಾತನಾಡಿ, ಈಗ ಅವರ ಕುಟುಂಬದ ಸದಸ್ಯರು ದೂರು ನೀಡಿದ್ದಾರೆ. ನಾವು ಮುಂದಿನ ತನಿಖೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಚಿಲುಮೆ ಮಠದ ಶ್ರೀ ಬಸವಲಿಂಗ ಸ್ವಾಮಿಗಳು ಮಾನಸಿಕ ಖಿನ್ನತೆಗೆ ಒಳಗಾಗಿ ಸಾವನ್ನಪ್ಪಿರ ಬಹುದು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಪ್ರಕರಣ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಆದರೆ ಸ್ವಾಮೀಜಿಯವರ ಸಾವಲ್ಲಿ ಹಲವು ಅನುಮಾನಗಳೂ ಇವೆ. ಇನ್ನು ಸ್ವಾಮೀಜಿ ಮೃತದೇಹವನ್ನ ಬೆಂಗಳೂರಿನ ಆರ್.ಆರ್. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
Click this button or press Ctrl+G to toggle between Kannada and English