ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದ ಪದವಿ ಪ್ರದಾನ

3:37 PM, Wednesday, December 22nd, 2021
Share
1 Star2 Stars3 Stars4 Stars5 Stars
(No Ratings Yet)
Loading...

periya-convocationಕಾಸರಗೋಡು : ಶಾಲಾ-ಕಾಲೇಜುಗಳು ದೇಶದ ಭವಿಷ್ಯ ರೂಪಿಸುವ ವೇದಿಕೆಗಳಾಗಿದ್ದು, ಜ್ಞಾನದಿಂದ ಬೆಳಗುವ ಶ್ರೀ ನಾರಾಯಣ ಗುರುಗಳ ವಚನಗಳು ಎಲ್ಲರಿಗೂ ಸ್ಫೂರ್ತಿ ಎಂದ ಅವರು ತಮ್ಮ ಭಾಷಣದಲ್ಲಿ ಕೇರಳದ ಸಾಕ್ಷರತೆ, ಶಿಕ್ಷಣ ಮತ್ತು ಮಹಿಳಾ ಶಿಕ್ಷಣವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶ್ಲಾಘಿಸಿದರು.

ಮಂಗಳವಾರ ಪೆರಿಯ ತೇಜಸ್ವಿನಿ ಹಿಲ್ಸ್‌ನಲ್ಲಿ ನಡೆದ ಕೇಂದ್ರೀಯ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದ ಪದವಿ ಪ್ರದಾನ ನೆರವೇರಿಸಿ ಮಾತನಾಡಿ, ಶ್ರೀ ನಾರಾಯಣ ಗುರುಗಳ ‘ಮಹಾ ಕವಿ ವಲ್ಲತ್ತೋಳ್ ಅವರಿಂದ ಜ್ಞಾನೋದಯ’ ತಾಯಿಯ ವಂದನೆಗಳು ಎಂಬ ಕವಿತೆಯನ್ನು ಪ್ರಸ್ತಾಪಿಸಿದರು.

ಕೋವಿಡ್ ಆರಂಭದಲ್ಲಿ ಕಳೆದ ವರ್ಷ ಶಿಕ್ಷಣದ ಮೇಲೆ ಪರಿಣಾಮ ಬೀರಿತ್ತು, ಆದರೆ ತಾಂತ್ರಿಕ ಪರಿಹಾರಗಳನ್ನು ಕಡಿಮೆ ಅವಧಿಯಲ್ಲಿ ಈ ಕೊರತೆಯನ್ನು ನೀಗಿಸಲು ಸಾಧ್ಯವಾಗಿದೆ.

ಕೋವಿಡ್ ಸೋಂಕು ದೇಶವು ಎದುರಿಸುತ್ತಿರುವ ಬಹುದೊಡ್ಡ ಸವಾಲಾಗಿದೆ. ವೈರಸ್‌ನ ಹೊಸ ರೂಪಾಂತರಗಳು ಹೊರಹೊಮ್ಮುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ನಮ್ಮ ವಿಜ್ಞಾನಿಗಳು ಹೆಚ್ಚಿನ ಸಂಶೋಧನೆಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ವೈದ್ಯರು ಮತ್ತು ವಿಜ್ಞಾನಿಗಳ ಸೇವೆ ಹಾಗೂ ಕೊಡುಗೆ ದೇಶಕ್ಕೆ ಅಭಿಮಾನ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.

ಭಾರತದಲ್ಲಿ ಸಾಕ್ಷರತೆ, ಶಿಕ್ಷಣ ಮತ್ತು ಸಬಲೀಕರಣದಲ್ಲಿ ಕೇರಳ ಇತರ ರಾಜ್ಯಗಳಿಗಿಂತ ಬಹಳ ಮುಂದಿದೆ. ಕೇರಳದಿಂದ ತ್ರಿಶೂರ್ ಮತ್ತು ನಿಲಂಬೂರ್ ಯುನೆಸ್ಕೋ ಗ್ಲೋಬಲ್ ನೆಟ್‌ವರ್ಕ್‌ನಲ್ಲಿ ಸೇರಿವೆ. ಕೇರಳೀಯರಲ್ಲಿ ಸಾಕ್ಷರತೆಯನ್ನು ಹೆಚ್ಚಿಸಲು ಪಿ.ಎನ್.ಪಣಿಕ್ಕರ್ ಅವಿರತವಾಗಿ ಶ್ರಮಿಸಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಕೇರಳದಲ್ಲಿ ಮುಂದೊಂದು ದಿನ ರಾಜಧಾನಿಯಲ್ಲಿ ಪಿ.ಎನ್.ಪಣಿಕ್ಕರ್ ಅವರ ಪ್ರತಿಮೆ ಅನಾವರಣಗೊಳ್ಳಲಿದೆ. ಮಹಾನ್ ಋಷಿ ಮತ್ತು ಸಮಾಜ ಸುಧಾರಕರಾದ ಶ್ರೀ ನಾರಾಯಣ ಗುರುಗಳು ಯಾವಾಗಲೂ ಜ್ಞಾನದ ಮಹತ್ವದ ಬಗ್ಗೆ ಮಾತನಾಡುತ್ತಾರೆ. ‘ಅವರ ಸಾಲುಗಳು’ ಜ್ಞಾನದೊಂದಿಗೆ ಜ್ಞಾನೋದಯ’ ಯಾವಾಗಲೂ ಸ್ಫೂರ್ತಿ. ಭಾರತವು ನಳಂದ ಮತ್ತು ತಕ್ಷಶಿಲಾ ಸೇರಿದಂತೆ ಶಿಕ್ಷಣದ ನಾಡು. ಆರ್ಯಭಟ, ಭಾಸ್ಕರಾಚಾರ್ಯ ಮತ್ತು ಪಾಣಿನಿ ಯಾವಾಗಲೂ ಶಕ್ತಿ. ಗಾಂಧೀಜಿಯವರು ಸ್ಥಳೀಯ ಶಿಕ್ಷಣ ಪದ್ಧತಿಗೆ ಪ್ರೇರಣೆ ನೀಡಿದರು. 21ನೇ ಶತಮಾನವನ್ನು ಜ್ಞಾನದ ಶತಮಾನ ಎಂದು ಬಣ್ಣಿಸಲಾಗಿದೆ. ಜ್ಞಾನವು ಜಾಗತಿಕ ಸಮುದಾಯದಲ್ಲಿ ದೇಶದ ಸ್ಥಾನವನ್ನು ನಿರ್ಧರಿಸುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ , ಕೇರಳ ಸ್ಥಳೀಯಾಡಳಿತ ಸಚಿವ ಎಂ . ವಿ ಗೋವಿಂದನ್ ಮಾಸ್ಟರ್ ಉಪಸ್ಥಿತರಿದ್ದರು. ಪರೀಕ್ಷಾ ನಿಯಂತ್ರಕ ಡಾ.ಎಂ.ಮುರಳೀಧರನ್ ನಂಬಿಯಾರ್, ರಿಜಿಸ್ಟ್ರಾರ್ ಡಾ. ಎನ್. ಸಂತೋಷ್ ಕುಮಾರ್, ಪ್ರಭಾರ ಉಪಕುಲಪತಿ ಪ್ರೊ. ಕೆ.ಸಿ ಬೈಜು ಸ್ವಾಗತಿಸಿದರು.

2018-2020ನೇ ಸಾಲಿನ ಪದವಿಪ್ರದಾನ ಮಾಡಲಾಯಿತು. 29 ಮಂದಿಗೆ ಪದವಿ, 652 ಮಂದಿಗೆ ಸ್ನಾತಕೋತ್ತರ ಪದವಿ, 52 ಮಂದಿಗೆ ಪಿಎಚ್.ಡಿ ಹಾಗೂ ಒಂಬತ್ತು ಮಂದಿಗೆ ಪಿ.ಜಿ ಡಿಪ್ಲೊಮಾ ಪದವಿ ಪ್ರದಾನ ಮಾಡಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English