ಹೊಸ ವರ್ಷಾಚರಣೆ ಮತ್ತು ಪಾರ್ಟಿಗಳನ್ನು ನಿಷೇಧಿಸಲು ಮನವಿ

5:55 PM, Thursday, December 23rd, 2021
Share
1 Star2 Stars3 Stars4 Stars5 Stars
(No Ratings Yet)
Loading...

HJSಮಂಗಳೂರು  : ಹೊಸ ವರ್ಷಾಚರಣೆಯ ನೆಪದಲ್ಲಿ ಡಿಸೆಂಬರ್ 31 ರ ರಾತ್ರಿ ಹೊಸ ವರ್ಷಾಚರಣೆಯ ನೆಪದಲ್ಲಿ ಆಗುವ ಅಯೋಗ್ಯ ಆಚರಣೆ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡಲು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ಕಮಿಶನರ್ ಇವರಿಗೆ ಮನವಿ.

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹೊಸ ವರ್ಷಾಚರಣೆಯ ನೆಪದಲ್ಲಿ ಡಿಸೆಂಬರ್ 31 ರ ರಾತ್ರಿ ನಡೆಯುವ ಹೊಸ ವರ್ಷಾಚರಣೆ ಮತ್ತು ಪಾರ್ಟಿಗಳನ್ನು ನಿಷೇಧಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಶ್ರೀ ರಾಜೇಂದ್ರ ಮತ್ತು ಪೊಲೀಸ್ ಕಮಿಶನರ್ ಶ್ರೀ ಶಶಿ ಕುಮಾರ್ ಇವರಿಗೆ ಮನವಿಯನ್ನು ನೀಡಲಾಯಿತು. ಮನವಿಯಲ್ಲಿ ದೇಶದಾದ್ಯಂತ ಹೆಚ್ಚುತ್ತಿರುವ ಪಾಶ್ಚಾತ್ಯ ಕೆಟ್ಟ ರೂಢಿಗಳ ಅಂಧಾನುಕರಣೆಯಿಂದಾಗಿ ಹೊಸ ವರ್ಷದ ಹೆಸರಿನಲ್ಲಿ ಡಿಸೆಂಬರ್ 31 ರ ಮಧ್ಯರಾತ್ರಿ ಧೂಮಪಾನ, ಮದ್ಯಪಾನ, ಅಮಲು ಪದಾರ್ಥಗಳ ಸೇವನೆ, ಪಾರ್ಟಿಗಳ ಆಯೋಜನೆ ಮಾಡುವುದು ಹೆಚ್ಚಾಗಿರುತ್ತದೆ ಮತ್ತು ಈ ರಾತ್ರಿ ಮದ್ಯಪಾನ ಮಾಡಿ ಅತಿವೇಗದಿಂದ ವಾಹನಗಳನ್ನು ಓಡಿಸುವುದು ಹೆಚ್ಚಾಗಿದ್ದು, ಇವರಲ್ಲಿ ಸಣ್ಣವಯಸ್ಸಿನ ಯುವಕರು, ಯುವತಿಯರು ಮತ್ತು ಮಹಿಳೆಯರು ಸಹ ಇರುತ್ತಾರೆ. ಇದಲ್ಲದೇ ಇಂತಹ ಸಮಯದಲ್ಲಿ ಅನೇಕ ಮಹಿಳೆಯರ ಲೈಂಗಿಕ ಕಿರುಕುಳ, ಅತ್ಯಾಚಾರ ಮುಂತಾದ ಘಟನೆಗಳು ನಡೆಯುತ್ತಿದೆ. ಈಗ ಕೊರೋನಾ ಮಹಾಮಾರಿಯು 3ನೇ ಅಲೆ ಬರುವ ಸಾಧ್ಯತೆ ಇದೆ. ಹೀಗಿರುವಾಗ ಡಿಸೆಂಬರ್ 31 ರಂದು ಆಚರಿಸಲಾಗುವ ಪಾರ್ಟಿಯಿಂದ ಕೊರೋನಾದ ಸೊಂಕು ಹೆಚ್ಚು ಪ್ರಮಾಣದಲ್ಲಿ ಹರಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ಸಾರ್ವಜನಿಕರ ಆರೋಗ್ಯವನ್ನು ಅಪಾಯಕ್ಕೀಡು ಮಾಡುವುದು ಯೋಗ್ಯವಲ್ಲ. ಆದ್ದರಿಂದ ಡಿಸೆಂಬರ್ 31 ರಾತ್ರಿ ಹೊಸ ವರ್ಷಾಚರಣೆಯನ್ನು ಪೂರ್ಣವಾಗಿ ನಿಷೇಧಿಸಬೇಕು. ಇದಲ್ಲದೇ 31 ಡಿಸೆಂಬರ್‌ನಂದು ನಗರದಲ್ಲಿರುವ ಕೋಟೆಗಳು, ಪ್ರವಾಸಿತಾಣಗಳು, ಐತಿಹಾಸಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ಮದ್ಯ ಸೇವನೆಯನ್ನು ಮಾಡುವುದು ಪಾರ್ಟಿಗಳನ್ನು ಮಾಡುವುದರ ಮೇಲೆ ನಿಷೇಧ ಹೇರುವಂತೆ ಆದೇಶವನ್ನು ನೀಡಬೇಕು. ಎಂದು ಆಗ್ರಹಿಸಲಾಯಿತು.

ಈ ಸಂದ ರ್ಭದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯ ಕರಾದ ಶ್ರೀ. ಚಂದ್ರ ಮೊಗೇರ್, ಶ್ರೀ ಪ್ರಭಾಕರ ನಾಯಕ್. ಶ್ರೀ ಉಪೇಂದ್ರ. ಶ್ರೀ ಸುಧಾಕರ್. ಶಶಿಧರ್ ಬಾಳಿಗಾ. ಶ್ರೀ ಮಹೇಶ್,ಸೌ.ಪೂರ್ಣಿಮಾ,ಶ್ರೀ ಜಯಂತ್,ಶ್ರೀ ಪುಂಡಲೀಕ ಪೈ,ಶ್ರೀ ಸುರೇಶ ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English