ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ ನೂತನ ಸಮಿತಿಯ ಪದಗ್ರಹಣ

4:50 PM, Friday, December 24th, 2021
Share
1 Star2 Stars3 Stars4 Stars5 Stars
(No Ratings Yet)
Loading...

jaya Sri Krishna ಮುಂಬಯಿ : ಕಳೆದ ಎರಡು ದಶಕಗಳಿಂದ ಮಹಾನಗರದಲ್ಲಿ ಕ್ರೀಯಾಶೀಲವಾಗಿರುವ ವಿವಿಧ ಜಾತೀಯ ಸಂಘಟನೆಗಳ ಪ್ರಮುಖರನ್ನು ಒಳಗೊಂಡ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ ಯ ನೂತನ ಸಮಿತಿಯ ಪದಗ್ರಹಣ ಸಮಾರಂಭವು ಡಿ. 21ರಂದು ಸಂಜೆ ಕುರ್ಲಾದ ಬಂಟರ ಸಂಘ ಮುಂಬಯಿಯ ಅನೆಕ್ಸ್ ಸಭಾಂಗಣದಲ್ಲಿ ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿಯ ಸಂಸ್ಥಾಪಕ ತೊನ್ಸೆ ಜಯಕೃಷ್ಣ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಮಿತಿಯ ನೂತನ ಅಧ್ಯಕ್ಷರಾದ ಎಲ್. ವಿ. ಅಮೀನ್ ಅವರು ಮಾತನಾಡುತ್ತಾ ಉಡುಪಿ ಹಾಗೂ ಮಂಗಳೂರು ಪ್ರದೇಶಗಳು ಮೊದಲಿಗಿಂತಲೂ ಈಗ ಬಹಳ ಅಭಿವೃದ್ಧಿಯಾಗಿದ್ದು ಬಹುಮಡಿ ಕಟ್ಟಡಗಳು ಈ ಪ್ರದೇಶಗಳಲ್ಲಿ ಬಹಳಷ್ಟು ಕಾಣಬಹುದು ಈ ಪರಿಸರದ ಅನೇಕ ಸ್ಥಳಗಳಲ್ಲಿ ಸ್ಮಶಾನದ ಪರಿಸರದಲ್ಲಿ ಮಾಲಿನ್ಯವಾಗುತ್ತಿದ್ದು ಬಹುಮಡಿ ಕಟ್ಟಡಗಳಲ್ಲಿ ವಾಸಿಸುವ ಜನರಿಗೆ ಇದರಿಂದ ತೊಂದರೆಯಾಗುತ್ತದೆ. ಈ ಬಗ್ಗೆ ನಾವು ಚಿಂತಿಸಿ ಸರಕಾರದ ಗಮನಕ್ಕೆ ತರಲಿದ್ದೇವೆ. ಸಮಿತಿಯಲ್ಲಿ ಪ್ರಾರಂಭದಿಂದಲೇ ನಾನು ಇದ್ದು ಈ ಸಮಿತಿಯು ಮಾಜಿ ಅಧ್ಯಕ್ಷರುಗಳ ಕಾಲಾವಧಿಯಲ್ಲಿ ಕರಾವಳಿಯ ಅನೇಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದರು.

ನೂತನ ಪದಾಧಿಕಾರಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಿ ಮಾತನಾಡಿದ ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿಯ ಸಂಸ್ಥಾಪಕ ತೊನ್ಸೆ ಜಯಕೃಷ್ಣ ಶೆಟ್ಟಿ ಯವರು ಮಾತನಾಡುತ್ತಾ ಕಳೆದ ಎರಡು ದಶಕಗಳಿಂದ ನಮ್ಮ ಸಮಿತಿಯು ಕರಾವಳಿಯ ಜಿಲ್ಲೆಗಳಲ್ಲಿ ಹಲವಾರು ಕಾರ್ಯಗಳನ್ನು ಯಶಸ್ಸಿಯಾಗಿ ನೆರವೇರಿಸಿದೆ. ಅಡಾನಿಯಂತಹ ಸಂಸ್ಥೆಗಳು ಪರಿಸರ ಸುಧಾರಣೆಗಾಗಿ, ಸ್ಥಳೀಯ ಪರಿಸರದ ಅಭಿವೃದ್ಧಿಗಾಗಿ ಹಲವಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದು ಮಾತ್ರವಲ್ಲದೆ ಏಳು ಪಂಚಾಯತುಗಳ ವ್ಯಾಪ್ತಿಯಲ್ಲಿನ ಅಭಿವೃದ್ದಿಗಾಗಿ ಪಂಚಾಯತುಗಳಿಗೆ ಕೊಟ್ಯಂತರ ರೂಪಾಯಿ ಖರ್ಚು ಮಾಡಿದ್ದು ಇದೆಲ್ಲಾ ಸಮಿತಿಯ ಪರಿಶ್ರಮದಿಂದ ಸಾಧ್ಯವಾಗಿದೆ. ಒಂದು ವರ್ಷದ ಅವಧಿಯಲ್ಲಿ ಪರಿಸರದ ಸುಧಾರಣೆಯನ್ನು ಅಲ್ಲಿ ನಾವು ಕಂಡಿದ್ದೇವೆ. ಸಮಿತಿಯ ಪ್ರಯತ್ನದಿಂದಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿದೆ. ಅಂತರಾಷ್ಟ್ರೀಯ ವಿಮಾನಗಳು ತಡರಾತ್ರಿ ಲ್ಯಾಂಡ್ ಆಗುವ ಬಗ್ಗೆ ನಮ್ಮ ಪ್ರಯತ್ನ ಫಲಕಾರಿಯಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಥಮ ಅಂತಾರಾಷ್ಟ್ರೀಯ ವಿಮಾನ ಆಗಮಿಸಿದ ಸಂದರ್ಭದಲ್ಲಿ ಸಾವಿರಾರು ಜನರು ಆಗಮಿಸಿದ್ದು ಆಗ ರಾಜ್ಯದ ಹಾಗೂ ರಾಷ್ಟ್ರದ ಅನೇಕ ಮಂತ್ರಿಗಳು ಆಗಮಿಸಿದ್ದರು. ತನ್ನ ಬಾಷಣದಲ್ಲಿ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಪ್ರಮುಖರು ಕೇವಲ ನಮ್ಮ ಸಮಿತಿ ಹೆಸರನ್ನು ಮಾತ್ರ ಹೇಳಿದ್ದನ್ನು ಈ ಸಂದರ್ಭದಲ್ಲಿ ನಿಮ್ಮೆಲ್ಲರ ಗಮನಕ್ಕೆ ತರಲಿಚ್ಚಿಸುವೆನು ಎನ್ನುತ್ತಾ ನಮ್ಮ ಕರಾವಳಿಯಲ್ಲಿ ಯವುದೇ ಮತ ಬೇದಗಳಿಲ್ಲದಂತೆ ನಾವು ನೋಡಿಕೊಳ್ಳಬೇಕಾಗಿದೆ. ನಮ್ಮ ಸಮಿತಿಯಲ್ಲಿ ಎಲ್ಲಾ ಸಮುದಾಯದವರು ಇದ್ದಾರೆ. ನಮಗೆ ಏಕತೆ ಮುಖ್ಯ ಎನ್ನುತ್ತಾ ಸಮಿತಿಯ ಸಾಧನೆಗಳನ್ನು ವಿವರಿಸುತ್ತಾ ನೂತನ ಅಧ್ಯಕ್ಷರಾದ ಎಲ್. ವಿ ಅಮೀನ್ ಅವರ ನೇತೃತ್ವದಲ್ಲಿ ಸಮಿತಿಯ ಎಲ್ಲಾ ಸದಸ್ಯರ ಪ್ರೋತ್ಸಾಹದಿಂದ ಜಿಲ್ಲೆಗಳ ಅಭಿವೃದ್ದಿಗಾಗಿ ಹಲವಾರು ಪ್ರಗತಿಪರ ಕಾರ್ಯಗಳು ನಡೆಯಲಿದೆ ಎಂದರು.

jaya Sri Krishna ನೂತನ ಸಮಿತಿಗೆ ಉಪಾಧ್ಯಕ್ಷರುಗಳಾಗಿ ಎನ್ ಡಿ ಕೋಟ್ಯಾನ್ (ಮಾಜಿ ಅಧ್ಯಕ್ಷರು ಬಿಲ್ಲವರ ಅಸೋಷಿಯೇಶನ್ ಮುಂಬಯಿ). ಸಿ ಎ ಐ.ಆರ್ ಶೆಟ್ಟಿ (ಮಾಜಿ ಅಧ್ಯಕ್ಷರು ಜವಾಬ್) ಚಂದ್ರಶೇಖರ್ ಬೆಲ್ಚಡ (ಮಾಜಿ ಅಧ್ಯಕ್ಷರು ತೀಯಾ ಸಮಾಜ ಮುಂಬಯಿ) ಜಿಟಿ ಆಚಾರ್ಯ (ಮಾಜಿ ಅಧ್ಯಕ್ಷರು ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮುಂಬಯಿ) ಕೆ ಎಲ್ ಬಂಗೇರ (ಅಧ್ಯಕ್ಷರು ಮೊಗವೀರ ವ್ಯವಸ್ಥಾಪಕ ಮಂಡಳಿ) ಹಿರಿಯಡ್ಕ ಮೋಹನ್ ದಾಸ್ (ಮಾಜಿ ಅಧ್ಯಕ್ಷರು ದೇವಾಡಿಗ ಸಂಘ ಮುಂಬೈ) ನ್ಯಾಯವಾದಿ ಆರ್ ಎನ್ ಬಂಡಾರಿ (ಅಧ್ಯಕ್ಷರು ಭಂಡಾರಿ ಸೇವಾ ಸಂಘ ಮುಂಬೈ) ಡಾ. ಆರ್ ಕೆ ಶೆಟ್ಟಿ (ಗೌರವ ಪ್ರಧಾನ ಕಾರ್ಯದರ್ಶಿ ಬಂಟರ ಸಂಘ ಮುಂಬಯಿ) ಗಿರೀಶ್ ಬಿ ಸಾಲ್ಯಾನ್( ಮಾಜಿ ಅಧ್ಯಕ್ಷರು ಕುಲಾಲ ಸಂಘ ಮುಂಬಯಿ) ಜಿತೇಂದ್ರ ಗೌಡ (ಅಧ್ಯಕ್ಷರು ಮಹಾರಾಷ್ಟ್ರ ಒಕ್ಕಲಿಗರ ಸಂಘ ಮುಂಬೈ) ಫ್ರಾಂಕ್ ಫರ್ನಾಂಡಿಸ್ (ಕ್ಯಾಥಲಿಕ್ ಸಮಾಜದ ಮುಖಂಡರು) ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸುರೇಂದ್ರ ಸಾಲಿಯಾನ್ ಮುಂಡ್ಕೂರು, ಶ್ರೀನಿವಾಸ ಸಾಫಲ್ಯ (ಮಾಜಿ ಅಧ್ಯಕ್ಷರು ಸಾಫಲ್ಯ ಸೇವಾ ಸಂಘ ಮುಂಬೈ) ಗೌರವ ಕಾರ್ಯದರ್ಶಿ ರವಿ ಎಸ್ ದೇವಾಡಿಗ (ಅಧ್ಯಕ್ಷರು ದೇವಾಡಿಗ ಸಂಘ ಮುಂಬೈ) ಹ್ಯಾರಿ ಸಿಕ್ವೇರಾ (ಅಧ್ಯಕ್ಷರು ಕೊಂಕಣಿ ವೆಲ್ಫೇರ್ ಆಫೀಸ್ ಸ್ಟೇಷನ್ ಮುಂಬೈ) ಮುನಿರಾಜ್ ಜೈನ್ (ಅಧ್ಯಕ್ಷರು ಜೈನ ಸೇವಾ ಸಂಘ ಮುಂಬೈ) ಪಿ ದೇವದಾಸ್ ಕುಲಾಲ್ (ಅಧ್ಯಕ್ಷರು ಕುಲಾಲ ಸಂಘ ಮುಂಬಯಿ) ಗೌರವ ಕೋಶಾಧಿಕಾರಿ ತುಳಸಿದಾಸ್ ಅಮೀನ್( ಬಿಲ್ಲವ ಸಮಾಜದ ನಾಯಕ) . ಜೊತೆ ಕೋಶಧಿಕಾರಿ ಸದಾನಂದ ಆಚಾರ್ಯ (ಅಧ್ಯಕ್ಷರು ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮುಂಬೈ). ಸಂಜೀವ ಪೂಜಾರಿ ತೋನ್ಸೆ( ಗೌರವ ಕಾರ್ಯದರ್ಶಿ ತೋನ್ಸೆ ಗರಡಿ ಮುಂಬೈ ಸಮಿತಿ) ಸಲಹೆಗಾರರಾಗಿ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಕಡಂದಲೆ ಪರಾರಿ ನ್ಯಾಯವಾದಿ ಪ್ರಕಾಶ ಶೆಟ್ಟಿ. ವಿಶ್ವನಾಥ ಮಾಡ. ನ್ಯಾಯವಾದಿ ಸುಭಾಷ್ ಶೆಟ್ಟಿ ಹರೀಶ್ ಕುಮಾರ್ ಶೆಟ್ಟಿ, ಧರ್ಮಪಾಲ್ ದೇವಾಡಿಗ. ಜಿಲ್ಲೆಯ ಉಪಾಧ್ಯಕ್ಷರು ಗಳಾಗಿ ಜಗದೀಶ್ ಅಧಿಕಾರಿ ರಾಮಚಂದ್ರ ಬೈಕಂಪಾಡಿ ಪೆಲಿಕ್ಸ್ ಡಿಸೋಜ.. ನ್ಯಾಯವಾದಿ ಮೊಯ್ದೀನ್ ಮುಂಡ್ಕೂರು, ಕಾರ್ಯದರ್ಶಿಯಾಗಿ ಜೂ. ಶಂಕರ್ ಜೊತೆ ಕಾರ್ಯದರ್ಶಿಯಾಗಿ ಸುರೇಂದ್ರ ಮೆಂಡನ್. ಶೇಖರ್ ಗುಜ್ಜರಬೆಟ್ಟು. ಸದಸ್ಯರುಗಳಾಗಿ ಡಾಕ್ಟರ್ ಪ್ರಭಾಕರ್ ಶೆಟ್ಟಿ, ಎಂ ಎನ್ ಕರ್ಕೇರಾ ( ಯು ಎಸ್ ಎ) ದಯಾಸಾಗರ್ ಚೌಟ. ಶಾಮ್ ಎನ್ ಶೆಟ್ಟಿ. ಡಾ ವಿರಾರ್ ಶಂಕರ್ ಶೆಟ್ಟಿ.. ನ್ಯಾಯವಾದಿ ದಯಾನಂದ ಶೆಟ್ಟಿ. ಕರುಣಾಕರ್ ಹೆಜಮಾಡಿ. ಬಾಲಕೃಷ್ಣ ಭಂಡಾರಿ. ವಾಸು ದೇವಾಡಿಗ. ವಿಜಯಕುಮಾರ್ ಶೆಟ್ಟಿ ತೋನ್ಸೆ. ಡಾ ಸುರೇಂದ್ರ ಕುಮಾರ್ ಹೆಗಡೆ. ರಮಾನಂದ ರಾವ್. ರಾಮಚಂದ್ರ ಗಾಣಿಗ. ಉತ್ತಮ್ ಶೆಟ್ಟಿಗಾರ್ ಶ್ರೀನಿವಾಸ್ ಸಪಲಿಗ. ಕೆ ಎಂ ಕೋಟ್ಯಾನ್ ಚಿತ್ರಾಪು. ರಾಕೇಶ್ ಭಂಡಾರಿ, ಜಯಪ್ರಕಾಶ್ ಹೆಗ್ಡೆ, ದಿವಕರ್ ಶೆಟ್ಟಿ, ಅಡ್ವಕೇಟ್ ಶಶಿಧರ್ ಕಾಪು ಆಯ್ಕೆಯಾಗಿದ್ದಾರೆ.

ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English