ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

8:29 PM, Wednesday, December 29th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Kalikambaಮಂಗಳೂರು : ವಿಶ್ವಬ್ರಾಹ್ಮಣ ಸಮಾಜದ ಕರಾವಳಿ ಕರ್ನಾಟಕದ ಪವಿತ್ರ ಕ್ಷೇತ್ರ ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ 14.01.2022 ರಿಂದ 26.01.2022 ರ ವರೆಗೆ ನೂತನ ಶಿಲಾಮಯ ಸುತ್ತು ಪೌಳಿ ಸಮರ್ಪಣೆ, ಶ್ರೀ ಶಿವ, ಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠೆ, ಶ್ರೀ ಕಾಳಿಕಾಂಬಾ ವಿನಾಯಕ ದೇವರಿಗೆ ಅಷ್ಟಬಂಧ ಬ್ರಹ್ಮಕಲಶ,  ಶತಚಂಡಿಕಾಯಾಗವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಲಕ್ಷ್ಮೀಕಾಂತ ಶರ್ಮ, ಸಾಲಿಗ್ರಾಮ ಇವರ ಆಚಾರ್ಯತ್ವದಲ್ಲಿ ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ್ ಕೆ ಕೇಶವ ಆಚಾರ್ಯ ಹೇಳಿದರು.

ಕ್ಷೇತ್ರದ ಹಿನ್ನೆಲೆ
ಮಂಗಳೂರು ನಗರದ ಹೃದಯಭಾಗ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನವು ಸಹಸ್ರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು ವಿಶ್ವಬ್ರಾಹ್ಮಣ ಬಾಂಧವರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಶ್ರೀ ವಿನಾಯಕ,  ಶ್ರೀ ಕಾಳಿಕಾಂಬೆ, ಶ್ರೀ ವಿಶ್ವಕರ್ಮ, ಶ್ರೀ ವೀರಭದ್ರ, ಶ್ರೀ ನಾಗಲಿಂಗ ಸ್ವಾಮಿ, ಶ್ರೀ ನಾಗ, ಪಂಜುರ್ಲಿ, ಗುಳಿಗ ದೈವ ಸಾನಿಧ್ಯ ಹೊಂದಿರುತ್ತದೆ.  ಶ್ರೀ ಕ್ಷೇತ್ರದಲ್ಲಿ ಯುಗಾದಿ ಮಹೋತ್ಸವ ಮೊದಲ್ಗೊಂಡು ವಿವಿಧ ಮಹೋತ್ಸವಗಳನ್ನು ಕ್ಷೇತ್ರದ ಸಂಪ್ರದಾಯದಂತೆ ನಡೆದುಕೊಂಡು ಬಂದಿರುತ್ತದೆ.

ಜೀರ್ಣೋದ್ದಾರ
ಕ್ಷೇತ್ರದಲ್ಲಿ ವಿವಿಧ ಹಂತಗಳಲ್ಲಿ ಜೀರ್ಣೋದ್ದಾರ ಕಾರ್ಯಗಳು ನೆರವೇರುತ್ತಾ ಬಂದಿದ್ದು 20 ವರ್ಷಗಳ ಹಿಂದೆ ಶ್ರೀ ವಿನಾಯಕ ಶ್ರೀ ಕಾಳಿಕಾಂಬೆಯ ಶಿಲಾಮಯ ಗರ್ಭಗುಡಿ ಪುನರ್ ನಿರ್ಮಾಣ ಗೊಂಡು ಸಹಸ್ರ ಕುಂಭಾಭಿಷೇಕ  ಹಾಗೂ 2015 ನೇ ಇಸವಿಯಲ್ಲಿ ನಾಗ ಸನ್ನಿಧಿ ಚಿತ್ರಕೂಟ, ಪಂಜುರ್ಲಿ ದೈವದ ಗುಡಿ, ಗುಳಿಗ ಸಾನಿಧ್ಯ ನಿರ್ಮಾಣ, ಬ್ರಹ್ಮಕಲಶಾಭಿಷೇಕ ಸಂಪನ್ನ ಗೊಂಡಿದ್ದು ಇದೀಗ ಕ್ಷೇತ್ರದ ಸುತ್ತು ಪೌಳಿ ಶಿಲಾಮಯವಾಗಿ  ಕಲಾತ್ಮಕವಾಗಿ ಹಾಗೂ ಕಾಷ್ಟ ಶಿಲ್ಪವೂ ಉತ್ತಮ ಕಲಾ ನೈಪುಣ್ಯತೆಯೊಂದಿಗೆ ನಿರ್ಮಾಣ ಗೊಂಡಿದೆ. ಶಿಲಾಮಯ  ಸುತ್ತುಪೌಳಿಯಲ್ಲಿ ನವದುರ್ಗೆಯರ ಹಾಗೂ ದಕ್ಷಿಣಾಮೂರ್ತಿ‌ಯ ವಿಗ್ರಹಗಳು ಅನಾವರಣಗೊಳ್ಳಲಿರುವವು.
Kalikamba
ಧಾರ್ಮಿಕ ಕಾರ್ಯ ಕ್ರಮ
16.01.2022 ರಂದು ಹೊರೆಕಾಣಿಕೆ ಮೆರವಣಿಗೆ,  17.01.2022 ನೂತನವಾಗಿ ನಿರ್ಮಾಣಗೊಂಡ ಉಪಗುಡಿಯಲ್ಲಿ ಶ್ರೀ ಶಿವ, ಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠೆ, ಸಂಜೆ ಶ್ರೀ ಕಾಳಿಕಾಂಬಾ ದೇವರ ಅಷ್ಟಬಂಧ, 22.1.2022 ರಂದು ನೂತನ ಶಿಲಾಮಯ ಸುತ್ತು ಪೌಳಿ ಸಮರ್ಪಣೆ ಗೊಳ್ಳಲಿದೆ. 23.01.2022 ರಂದು ಬ್ರಹ್ಮ ಕಲಶ,  26.01.2022 ರಂದು ಶತಚಂಡಿಕಾಯಾಗ ನಡೆಯಲಿದೆ.

ಶ್ರೀ ವಿನಾಯಕ, ಶ್ರೀ ಕಾಳಿಕಾಂಬಾ ದೇವರ ಗರ್ಭಗುಡಿಯ  ಶಿಖರ ಬೆಳ್ಳಿಯಲ್ಲಿ  ನಿರ್ಮಾಣ ಗೊಂಡು ಸುವರ್ಣ ಲೇಪಿತ ಶಿಖರ ಸಮರ್ಪಿಸಲಾಗುವುದು. ಜೀರ್ಣೋದ್ದಾರ  ಕಾಮಗಾರಿಯು ಊರ ಪರವೂರ ಸಮಾಜ ಬಾಂಧವರ, ಭಕ್ತಾಧಿಗಳ ಸಹಕಾರದೊಂದಿಗೆ ನಡೆಯುತ್ತಿದೆ.

ಶಿಲ್ಪಿಗಳು
Kalikamba
ಸುತ್ತುಪೌಳಿ ಶಿಲ್ಪ ನಿರ್ಮಾಣದ ಜವಾಬ್ದಾರಿ ಕಾರ್ಕಳದ ಶಿಲ್ಪಿ ಸತೀಶ್ ಆಚಾರ್ಯರು ವಹಿಸಿದ್ದು,‌ ಜೋಕಟ್ಟೆ ಪ್ರಭಾಕರ ವಾಸ್ತುಶಿಲ್ಪದ ಹೊಣೆಗಾರಿಕೆ  ನಿರ್ವಹಿಸುತ್ತಿದ್ದಾರೆ. ಆಶ್ವತ್ತಪುರ ಶಿವಪ್ರಸಾದ್ ಆಚಾರ್ಯ ಕಾಷ್ಟ ಶಿಲ್ಪದ ಕೆಲಸ ನಿರ್ವಹಿಸುತ್ತಿದ್ದಾರೆ.  ಧ್ವಜ ಮರದ ಕೆಲಸ ನಿರ್ಮಾಣ ಗೊಳ್ಳುತ್ತಿದೆ. ಷಡಾಧರ ಪ್ರತಿಷ್ಠೆ ಗೊಳ್ಳಲಿದೆ. ಹೊರಾoಗಣಕ್ಕೆ ಮೇಲ್ಚಾವಣಿ, ನೂತನ ಬ್ರಹ್ಮರಥ ಯೋಜನೆ ಒಳಗಂಡಂತೆ ಒಟ್ಟು ಎಲ್ಲಾ ಕಾಮಗಾರಿಗೆ ಅಂದಾಜು 10 ಕೋಟಿ ತಗಲಲಿದೆ. 14.01.2022 ರಿಂದ 26.01.2022 ರ ತನಕ ಪ್ರತೀ ದಿನ ಧಾರ್ಮಿಕ ವಿಧಿ ವಿಧಾನ, ಧಾರ್ಮಿಕ ಸಭೆಯು ಶ್ರೀಮತ್ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರ ದಿವ್ಯ ಉಪಸ್ಥಿತಿಯಲ್ಲಿ  ಹಾಗೂ ರಾಜಶ್ರೀ ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ, ಪದ್ಮಶ್ರೀ ವಿ. ಆರ್. ಗೌರಿಶಂಕರ್ ಮುಖ್ಯ ಆಡಳಿತಾಧಿಕಾರಿ ಶ್ರೀ ಶೃಂಗೇರಿ ಪೀಠಮ್ ಮತ್ತು ಇತರ ಧಾರ್ಮಿಕ, ಜನ ಪ್ರತಿನಿಧಿಗಳ, ಗಣ್ಯರ ಉಪಸ್ಥಿಯಲ್ಲಿ ನಡೆಯಲಿದ್ದು ಪ್ರತೀ ದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು  ಜರಗಲಿದೆ. ಭಕ್ತಾಧಿಗಳು ತ್ರಿಕರಣಪೂರ್ವಕವಾಗಿ ಭಾಗವಹಿಸಬೇಕಾಗಿ ಕ್ಷೇತ್ರದ ಆಡಳಿತ ಮಂಡಳಿ ಜೀರ್ಣೋದ್ದಾರ, ಬ್ರಹ್ಮ ಕಲಶೋತ್ಸವ ಸಮಿತಿಯ ಪರವಾಗಿ ಆಡಳಿತ ಮೊಕ್ತೇಸರ ಕೆ ಕೇಶವ ಆಚಾರ್ಯರು ನಗರದ ರಥಬೀದಿಯಲ್ಲಿರುವ ವಿಶ್ವಕರ್ಮ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ 29.12.21 ರಂದು ನಡೆದ  ಪತ್ರಿಕಾ ಗೋಷ್ಟಿಯಲ್ಲಿ  ತಿಳಿಸಿದ್ದಾರೆ. ಈ ಸಂದರ್ಭದಲ್ಲಿ  ಬ್ರಹ್ಮ ಕಲಶೋತ್ಸವದ ಆಮಂತ್ರಣವನ್ನು ಕ್ಷೇತ್ರದ ಆಡಳಿತ ಮೊಕ್ತೇಸರ್ ಕೆ ಕೇಶವ ಆಚಾರ್ಯ ಬಿಡುಗಡೆ ಗೊಳಿಸಿದರು

ಪತ್ರಿಕಾ ಗೋಷ್ಠಿ ಯಲ್ಲಿ  ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ, ಎರಡನೇ ಮೊಕ್ತೇಸರ್ ಸುಂದರ ಆಚಾರ್ಯ ಬೆಳುವಾಯಿ, ಮೂರನೇ ಮೊಕ್ತೇಸರ ಎ ಲೋಕೇಶ್ ಆಚಾರ್ಯ,  ಬ್ರಹ್ಮ ಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷರಾದ ನಾಗರಾಜ್ ಆಚಾರ್ಯ ಮಂಗಳಾದೇವಿ, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮ. ವೆಂಕಟೇಶ್ ಆಚಾರ್, ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಜೆ ಗುರುರಾಜ್ ಉಪಸ್ಥಿತರಿದ್ದರು. ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ  ಸುಜೀರ್ ವಿನೋದ್ ಕಾರ್ಯಕ್ರಮ ನಿರೂಪಿಸಿದರು

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English