ಕೋಟೆಕಾರು ಪಟ್ಟಣ ಪಂಚಾಯತ್‍ನ 17 ಸ್ಥಾನಗಳಲ್ಲಿ ಬಿಜೆಪಿ 11 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತ

8:28 PM, Thursday, December 30th, 2021
Share
1 Star2 Stars3 Stars4 Stars5 Stars
(No Ratings Yet)
Loading...

 

Kotekar panchayathಉಳ್ಳಾಲ :  ಡಿ.27ರಂದು ನಡೆದ ಚುನಾವಣೆಯ ಮತ ಎಣಿಕೆ ಇಂದು ಮಂಗಳೂರು ತಾಲೂಕು ಪಂಚಾ ಯತ್ ಸಭಾಂಗಣದಲ್ಲಿ ನಡೆಯಿತು. ಕೋಟೆಕಾರು ಪಟ್ಟಣ ಪಂಚಾಯತ್‍ನ 17 ಸ್ಥಾನಗಳಲ್ಲಿ ಬಿಜೆಪಿ 11 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಪಟ್ಟಣ ಪಂಚಾಯತ್ ಅಧಿಕಾರ ಮತ್ತೆ ಅಧಿಕಾರ ಪಡೆದಿದೆ.

ಬಿಜೆಪಿ ಈ ಬಾರಿ 11 ಸ್ಥಾನಗಳನ್ನು ಪಡೆದರೆ ಕಳೆದ ಬಾರಿ 4 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ 4 ಸ್ಥಾನಗಳನ್ನು ಉಳಿಸಿದೆ, ಒಂದು ಸ್ಥಾನ ಪಡೆದಿದ್ದ ಎಸ್‍ಡಿಪಿಐ ಒಂದೇ ಸ್ಥಾನವನ್ನು ಉಳಿಸಿಕೊಂಡಿದೆ. ಪ ಕ್ಷೇತರ ಅಭ್ಯರ್ಥಿ ಒಂದು ಸ್ಥಾನ, ಕಳೆದ ಬಾರಿ ಒಂದು ಸ್ಥಾನ ಪಡೆದಿದ್ದ ಸಿಪಿಐಎಂ ಈ ಬಾರಿ ಜಯಗಳಿಸಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ 17 ಸ್ಥಾನಗಳಲ್ಲಿ ಸ್ಪರ್ಧೆಯಲ್ಲಿದ್ದರೆ, ಎಸ್‍ಡಿಪಿಐ 6 ಸ್ಥಾನಗಳಲ್ಲಿ ಮೂರು ಸ್ಥಾನಗಳಲ್ಲಿ ಪಕ್ಷೇತರರು, ಸಿಪಿಐ ಎಂ 2ಸ್ಥಾನಗಳಲ್ಲಿ ಸ್ಪರ್ಧೆಯಲ್ಲಿದ್ದರು.

ವಾರ್ಡ್ 13- ಪನೀರ್ ಲ್ಲಿ‌ ಕಾಂಗ್ರೆಸ್ ಅಭ್ಯರ್ಥಿ ಸಫೀಯಾ 226 ಮತಗಳನ್ನು ಪಡೆದರೆ ವಿಜೇತ ಎಸ್ ಡಿಪಿಐ ಅಭ್ಯರ್ಥಿ ಸೆಲಿಮಾಬಿ ಹಸೀನಾ 229 ಮೂರು ಮತಗಳ ಅಂತರದಲ್ಲಿ ಜಯಗಳಿಸಿದರು.

ವಿಜೇತರ ವಿವರ : ವಾರ್ಡ್ 1: ಅಡ್ಕ ಕಾಳಿಕಾಂಬ ರಾಘವ ಗಟ್ಟಿ (ಬಿಜೆಪಿ), ವಾರ್ಡ್ 2 : ಕನೀರುತೊಟ, ಭವಾನಿ ದೇವದಾಸ್ (ಬಿಜೆಪಿ), ವಾರ್ಡ್ 3 : ಮಾಡೂರು ಸುಜಿತ್ ಮಾಡೂರು(ಬಿಜೆಪಿ), ವಾರ್ಡ್4 ; ಬಲ್ಯ ಕಿರಣ್ ಕುಮಾರ್ (ಬಿಜೆಪಿ), ವಾರ್ಡ್ 5 : ಬಗಂಬಿಲ ಸೈಟ್ ಪ್ರವೀಣ್ ಬಗಂಬಿಲ ( ಬಿಜೆಪಿ), ವಾರ್ಡ್ 6: ವೈದ್ಯನಾಥನಗರ ಬಗಂಬಿಲ ದಿವ್ಯಾ ಸತೀಶ್ (ಬಿಜೆಪಿ), ವಾರ್ಡ್ 7 : ಸುಳ್ಳಂಜೀರು, ಸಂಕೊಳಿಗೆ, ಉದಯ ಕುಮಾರ್ ಶೆಟ್ಟಿ (ಬಿಜೆಪಿ), ವಾರ್ಡ್ 8 :ತಾರಿಪಡ್ಪು ಇಸಾಕ್ (ಕಾಂಗ್ರೆಸ್), ವಾರ್ಡ್ 9 : ಶಾರದಾನಗರ, ಅನಿತಾ ನಾರಾಯಣ (ಬಿಜೆಪಿ), ವಾರ್ಡ್10: ಕುಶಾಲ್‍ನಗರ ಧೀರಾಜ್ ಕುಶಾಲ್‍ನಗರ(ಬಿಜೆಪಿ), ವಾರ್ಡ್ 11 : ಮಡ್ಯಾರ್ ಹರೀಶ್ ರಾವ್ (ಬಿಜೆಪಿ), ವಾರ್ಡ್ 12: ಜಲಾಲ್ ಭಾಗ್, ಆಯೇಷಾ ಜಲಾಲ್ಭಾಗ್ (ಕಾಂಗ್ರೆಸ್), ವಾರ್ಡ್ 13: ಪನೀರ್, ಸೆಲಿಮಾಬಿ ಹಸೀನಾ ಶಮೀರ್(ಎಸ್ ಡಿಪಿ ಐ), ವಾರ್ಡ್ 14: ಮಿತ್ರನಗರ ಜಗದೀಶ ಕೊಂಡಾಣ (ಬಿಜೆಪಿ), ವಾರ್ಡ್ 15 : ಕೊಂಡಾಣ, ನವೀನ್ ಕೊಂಡಾಣ (ಬಿಜೆಪಿ) ವಾರ್ಡ್ 16 : ಅಜ್ಜಿನಡ್ಕ, ಅಹ್ಮದ್ ಬಾವ ಕೋಟೆಕಾರು (ಕಾಂಗ್ರೆಸ್)), ವಾರ್ಡ್ 17 : ಕೋಮರಂಗಳ ಜುಬೈದಾ (ಕಾಂಗ್ರೆಸ್).

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English