ವಿಟ್ಲ ಪಟ್ಟಣ ಪಂಚಾಯತ್ 12 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ‌ ಬಿಜೆಪಿಗೆ ಅಧಿಕಾರ

8:56 PM, Thursday, December 30th, 2021
Share
1 Star2 Stars3 Stars4 Stars5 Stars
(No Ratings Yet)
Loading...

Vitla Town Panchayath ಬಂಟ್ವಾಳ : ವಿಟ್ಲ ಪಟ್ಟಣ ಪಂಚಾಯತ್ ನ 18 ಸ್ಥಾನಗಳಿಗೆ ನಡೆದ ಚುನಾವಣಾ ಮತ ಎಣಿಕೆ ಕಾರ್ಯ ಬಿ.ಸಿ.ರೋಡು ಮೊಡಂಕಾಪು ವಿನ ದೀಪಿಕಾ ಪ್ರೌಢಶಾಲೆಯಲ್ಲಿ ನಡೆದಿದ್ದು, 12 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ‌ ಬಿಜೆಪಿ ಅಧಿಕಾರ ಪಡೆದಿದೆ.

ಉಳಿದಂತೆ ಕಾಂಗ್ರೆಸ್ 5 ಸ್ಥಾನಗಳಲ್ಲಿ ಜಯಗಳಿಸಿದರೆ, ಎಸ್ ಡಿ ಪಿ ಐ ಒಂದು ಸ್ಥಾನ ಗೆಲ್ಲುವುದರ ಮೂಲಕ ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಖಾತೆ ತೆರೆದಿದೆ.

1ನೇ ವಾರ್ಡ್‌ನಲ್ಲಿ 828 ಮತ ಚಲಾವಣೆಯಾಗಿದ್ದು, ಕಾಂಗ್ರೆಸ್ ವಿ. ಕೆ. ಮಹಮ್ಮದ್ ಅಶ್ರಫ್ 425 ಮತಗಳನ್ನು ಪಡೆದು ಜಯಗಳಿಸಿದರೆ, ಬಿಜೆಪಿ ಕೃಷ್ಣಪ್ಪ ಗೌಡ 388 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. 15ಮತ ನೋಟಕ್ಕೆ ಚಲಾವಣೆಯಾಗಿದೆ.

2ನೇ ವಾರ್ಡ್ ನಲ್ಲಿ 608 ಮತಚಲಾವಣೆಯಾಗಿದ್ದು, ಬಿಜೆಪಿ ಸಂಗೀತ 316 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಕಮಲಾಕ್ಷಿ 192, ಎಸ್. ಡಿ. ಪಿ. ಐ. : ಆಯಿಷ ಎನ್. 92 ಮತ ಪಡದು ಸೋಲು ಕಂಡಿದ್ದಾರೆ. ನೋಟ 8 ಮತ ಚಲಾವಣೆಯಾಗಿದೆ.

3ನೇ ವಾರ್ಡ್ ನಲ್ಲಿ 637 ಮತಚಲಾವಣೆಯಾಗಿದ್ದು, ಬಿಜೆಪಿ ಸಿ. ಎಚ್. ಜಯಂತ 322 ಮತ ಪಡೆದು ಜಯ ಗಳಿಸಿದ್ದಾರೆ. ಕಾಂಗ್ರೆಸ್ ಶ್ರೀನಿವಾಸ ಶೆಟ್ಟಿ 310 ಮತದು ಸೋಲು ಕಂಡಿದ್ದಾರೆ. ನೋಟ 5 ಮತ ಚಲಾವಣೆಯಾಗಿದೆ.

4ನೇ ವಾರ್ಡ್ ನಲ್ಲಿ 578 ಮತಚಲಾವಣೆಯಾಗಿದ್ದು, ಬಿಜೆಪಿ ರಕ್ಷಿತ 301ಮತ ಗಳಿಸಿ ವಿಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ಆಯಿಷಾ 269ಮತ ಪಡೆದು ಸೋಲು ಕಂಡಿದ್ದಾರೆ. ನೋಟ 8ಮತ ಚಲಾವಣೆಯಾಗಿದ್ದಾರೆ.

5ನೇ ವಾರ್ಡ್ ನಲ್ಲಿ 578 ಮತಚಲಾವಣೆಯಾಗಿದ್ದು, ಬಿಜೆಪಿ ವಸಂತ ಕೆ. 314 ಮತ ಗಳಿಸಿ ಜಯಗಳಿಸಿದ್ದಾರೆ. ಕಾಂಗ್ರೆಸ್ ವಸಂತಿ 251 ಮತಗಳಿಸಿ ಸೋಲುಂಡಿದ್ದಾರೆ. ನೋಟ 13 ಮತ ಚಲಾವಣೆಯಾಗಿದೆ.

6ನೇ ವಾರ್ಡ್ ನಲ್ಲಿ 507 ಮತಚಲಾವಣೆಯಾಗಿದ್ದು, ಬಿಜೆಪಿ ವಿಜಯಲಕ್ಷ್ಮಿ 274 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಲೀಲಾವತಿ 226 ಮತ ಪಡೆದು ಸೋಲು ಕಂಡಿದ್ದಾರೆ. ನೋಟ 7 ಮತ ಚಲಾವಣೆಯಾಗಿದೆ.

7ನೇ ವಾರ್ಡ್ ನಲ್ಲಿ 659 ಮತಚಲಾವಣೆಯಾಗಿದ್ದು, ಬಿಜೆಪಿ ರವಿಪ್ರಕಾಶ್ ಯಸ್. 439 ಮತಗಳಿಸಿ ವಿಜಯಶಾಲಿಯಾದರು. ಕಾಂಗ್ರೆಸ್ ಶಿವಪ್ರಸಾದ್ ವಿ. 214 ಮತ ಪಡೆದು ಸೋಲು ಕಂಡಿದ್ದಾರೆ. ನೋಟ 6 ಮತ ಗಳಿಸಿದ್ದಾರೆ.

8ನೇ ವಾರ್ಡ್ ನಲ್ಲಿ 533 ಮತಚಲಾವಣೆಯಾಗಿದ್ದು, ಬಿಜೆಪಿ ಸುನೀತಾ 190 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಸುನೀತ ಕೊಟ್ಯಾನ್ 161, ಎಸ್. ಡಿ. ಪಿ. ಐ ರಝೀಯಾ 177 ಮತ ಪಡೆದು ಸೋಲುಕಂಡಿದ್ದಾರೆ. ನೋಟ 5 ಮತ ಪಡೆದಿದ್ದಾರೆ.

9ನೇ ವಾರ್ಡ್ ನಲ್ಲಿ 666 ಮತಚಲಾವಣೆಯಾಗಿದ್ದು, ಬಿಜೆಪಿ ಎನ್. ಕೃಷ್ಣ 395 ಮತ ಗಳಿಸಿ ವಿಜಯಿಯಾಗಿದ್ದಾರೆ. ಕಾಂಗ್ರೆಸ್ ಶಿವಪ್ರಸಾದ್ 266 ಮತ ಗಳಿಸಿ ಸೋಲು ಕಂಡಿದ್ದಾರೆ. ನೋಟ 5 ಮತ ಚಲಾವಣೆಯಾಗಿದೆ.

10ನೇ ವಾರ್ಡ್ ನಲ್ಲಿ 594 ಮತಚಲಾವಣೆಯಾಗಿದ್ದು, ಕಾಂಗ್ರೆಸ್ ಪದ್ಮಿನಿ 377 ಮತಗಳಿಸಿ ವಿಜಯವಾಗಿದ್ದಾರೆ. ಬಿಜೆಪಿ ಸುಮತಿ 214ಮತ ಪಡೆದು ಸೋಲು ಕಂಡಿದ್ದಾರೆ. ನೋಟ 3 ಮತ ಚಲಾವಣೆಯಾಗಿದೆ.

11ನೇ ವಾರ್ಡ್ ನಲ್ಲಿ 526 ಮತಚಲಾವಣೆಯಾಗಿದ್ದು, ಬಿಜೆಪಿ ಅರುಣ್ ಎಂ 288 ಮತಗಳನ್ನು ಪಡೆದು ಜಯಗಳಿಸಿದರೆ, ಕಾಂಗ್ರೆಸ್ ರಮಾನಾಥ ವಿ. 213, ಪಕ್ಷೇತರ ಜಾನ್ ಡಿಸೋಜ 15 ಮತ ಪಡೆದು ಸೋಲು ಕಂಡಿದ್ದಾರೆ. ನೋಟ 10 ಚಲಾವಣೆಯಾಗಿದೆ.

12ನೇ ವಾರ್ಡ್ ನಲ್ಲಿ 497 ಮತಚಲಾವಣೆಯಾಗಿದ್ದು, ಬಿಜೆಪಿ ಹರೀಶ್ ಸಿ. ಎಚ್. 332 ಮತಗಳಿಸಿ ವಿಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ಎಂ. ಕೆ. ಮೂಸಾ 161 ಮತ ಗಳಿಸಿ ಸೋಲು ಕಂಡಿದ್ದಾರೆ. ನೋಟ 4 ಮತ ಚಲಾವಣೆಯಾಗಿದೆ.

13ನೇ ವಾರ್ಡ್ ನಲ್ಲಿ 608 ಮತಚಲಾವಣೆಯಾಗಿದ್ದು, ಎಸ್.ಡಿ.ಪಿ.ಐ. ಶಾಕೀರ 279 ಮತಗಳಿಸುವ ಮೂಲಕ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಸ್ಮ ಯು.ಕೆ. 204, ಬಿಜೆಪಿ ಪುಷ್ಪಾ 119 ಮತಗಳಿಸಿ ಸೋಲುಕಂಡಿದ್ದಾರೆ. ನೋಟ 6ಮತಗಳಿಸಿದ್ದಾರೆ.

14ನೇ ವಾರ್ಡ್ ನಲ್ಲಿ 512 ಮತಚಲಾವಣೆಯಾಗಿದ್ದು, ಬಿಜೆಪಿ ಅಶೋಕ್ ಕುಮಾರ್ ಶೆಟ್ಟಿ 242 ಮತಗಳಿಸಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಮನೋಹರ ಲ್ಯಾನ್ಸಿ ಡಿ ಸೋಜ 144, ಪಕ್ಷೇತರ ಮೋಹನ್ ಸೇರಾಜೆ 125 ಮತ ಪಡೆದು ಸೋಲು ಕಂಡಿದ್ದಾರೆ. ನೋಟ 1ಮತ ಗಳಿಸಿದ್ದಾರೆ.

15ನೇ ವಾರ್ಡ್ ನಲ್ಲಿ 703 ಮತಚಲಾವಣೆಯಾಗಿದ್ದು, ಕಾಂಗ್ರೆಸ್ ಲತಾವೇಣಿ 381ಮತ ಗಳಿಸಿ ಜಯಗಳಿಸಿದ್ದಾರೆ. ಬಿಜೆಪಿ ಸಂಧ್ಯಾಗಣೇಶ್ 319 ಪಡೆದು ಸೋಲುಕಂಡಿದ್ದಾರೆ. ನೋಟ 3 ಮತ ಚಲಾವಣೆಯಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English