ಉಜಿರೆ: ಶನಿವಾರ ಚತುರ್ದಶಿಯ ಪರ್ವ ದಿನ. ಹೊಸ ವರ್ಷದ ಶುಭಾರಂಭ. ಆನೆಗಳಾದ ಲತಾ, ಲಕ್ಷ್ಮಿ ಮತ್ತು ಶಿವಾನಿ ಅಮೃತವರ್ಷಿಣಿ ಸಭಾ ಭವನದಲ್ಲಿ ಸೂರ್ಯಾಸ್ತದ ಮೊದಲೆ ಶುದ್ಧ ಸಸ್ಯಾಹಾರವಾದ ಉಪಾಹಾರ ಸ್ವೀಕರಿಸಿದವು.
ಸೇಬು, ಮುಸುಂಬಿ, ದಾಳಿಂಬೆ, ಸೌತೆ, ಮುಳ್ಳು ಸೌತೆ, ಕಬ್ಬು, ಬಾಳೆಹಣ್ಣು, ಜೋಳ, ಸಿಹಿಕುಂಬಳಕಾಯಿ, ಬಾಳೆಗಿಡ ಹೀಗೆ ಆನೆಗಳಿಗೆ ಇಷ್ವಾದ ಹಾಗೂ ಹಿತವಾದ ವಸ್ತುಗಳನ್ನು ಜೋಡಿಸಿ ಇಡಲಾಗಿತ್ತು. ಅವರವರಿಗೆ ಬೇಕಾದ, ಆಯ್ಕೆಯಾದ ಹಣ್ಣುಗಳನ್ನು ತರಕಾರಿಗಳನ್ನು ಆನೆಗಳು ತಿಂದು ಆನಂದಿಸಿದವು.
ಧರ್ಮಾಧಿಕಾರಿಗಳಾದ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು, ಶ್ರೀ ಡಿ. ಹರ್ಷೇಂದ್ರ ಕುಮಾರ್. ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್. ಶ್ರೀ ಅಮಿತ್, ಶ್ರೀಮತಿ ಶ್ರದ್ಧಾ ಅಮಿತ್, ಕು. ಮಾನ್ಯ, ವಿಧಾನ ಪರಿಷತ್ ಸದಸ್ಯ ಶ್ರೀ ಕೆ. ಪ್ರತಾಪಸಿಂಹ ನಾಯಕ್ ಮತ್ತು ಶ್ರೀಮತಿ ಜ್ಯೋತಿ ನಾಯಕ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English