ಕಾಂಗ್ರೆಸ್ ಗೂಂಡಾ ವರ್ತನೆ : ಸಚಿವ ಅಶೋಕ್ ಖಂಡನೆ

9:28 PM, Monday, January 3rd, 2022
Share
1 Star2 Stars3 Stars4 Stars5 Stars
(No Ratings Yet)
Loading...

R Ashokaಬೆಂಗಳೂರು  : ರಾಮನಗರ ಜಿಲ್ಲೆಯಲ್ಲಿ ಸರ್ಕಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ತೋರಿದ ವರ್ತನೆ ಅವರಿಗೆ ಗೌರವ ತರುವಂತದ್ದಲ್ಲ. ಮಾನ್ಯ ಮುಖ್ಯಮಂತ್ರಿಗಳು ಇರುವ ವೇದಿಕೆಯಲ್ಲಿಯೇ ಅಗೌರವದಿಂದ ನಡೆದುಕೊಂಡಿದ್ದಾರೆ.

ದೇವರಾಜ್ ಅರಸು ಕಾಲದಿಂದಲೂ ಕಾಂಗ್ರೆಸ್ ನಲ್ಲಿ ಗೂಂಡಾ ಸಂಸ್ಕೃತಿ ಇದೆ. ಈ ಘಟನೆಯಿಂದ ಕಾಂಗ್ರೆಸ್ ನಿಜವಾದ ಬಣ್ಣ ಬಯಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯಾದ್ಯಂತ ಇದೇ ರೀತಿಯಲ್ಲಿ ವ್ಯವಹರಿಸುತ್ತದೆ.

ಈ ರೀತಿಯ ತೋಳ್ಬಲಕ್ಕೆ ಮುಂದಾದರೆ ಸಾರ್ವಜನಿಕರೇ ತಕ್ಕಶಾಸ್ತಿ ಮಾಡುತ್ತಾರೆ.  ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English