ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಕುರಿತ ಸ್ಫೋಟಕ ಮಾಹಿತಿ ಬಹಿರಂಗ

5:57 PM, Thursday, January 6th, 2022
Share
1 Star2 Stars3 Stars4 Stars5 Stars
(No Ratings Yet)
Loading...

Deepthi Marlaಬೆಂಗಳೂರು :  ಉಳ್ಳಾಲದಲ್ಲಿ ರಾಷ್ಟ್ರೀಯ ತನಿಖಾ ದಳ ಬಂಧಿಸಿರುವ ದಂತ ವೈದ್ಯೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಕುರಿತ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪ್ರಕರಣದಲ್ಲಿ ಹನಿಟ್ರ್ಯಾಪ್, ಮತಾಂತರ ಹಾಗೂ ಉಗ್ರ ಸಂಘಟನೆಯ ಒಡನಾಟವಿರುವ ಮಾಹಿತಿ ಹೊರಬಿದ್ದಿದೆ.

ಮಾಜಿ ಶಾಸಕ ಇದನಬ್ಬರ ಮೊಮ್ಮಗನ ಮದುವೆ ಆದ ಬಳಿಕ ಇಸ್ಲಾಂಗೆ ಮತಾಂತರವಾಗಿದ್ದ ದೀಪ್ತಿ ಮಾರ್ಲ ಕ್ರೋನಿಕಲ್ ಫೌಂಡೇಶನ್ ಎಂಬ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಯುವಕರನ್ನ ಮತಾಂತರಕ್ಕೆ ಪ್ರೇರೇಪಿಸುತ್ತಿದ್ದಳಂತೆ. ಬಳಿಕ ಮತಾಂತರಗೊಂಡ ಯುವಕರನ್ನ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಗೆ ಸೇರಿಸುತ್ತಿದ್ದಳು ಎಂದು ಎನ್‌ಐಎ ಪ್ರಾಥಮಿಕ‌ ತನಿಖೆಯಲ್ಲಿ ಬಯಲಾಗಿದೆ.

ದೀಪ್ತಿ ಮಾರ್ಲ ವಿವಿಧ ಹೆಸರುಗಳಲ್ಲಿ‌ 15ಕ್ಕೂ ಹೆಚ್ಚು ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳನ್ನ ಹೊಂದಿದ್ದಳು ಯುವಕರ ಜೊತೆ ಪ್ರೀತಿ, ಲೈಂಗಿಕ ಉದ್ದೇಶಿತ ಚಾಟ್ ಮಾಡುತ್ತಿದ್ದಳಂತೆ. ಹೀಗೆ ಯುವಕರನ್ನ ಹನಿಟ್ರ್ಯಾಪ್ ಮಾಡಿ ಇಸ್ಲಾಂಗೆ ಮತಾಂತರ ಮಾಡುತ್ತಿದ್ದಳು. ನಂತರ ಅವರನ್ನ ಐಸಿಸ್‌ಗೆ ಸೇರಲು ಕಳುಹಿಸುತ್ತಿದ್ದಳಂತೆ. ಕಳೆದ ವರ್ಷ ಕಾಶ್ಮೀರಕ್ಕೆ ಹೋಗಿದ್ದ ಬಂಧಿತ ಆರೋಪಿ ಯುವಕರನ್ನ ಐಸಿಸ್‌ಗೆ ಸೆಳೆಯುವ ಕೆಲಸ ಮಾಡಿದ್ದಳಂತೆ. ಅಲ್ಲದೆ ಕೆಲ ತಿಂಗಳುಗಳ ಹಿಂದೆ ಎನ್‌ಐಎ ನಿಂದ ಬಂಧಿತನಾದ ಮಾದೇಶ್ ಪೆರುಮಾಳ್ ಎಂಬಾತನನ್ನ ಈಕೆಯೇ ಹನಿಟ್ರ್ಯಾಪ್ ಮಾಡಿ ಐಸಿಸ್‌ಗೆ ಸೇರಿಸಿದ್ದಳು‌ ಎಂಬ ಸ್ಫೋಟಕ ವಿಚಾರವೂ ತನಿಖೆ ವೇಳೆ ಹೊರಬಿದ್ದಿದೆ. ಯುವಕರನ್ನ ಮತಾಂತರ ಮಾಡಲು ಈಕೆ ಎಷ್ಟು ಬೇಕಾದರು  ಖರ್ಚು ಮಾಡುತ್ತಿದ್ದಳು ಎನ್ನುವುದು ವಿಚಾರಣೆ ವೇಳೆ ಗೊತ್ತಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English