ಡಾ. ಆರ್. ಎನ್. ಶೆಟ್ಟಿಯವರು ಸಂಕಲ್ಪದಂತೆ ನಿರ್ಮಿಸಿದ ನೂತನ ಬ್ರಹ್ಮರಥದ ಪುರಪ್ರವೇಶ

7:01 PM, Thursday, January 6th, 2022
Share
1 Star2 Stars3 Stars4 Stars5 Stars
(No Ratings Yet)
Loading...

Brahmarathaಕುಂದಾಪುರ  : ಡಾ. ಆರ್. ಎನ್. ಶೆಟ್ಟಿಯವರು ಸಂಕಲ್ಪದಂತೆ ನಿರ್ಮಿಸಿದ ನೂತನ ರಥದ ಪುರಪ್ರವೇಶ ಕಾರ್ಯಕ್ರಮ ಗುರುವಾರ ಸಂಜೆ ಅತ್ಯಂತ ಅದ್ದೂರಿಯಾಗಿ ನಡೆಯಿತು.

ಮಹತ್ಹೋಭಾರ ಶ್ರೀ ಮುರುಡೇಶ್ವರನ ಭಾವಚಿತ್ರವನ್ನು ಇರಿಸಿ ಆರತಿ ಬೆಳಗಿದ ಆರ್. ಎನ್. ಶೆಟ್ಟಿಯವರ ಪುತ್ರ ಸುನಿಲ್ ಶೆಟ್ಟಿಯವರು ರಥವನ್ನು ಬರಮಾಡಿಕೊಂಡರು. ಧಾರ್ಮಿಕ ವಿಧಿ ವಿದಾನಗಳನ್ನು ದೇವಸ್ಥಾನದ ಮುಖ್ಯ ಅರ್ಚಕರಾದ ಜಯರಾಮ ಅಡಿಗಳ್ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅರ್ಚಕ ಶಿವರಾಮ ಅಡಿಗಳ್ ಮುಂತಾದವರು ಉಪಸ್ಥಿತರಿದ್ದರು.

ಮಹಿಳೆಯರಿಂದ ಪೂರ್ಣಕುಂಭ, ಮಹಿಳೆಯರ ಭಜನಾ ತಂಡ, ನಂತರ ವಿವಿಧ ವಾಧ್ಯಗಳು, ನಗಾರಿ, ವೇಷಭೂಷಣ, ಮಹಿಳೆಯರ ಚಂಡೆವಾದನ, ವಿವಿದ ಕಲಾ ತಂಡಗಳಿಂದ ವೈವಿದ್ಯಮಯ ನೃತ್ಯ ಸೇರಿದಂತೆ ಅದ್ದೂರಿಯಾಗಿ ಜಾತ್ರೆಯ ಮಾದರಿಯಲ್ಲಿ ನಡೆದಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಯಿತು. ಎಲ್ಲಾ ಕಡೆಗಳಿಂದಲೂ ಭಕ್ತರು ಆಗಮಿಸಿದ್ದರು.

ಬ್ರಹ್ಮರಥವನ್ನು ಹೊತ್ತ ಲಾರಿಯು ಮಹಾದ್ವಾರವನ್ನು ಪ್ರವೇಶಿಸುತ್ತಲೇ ಭಕ್ತರ ಹರ ಹರ ಮಹಾದೇವ ಘೋಷಣೆ ಮುಗಿಲು ಮುಟ್ಟಿತ್ತು. ನಂತರ ಓಲಗ ಮಂಟಪದ ತನಕವೂ ಕೂಡಾ ರಥವನ್ನು ಹೊತ್ತ ವಾಹನ ನಿಧಾನವಾಗಿ ಸಾಗಿದ್ದು, ಸ್ವಾಗತ ಪೂಜೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Brahmarathaಉತ್ತರ ಕನ್ನಡ ಜಿಲ್ಲೆಯ ಪಂಚ ಕ್ಷೇತ್ರಗಳಲ್ಲಿ ಒಂದಾದ ಮುರ್ಡೆಶ್ವರ ದೇವರ ರಥವು ಅತ್ಯಂತ ಹಳೆಯದಾಗಿದ್ದು ಸುಮಾರು 400 ವರ್ಷಗಳಷ್ಟು ಹಿಂದಿನದು ಎನ್ನಲಾಗಿದೆ. ಈ ಹಿಂದೆ ರಥೋತ್ಸವದ ವೇಳೆಯಲ್ಲಿ ಡಾ. ಆರ್. ಎನ್. ಶೆಟ್ಟಿಯವರು ನೂತನ ರಥದ ನಿರ್ಮಾಣಕ್ಕೆ ಸಂಕಲ್ಪ ಮಾಡಿಕೊಂಡಿದ್ದು ಅದನ್ನು ಅವರ ಪುತ್ರ ಸುನಿಲ್ ಶೆಟ್ಟಿ ಹಾಗೂ ಕುಟುಂಬಿಕರು ಈಡೇರಿಸಿದ್ದಾರೆ.

ನೂತನ ಬ್ರಹ್ಮರಥವನ್ನು ಕೋಟೇಶ್ವರದ ರಥ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲ ಆಚಾರ್ಯ ಇವರು ಶಾಸ್ತ್ರ ಸಮ್ಮತವಾಗಿ ನಿರ್ಮಾಣ ಮಾಡಿದ್ದು ಬಹಳ ಸುಂದರವಾಗಿ ಕೆತ್ತನೆ ಮೂಡಿ ಬಂದಿದೆ. ರಥಕ್ಕೆ ಜಿಲ್ಲೆಯ ಧಾರ್ಮಿಕ ಹಿನ್ನೆಲೆಯನ್ನು ಶಿಲ್ಪವಾಗಿ ಬಳಸಿದ್ದು ವಿಶೇಷವಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English