ವೀಕೆಂಡ್ ಕರ್ಫ್ಯೂ : ಮಂಗಳೂರಲ್ಲಿ ವಿರಳವಾಗಿ ಬಸ್ ಸಂಚಾರ, ಜೊತೆಗೆ ಜನ ಸಂಚಾರವು ಇದೆ

3:20 PM, Saturday, January 8th, 2022
Share
1 Star2 Stars3 Stars4 Stars5 Stars
(5 rating, 1 votes)
Loading...

Mangalore Weekendಮಂಗಳೂರು : ದ.ಕ. ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಮಧ್ಯೆಯೂ ಬಸ್ಸುಗಳ ಸಂಚಾರವಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಜನ ಸಂಚಾರವು ಇದೆ. ಆದರೆ ಅನಗತ್ಯ ಸಂಚಾರ ನಡೆಸಿರುವ ವಾಹನಗಳನ್ನು ಮಂಗಳೂರು ಪೊಲೀಸರು ತಡೆ ಹಿಡಿದಿದ್ದಾರೆ.

ಕ್ಲಾಕ್ ಟವರ್ ಬಳಿ ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಸಕಾರಣವಿಲ್ಲದೆ ವಾಹನಗಳಲ್ಲಿ ಸಂಚಾರ ಮಾಡುವವರನ್ನು ತಡೆದು ದಂಡ ಹಾಕುವ ಪ್ರಕ್ರಿಯೆ ಪೊಲೀಸರಿಂದ ನಡೆಯುತ್ತಿದೆ.

ನಗರದಲ್ಲಿ ಬೆಳಗ್ಗೆಯಿಂದ ಸುಮಾರು 25ಕ್ಕೂ‌ಅಧಿಕ ದ್ವಿಚಕ್ರ ವಾಹನ  ಗಳನ್ನು ಜಪ್ತಿ ಮಾಡಿ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English