ಮಂಗಳೂರು : ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಆನ್‌ಲೈನ್ ಸಾಲದ ಫೋನ್ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಿನ್ನಿಗೋಳಿ ಪಕ್ಷಿಕೆರೆ ಮೂಲದ ಸುಶಾಂತ್(26) ಎಂದು ಗುರುತಿಸಲಾಗಿದೆ.
ಸೋಮವಾರ ತಾನು ಕೆಲಸ ಮಾಡಿಕೊಂಡಿದ್ದ ಸುರತ್ಕಲ್‌ನ ಕುಳಾಯಿಯ ಕಚೇರಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸಾವಿನ ಕುರಿತಂತೆ ತುಳುವಿನಲ್ಲಿ ಡೆತ್‌ನೋಟ್ ಬರೆದಿದ್ದಾರೆ. ‘ಸಾರಿ ಮಾತೆರೆಗ್ಲಾ. ಎಂಕ್ ಏರ‌್ನಲಾ ನಂಬಿಕೆ ಒರಿಪಾರೆ ಆಯಿಜಿ. ಕಾಸ್‌ದ ವಿಷಯೊಡ್ ತೊಂದರೆ ಆಂಡ್. ಸಾರಿ, ಆನ್‌ಲೈನ್ ಲೋನ್‌ದಕುಲ್ ಕಾಲ್ ಮಲ್ತೆರ್‌ಡ ಡೆತ್ ಆತೆ ಪನ್ಲೆ. ರಿಯಲಿ ಸಾರಿ ಫಾರ್ ಆಲ್.(ಎಲ್ಲರಲ್ಲೂ ಕ್ಷಮೆ ಯಾಚಿಸುತ್ತೇನೆ. ನನಗೆ ಯಾರ ನಂಬಿಕೆಯನ್ನೂ ಉಳಿಸಲು ಸಾಧ್ಯವಾಗಿಲ್ಲ. ಹಣಕಾಸಿನ ವಿಷಯದಲ್ಲಿ ತೊಂದರೆ ಆಯಿತು. ಆನ್‌ಲೈನ್ ಲೋನ್‌ನವರು ಫೋನ್ ಮಾಡಿದರೆ ಸಾವನ್ನಪ್ಪಿರುವ ಮಾಹಿತಿ ನೀಡಿ) ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಈತನ ಹೆತ್ತವರು 15 ವರ್ಷಗಳ ಹಿಂದೆಯೇ ಮೃತರಾಗಿದ್ದು, ಹಿರಿಯ ಸಹೋದರ ಅಶ್ವಿತ್(31) ಜತೆ ವಾಸವಾಗಿದ್ದರು. ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.
Click this button or press Ctrl+G to toggle between Kannada and English