ಮಂಗಳೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲ್ಕೂರ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಅ. 10ನೇ ರವಿವಾರ ಮಂಗಳೂರು ಪುರಭವನದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ದಿವಂಗತ ಡಾ| ಕೋಟ ಶಿವರಾಮ ಕಾರಂತ ಅವರ 109 ಹುಟ್ಟು ಹಬ್ಬವನ್ನು ಆಚರಿಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣಪಾಲೇಮಾರ್ ಅ 10ರ ಸಂಜೆ ಐದು ಗಂಟೆಗೆ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ವಿದ್ವಾಂಸ ಏರ್ಯ ಲಕ್ಷ್ಮೀನಾರಯಣ ಆಳ್ವ ಸಭಾಧ್ಯಕ್ಷತೆ ವಹಿಸಲಿದ್ದಾರೆ, ಸಾಹಿತಿ ಪ್ರೋ. ಅಮೃತ ಸೋಮೇಶ್ವರ ಅವರಿಗೆ `ಕಾರಂತ ಪುರಸ್ಕಾರ’ ನೀಡಿ ಗೌರವಿಸಲಾಗುವುದು ಎಂದು ಕಲ್ಕೂರ ಹೇಳಿದರು.
ಅದೇ ದಿನ ಮಧ್ಯಾಹ್ನ ಶ್ರೀ ದುರ್ಗಾ ಮಕ್ಕಳ ಮೇಳ ಮತ್ತು ಕೆನರಾ ಹೈಸ್ಕೂಲು ಮಕ್ಕಳಿಂದ “ಪಾಂಚ ಜನ್ಯ”ಸಂಜೆ 6.30ಕ್ಕೆ ಕೃಷ್ಣಯಾಜಿ ಬಳಗ ಶ್ರೀ ಸಾಲಿಗ್ರಾಮ ಮೇಳ ಇವರಿಂದ ಬಡಗು ತಿಟ್ಟಿನ ಯಕ್ಷಗಾನ “ಜಾಂಬವತಿ ಕಲ್ಯಾಣ” ನಡೆಯಲಿದೆ.
Click this button or press Ctrl+G to toggle between Kannada and English