ಕೊರಗಜ್ಜನ ವೇಷವನ್ನು ಧರಿಸಿ ಅವಹೇಳನ, ಇಬ್ಬರ ಬಂಧನ

9:46 PM, Tuesday, January 11th, 2022
Share
1 Star2 Stars3 Stars4 Stars5 Stars
(No Ratings Yet)
Loading...

Koragajja Defameವಿಟ್ಲ: ಸಾಲೆತ್ತೂರು ಎಂಬಲ್ಲಿ ಮದುವೆ ಮನೆಯಲ್ಲಿ ಹಿಂದೂಗಳ ಆರಾಧ್ಯ ದೈವ ಸ್ವಾಮೀ ಕೊರಗಜ್ಜನ ವೇಷವನ್ನು ಧರಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ಇಬ್ಬರು ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.‌

ಪ್ರಕರಣದ ಪ್ರಮುಖ ಆರೋಪಿ ಮಂಗಲಪ್ಪಾಡಿ  ನಿವಾಸಿ, ಪುತ್ತೂರು ಫಾತಿಮಾ ಅಂಗಡಿಯ ಮಾಲಕ ಅಹ್ಮದ್ ಮುಜಿತಾಬು(28) ಮತ್ತು ಬಾಯಾರು ಪದವು ನಿವಾಸಿ ಮೊಯ್ದೀನ್ ಮುನಿಶ್ (19) ಬಂಧಿತ ಆರೋಪಿಗಳು. ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Kalikamba-Ad

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English