ಮಂಗಳೂರು : ನಗರದಿಂದ ಭಟ್ಕಳಕ್ಕೆ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಗೆ ದಾರಿಬಿಟ್ಟು ಕೊಡದೆ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಮೋನಿಶ್ ಎಂದು ಗುರುತಿಸಲಾಗಿದೆ. ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಯು ಎಸ್ 279 ಐಪಿಸಿ ಮತ್ತು 184 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.
ಇದೇ ಕಾರಿನ ಚಾಲಕನು ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಆ್ಯಂಬುಲೆನ್ಸ್‌ಗೆಕಿರುಕುಳ ನೀಡಿದ್ದಾನೆ ಎಂಬ ಆರೋಪವೂ ವ್ಯಕ್ತವಾಗಿದೆ.
ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ರೋಗಿಯನ್ನು ಬುಧವಾರ ಸಂಜೆ ಭಟ್ಕಳಕ್ಕೆ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸೇರಿ ಸಲು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯುಲಾಗುತ್ತಿತ್ತು.
ಮಂಗಳೂರಿನಿಂದ ಹೊರಟ ಆ್ಯಂಬುಲೆನ್ಸ್ ಮುಲ್ಕಿ ತಲುಪಿದಾಗ ಚೆವರ್ಲೋ ಬೀಟ್ ಕಾರು ಓವರ್‌ಟೇಕ್ ಮಾಡಿತು. ಆ ಬಳಿಕ ಎಲ್ಲೂ ಸೈಡ್ ಬಿಟ್ಟುಕೊಡದೆ ಉಡುಪಿಯವರೆಗೂ ಕಾರು ಚಾಲಕ ಹುಚ್ಚಾಟ ಮೆರೆದ ಎನ್ನಲಾಗಿದೆ. ಇದನ್ನು ಆ್ಯಂಬುಲೆನ್ಸ್‌ನಲ್ಲಿದ್ದವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಕಾರು ಚಾಲಕನ ಈ ಹುಚ್ಚಾಟದ ವಿರುದ್ಧ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.
ಸುಮಾರು 30 ಕಿ.ಮೀ.ವರೆಗೂ ಕಾರು ಚಾಲಕನು ರಸ್ತೆ ಬಿಟ್ಟುಕೊಡದೆ ತೊಂದರೆ ನೀಡಿದ್ದಾರೆ. ಕಾರಿನಲ್ಲಿ ಇನ್ನೂ ಒಬ್ಬನಿದ್ದ ಎಂದು ಹೇಳಲಾಗುತ್ತಿದೆ.
ಕಾರಿನಲ್ಲಿದ್ದವರು ಆ್ಯಂಬುಲೆನ್ಸ್‌ಗೆ ದಾರಿ ಬಿಟ್ಟುಕೊಡದೆ ಕೈ ಸನ್ನೆ ಮಾಡುತ್ತಾ ವಿಚಿತ್ರವಾಗಿ ವರ್ತಿಸುತ್ತಿದ್ದರು. ಆದಾಗ್ಯೂ ಐಸಿಯು ಆಂಬುಲೆನ್ಸ್ ವೆಂಟಿಲೇಟರ್‌ನಲ್ಲಿದ್ದ ರೋಗಿಯನ್ನು 1:40 ನಿಮಿಷದಲ್ಲಿ ತಲುಪಿಸಿದೆನು. ಇದೇ ಕಾರಿನ ಚಾಲಕನು ಬುಧವಾರ ರಾತ್ರಿಯ ವೇಳೆ ಉಡುಪಿಯಿಂದ ಮಂಗಳೂರಿಗೆ ರೋಗಿಯನ್ನು ಕರೆದು ತರುತ್ತಿದ್ದ ಆ್ಯಂಬುಲೆನ್ಸ್‌ಗೆ ಅಡ್ಡಿಪಡಿಸಿದ ಬಗ್ಗೆಯೂ ಮಾಹಿತಿ ಇದೆ ಎಂದು ಆಂಬುಲೆನ್ಸ್ ಚಾಲಕ ಅಯ್ಯೂಬ್ ತಿಳಿಸಿದ್ದಾರೆ.
Click this button or press Ctrl+G to toggle between Kannada and English