ಹಣ ಡಬಲ್ ಮಾಡಿ ಕೊಡುವ ಜಾಲಕ್ಕೆ ಮೋಸ ಹೋಗಿ10 ಸಾವಿರ ಕಳಕೊಂಡ ಯುವಕ

7:16 PM, Friday, January 21st, 2022
Share
1 Star2 Stars3 Stars4 Stars5 Stars
(No Ratings Yet)
Loading...

stellaಮಂಗಳೂರು : ಟಿಕ್ ಟಾಕ್ ಸ್ಟಾರ್ ಒಬ್ಬಳು ಹಣ ಡಬಲ್ ಮಾಡಿ ಕೊಡುವ ಭರವಸೆ ಕೊಡುವುದಾಗಿ ಮಾಡಿದ ವಿಡಿಯೋವನ್ನು ನೋಡಿ ಹಣ ಹೂಡಿಕೆ ಮಾಡಿದ ಯುವಕ ಮೋಸ ಹೋಗಿದ್ದು, ಈ ಬಗ್ಗೆ ಸೈಬರ್ ಕ್ರೈಂ ಠಾಣೆಗೆ ಯುವಕ ದೂರು ನೀಡಿದ್ದಾರೆ.

ಸೋನು ಶ್ರೀನಿವಾಸ ಗೌಡ ಎಂಬ ಟಿಕ್ ಟಾಕ್ ಸ್ಟಾರ್ ಸೋಶಿಯಲ್ ಮೀಡಿಯಾ ಪ್ರೊಮೋಷನ್‌ನಲ್ಲಿ ಟ್ರೇಡರ್ ಸ್ಟೆಲ್ಲಾ ಕುರಿತು ವೀಡಿಯೋ ಮಾಡಿದ್ದು, ಇದನ್ನು ನೋಡಿದ ಮಂಗಳೂರಿನ ಯುವಕನೊಬ್ಬ ಹಣ ಹೂಡಿಕೆ ಮಾಡಿ ಇದೀಗ ಮೋಸ ಹೋಗಿದ್ದಾನೆ.

ತಾನು ಮೋಸ ಹೋಗಿರುವ ಕುರಿತು ಮಾತನಾಡಿದ ಯುವಕ, ಸೋನು ಶ್ರೀನಿವಾಸ ಗೌಡ ಅವರು ಟ್ರೇಡರ್ ಸ್ಟೆಲ್ಲಾ ಎಂಬ ಆಪ್‌ ಕುರಿತಾಗಿ ಮಾಡಿರುವ ವಿಡಿಯೋವನ್ನು ನಂಬಿ ನಾನು 10 ಸಾವಿರ ಹಣ ಕಳುಹಿಸಿದ್ದೇನೆ ಆದರೆ ಇದೀಗ ನನಗೆ ಮೋಸವಾಗಿದ್ದು, ಯಾರೂ ಹಣ ಹೂಡಿಕೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಇನ್ನು ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English