ಮಂಗಳೂರು : ಗಣರಾಜ್ಯೋತ್ಸವದ ಸಮಯದಲ್ಲಿ ರಾಷ್ಟ್ರ ಧ್ವಜದ ಮೇಲಾಗುವ ಅಪಮಾನವನ್ನು ತಡೆಯಲು ಮತ್ತು ಉಚ್ಚ ನ್ಯಾಯಾಲಯದ ಆದೇಶದಂತೆ ಕಾರ್ಯಚರಣೆ ಮಾಡಲು ಹಾಗೂ ರಾಜ್ಯ ಸರ್ಕಾರದಿಂದ ಪ್ಲಾಸ್ಟಿಕ್ ಧ್ವಜದ ಮೇಲಿನ ನಿರ್ಬಂಧದ ನಿರ್ಣಯದ ಕುರಿತು ಕ್ರಮಕೆಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಚುನಾವಣಾ ತಹಸೀಲ್ದಾರ್ ಕೆ.ಯಸ್ ದಯಾನಂದ ಇವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಕಮಿಷನರ್ ಕಚೇರಿಯ ಪೊಲೀಸ್ ಸಿಬಂಧಿ ಆದ ಶ್ರೀ ವರುಣ ಇವರ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಶ್ರೀ ಪ್ರಭಾಕರ ನಾಯಕ್, ಶ್ರೀ ಉಪೇಂದ್ರ, ಶ್ರೀ ರಾಜೇಶ್ ಆಚಾರ್ಯ, ಶ್ರೀ ಅಜಿತ್, ಧರ್ಮಪ್ರೇಮಿಗಳಾದ ಶ್ರೀ ಉಮೇಶ್ ಅತ್ತಾವರ, ಗೋರಕ್ಷ ಪ್ರಮುಖರಾದ ಶ್ರೀ ವೈಶಾಂಕ್, ಹೊಸ ಬೆಟ್ಟು ಶ್ರೀ ಸಂಕೇತ್ ಮೆಲ್ಕಾರ್ ,ಶ್ರೀ ಸುರೇಶ್ ಕೋಣಾಜೆ, ಶ್ರೀ ಜಯಂತ್ ನೆಲ್ಯಾಡಿ, ಶ್ರೀ ಉಮೇಶ್ ನೆಲ್ಯಾಡಿ, ಇವರು ಉಪಸ್ಥಿತರಿದ್ದರು ಹಾಗೂ ಮುಲ್ಕಿಯ ತಹಸೀಲ್ದಾರರಾದ ಶ್ರೀಮತಿ ಕಮಲಮ್ಮ ಇವರಿಗೆ ಕೊಡಾ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಜಯಂತ್ ಗೌಡ, ಶ್ರೀ ಜಯರಾಮ ಕಂದಾವರ, ಶ್ರೀ ಸಿದ್ದಣ್ಣ ಕೊಳ್ನಾಡು, ಶ್ರೀಮತಿ ಸೂಪಣಾ ಆಚಾರ್ಯ, ಶ್ರೀಮತಿ ವನಜ ಶೆಟ್ಟಿಗಾರ್ ಉಪಸ್ಥಿತರಿದ್ದರು.
ರಾಷ್ಟ್ರಧ್ವಜವು ರಾಷ್ಟ್ರದ ಗೌರವವಾಗಿದೆ. ಆದರೆ ದುರ್ದೈವದಿಂದ ಹೆಚ್ಚಿನ ಭಾರತೀಯರಿಗೆ ಇದರ ನೆನಪು ಕೇವಲ ೧೫ ಅಗಸ್ಟ್ಟ್ ಮತ್ತು 26 ಜನವರಿಯಂದು ಮಾತ್ರ ಆಗುತ್ತದೆ. ಈ ದಿನದಂದು ರಾಷ್ಟ್ರಧ್ವಜವನ್ನು ಅತ್ಯಂತ ಗೌರವದಿಂದ ಹಾರಿಸಲಾಗುತ್ತದೆ. ಆದರೆ ಇದೇ ಕಾಗದದಿಂದ/ಪ್ಲಾಸ್ಟಿಕನಿಂದ ತಯಾರಿಸಿದ ರಾಷ್ಟ್ರಧ್ವಜವು ಸಂಜೆಯಾಗುತ್ತಿದ್ದಂತೆ ರಸ್ತೆಯ ಮೇಲೆ, ಕಸದ ಬುಟ್ಟಿಯಲ್ಲಿ, ಚರಂಡಿಯಲ್ಲಿ ಇತ್ಯಾದಿ ಸ್ಥಳದಲ್ಲಿ ಬಿದ್ದಿರುವುದನ್ನು ಕಾಣುತ್ತೇವೆ. ಪ್ಲಾಸ್ಟಿಕನಿಂದ ತಯಾರಾದ ರಾಷ್ಟ್ರಧ್ವಜವಂತೂ ನಾಶವೂ ಆಗುವುದಿಲ್ಲ, ಇದರಿಂದ ಹಲವು ದಿನಗಳವರೆಗೆ ನಮಗೆ ಆ ರಾಷ್ಟ್ರಧ್ವಜದ ಅಗೌರವವನ್ನು ನೋಡಬೇಕಾಗುತ್ತದೆ. ಇತ್ತಿಚೆಗೆ ರಾಷ್ಟ್ರಧ್ವಜದ ಮಾಸ್ಕ ಧರಿಸುವುದು ಸಹ ನಡೆಯುತ್ತಿದೆ. ಈ ರೀತಿಯಲ್ಲಾಗುವ ರಾಷ್ಟ್ರಧ್ವಜದ ಅಗೌರವವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆಯನ್ನು(ದಾವೆ ಸಂ. ೧೦೩/೨೦೧೧) ಹೂಡಲಾಗಿದೆ. ಇದರ ಬಗ್ಗೆ ಆಲಿಕೆಯನ್ನು ಮಾಡುತ್ತ ನ್ಯಾಯಾಲಯವು ಪ್ಲಾಸ್ಟಿಕನ ರಾಷ್ಟ್ರಧ್ವಜದ ಅಗೌರವವನ್ನು ತಡೆಗಟ್ಟಲು ಸರ್ಕಾರಕ್ಕೆ ಆದೇಶವನ್ನು ನೀಡಿದೆ. ಅದಕ್ಕನುಸಾರ ಕೇಂದ್ರೀಯ ಮತ್ತು ಎಲ್ಲಾ ರಾಜ್ಯದ ಗೃಹ ವಿಭಾಗ ಮತ್ತು ಶಿಕ್ಷಣ ವಿಭಾಗದ ಮೂಲಕ ಈ ವಿಷಯ ಕುರಿತು ಒಂದು ಸುತ್ತೋಲೆಯನ್ನು ಹೊರಡಿಸಿದೆ. ಇತ್ತೀಚಿನ ದಿನದಲ್ಲಿ ಕರ್ನಾಟಕ ಸರ್ಕಾರವು ‘ಪ್ಲಾಸ್ಟಿಕ ನಿರ್ಬಂಧ’ದ ನಿರ್ಣಯವನ್ನೂ ತೆಗೆದುಕೊಂಡಿದೆ. ಇದರ ಪ್ರಕಾರ ಪ್ಲಾಸ್ಟಿಕನ ರಾಷ್ಟ್ರಧ್ವಜದ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಆದರೆ ನಗರದ ರಸ್ತೆ ಬದಿಗಳಲ್ಲಿ, ಅಂಗಡಿಗಳಲ್ಲಿ ರಾಜಾರೋಷವಾಗಿ ಪ್ಲಾಸ್ಟಿಕ್ ಧ್ವಜದ ಮಾರಾಟ ಮಾಡಲಾಗುತ್ತದೆ.
ಹಿಂದೂ ಜನಜಾಗೃತಿ ಸಮಿತಿಯು ಸಹ ಈ ದಿಶೆಯಿಂದ ಕಳೆದ 20 ವರ್ಷಗಳಿಂದ ರಾಷ್ಟ್ರಧ್ವಜದ ಗೌರವ ಕಾಪಾಡುವ ಅಭಿಯಾನವನ್ನು ಮಾಡುತ್ತಿದೆ. ಇದರ ಅಂತರ್ಗತದಲ್ಲಿ ವಿದ್ಯಾಲಯಗಳಲ್ಲಿ ವ್ಯಾಖ್ಯಾನ ಮಾಡುವುದು, ಸ್ಥಳೀಯ ಕೇಬಲ್ ವಾಹಿನಿ, ಸೊಸಿಯಲ್ ಮೀಡಿಯಾ, ಸಾಮಾಜಿಕ ಸಂಕೇತಸ್ಥಳಗಳ ಮೂಲಕ ಜನಜಾಗೃತಿ ಮಾಡುವುದು ಇತ್ಯಾದಿ ಕಾರ್ಯಗಳನ್ನು ಮಾಡಲಾಗುತ್ತದೆ. ಲಕ್ಷಾಂತರ ಕಾಂತಿಕಾರಿಗಳು ರಾಷ್ಟ್ರ ಧ್ವಜದ ಗೌರವ ಕಾಪಾಡಲು ತಮ್ಮ ಪಾಣವನ್ನು ತ್ಯಾಗಮಾಡಿದ್ದಾರೆ. ಆದರೆ ಅವರ ಬಲಿದಾನದ ಮಹತ್ವ ತಿಳಿಯದೇ ಈ ರೀತಿಯಲ್ಲಿ ರಾಷ್ಟ್ರ ಧ್ವಜ, ಲಾಂಚನಗಳನ್ನು ಬಳಸುವುದು ರಾಷ್ಟ್ರ ಪುರುಷರ, ಕಾಂತಿಕಾರಿಗಳ ಅಪಮಾನವಲ್ಲವೇ ?
ಅದಕ್ಕಾಗಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ರಾಷ್ಟ್ರ ಧ್ವಜದ ವಿತರಣೆ ಮಾಡುವ ಅಂಗಡಿ, ಮಾರಾಟಗಾರರ ವಿರುದ್ಧ ಮತ್ತು ರಾಷ್ಟ್ರಧ್ವಜ ಸಂಹಿತೆಯ ವಿರುದ್ಧವಾದ ರೀತಿಯಲ್ಲಿ ರಾಷ್ಟ್ರ ಧ್ವಜವನ್ನು ಬಳಕೆ ಮಾಡುವ ಸಂಸ್ಥೆ ಮತ್ತು ವ್ಯಕ್ತಿಗಳ ವಿರುದ್ಧ ಕಠೋರ ಕಾನೂನು ಕಾರ್ಯಚರಣೆ ಮಾಡಬೇಕೆಂದು ವಿನಂತಿಸಿದ್ದಾರೆ.
Click this button or press Ctrl+G to toggle between Kannada and English