ಬನ್ನಿರಿ ಮಕ್ಕಳೇ – ನಮ್ಮಯ ಶಾಲೆಯು ತೆರೆದಿಹುದು

11:23 AM, Friday, January 28th, 2022
Share
1 Star2 Stars3 Stars4 Stars5 Stars
(No Ratings Yet)
Loading...

School-openಬನ್ನಿರಿ – ಮಕ್ಕಳೇ
ಬನ್ನಿರಿ – ಚಿಣ್ಣರೇ
ಶಾಲೆಯು ತೆರೆದಿಹುದು
ನಮ್ಮಯ ಶಾಲೆಯು ತೆರೆದಿಹುದು. 1
ನಿಮ್ಮಯ ಮನೆ, ಗುಡಿಸಲಿಗೆ
ನಮ್ಮಯ ಗುರುಗಳು ಬಂದಿಹರು,
ನಿಮ್ಮನು ಶಾಲೆಗೆ ಕರೆದಿಹರು
ನಿಮ್ಮನು ಶಾಲೆಗೆ ಕರೆದಿಹರು. 2
ಓದುತ್ತ , ಬರೆಯುತ್ತ
ನಲಿಯುತ್ತ , ಕುಣಿಯುತ್ತ
ಸರಕಾರಿ ಶಾಲೆ ಸೇರಿರಿ
ಶಿಕ್ಷಣ ನೀವೆಲ್ಲಾ ಪಡೆಯಿರಿ. 3
ಶಿಕ್ಷಣ ಪಡೆಯುವ ಬಾನಾಡಿಗಳೇ
ನಿಮ್ಮಯ ಭವಿಷ್ಯ ಇಲ್ಲಿಹುದು
ನಾಳೆ ನಾಡಿಗೆ ನೀವೇ ಮಾದರಿ
ಶಾಲೆಗೆ ತಡಮಾಡದೆ ಓಡಿ ಬನ್ನಿರಿ
ಶಾಲೆಗೆ ತಡಮಾಡದೆ ಓಡಿ ಬನ್ನಿರಿ. 4

✍ ರಚನೆ.
ಮಂಜುನಾಥ ಗುತ್ತೇದಾರ.
ಸಾ// ಸುಂಕೇಶ್ವರಹಾಳ. (ದೇವಸೂಗೂರು)
ತಾ// ಜಿ// ರಾಯಚೂರು. ಮೋ.ನಂ. 9632759691

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English