ರಸ್ತೆ ಅಗಲೀಕರಣ, ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರ ಮನೆಯ ಕಾಂಪೌಂಡ್ ನೆಲಸಮ

12:05 PM, Friday, January 28th, 2022
Share
1 Star2 Stars3 Stars4 Stars5 Stars
(No Ratings Yet)
Loading...

Kalladka Prabhakara bhatಬಂಟ್ವಾಳ : ಬಿಸಿರೋಡು ಅಡ್ಡಹೊಳೆವರೆಗೆ ಚತುಷ್ಪತ ರಸ್ತೆಯ ನಿರ್ಮಾಣದ ಕಾಮಗಾರಿ ರಾತ್ರಿಹಗಲು ಎನ್ನದೆ ಭರದಿಂದ ನಡೆಯುತ್ತಿದ್ದು. ರಸ್ತೆಯ ಪಕ್ಕದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ನಾಯಕ ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರ ಮನೆಯ ಕಾಂಪೌಂಡ್ ಗೋಡೆ ಜರಿದು ಬಿದ್ದ ಘಟನೆ ಗುರುವಾರ ರಾತ್ರಿ ವೇಳೆ ನಡೆದಿದೆ .

ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರ ಮನೆಯ ಕಾಂಪೌಂಡ್ ಗೋಡೆ ಜರಿದು ಬಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ ಎನ್ನಲಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಕಲ್ಲಡ್ಕ ಪೇಟೆಯಲ್ಲಿ ಎಷ್ಡು ಮೀಟರ್ ರಸ್ತೆ ಅಗಲೀಕರಣಗೊಳ್ಳುತ್ತದೆ ಎಂಬುದರ ಸ್ಪಷ್ಟವಾದ ಲೆಕ್ಕ ನೀಡದೆ ಜನ ಗೊಂದಲದಲ್ಲಿದ್ದಾರೆ. ಕಲ್ಲಡ್ಕ ಪೇಟೆಯಲ್ಲಿ ಪ್ಲೈ ಓವರ್ ನಿರ್ಮಾಣದ ಪ್ಲಾನ್ ತಯಾರಿಸಿದ ಬಳಿಕ ರಸ್ತೆಯ ಇಕ್ಕೆಲಗಳು ಬಾಕಿ ಉಳಿದ ಕಡೆಗಳಿಗಿಂತ ಕಡಿಮೆ ಜಾಗ ಎಕ್ವೇರ್ ಮಾಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ಲೈ ಓವರ್ ನ ಎರಡು ಬದಿಗಳಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಗೊಳ್ಳುತ್ತದೆ ಈಗಾಗಿ ರಸ್ತೆ ಅಗಲೀಕರಣದ ಸರಿಯಾದ ಸರ್ವೆ ಕಾರ್ಯ ಮುಗಿದಿಲ್ಲ ಎಂಬುದು ಸ್ಥಳೀಯ ರ ಮಾತು.

ಡಾ! ಪ್ರಭಾಕರ್ ಭಟ್ ಅವರ ಮನೆಯ ಕಾಂಪೌಂಡ್ ಎರಡು ಬಾರಿ ನಿರ್ಮಾಣ ಮಾಡಲಾಗಿತ್ತು. ಒಂದು ಬಾರಿ ರಸ್ತೆ ಅಗಲೀಕರಣ ಕ್ಕಾಗಿ ಕೆಂಪು ಕಲ್ಲು ಬಳಸಿ ಕಟ್ಟಲಾಗಿತ್ತು. ಅ ಬಳಿಕ ಮತ್ತೆ ಕಾಂಕ್ರೀಟ್ ಸಿಮೆಂಟ್ ಮೂಲಕ ತಡೆಗೋಡೆ ರೀತಿಯಲ್ಲಿ ಕಾಂಪೌಂಡ್ ಗೋಡೆ ನಿರ್ಮಾಸಿಲಾಗಿತ್ತಾದರೂ ಯಾವುದೇ ಪ್ರಯೋಜನ ಕ್ಕೆ ಬಾರದೆ ನೆಲಸಮವಾಗಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ರಸ್ತೆ ಅಗಲೀಕರಣ ದ ಜೊತೆ ಸರಾಗವಾಗಿ ಮಳೆ ನೀರು ಹರಿದು ಹೋಗುವ ಉದ್ದೇಶದಿಂದ ಅಲ್ಲಲ್ಲಿ ಸಿಮೆಂಟ್ ಪೈಪ್ ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಕಲ್ಲಡ್ಕ ಮುಖ್ಯಪೇಟೆಯಲ್ಲಿರುವ ಡಾ ! ಪ್ರಭಾಕರ್ ಭಟ್ ಅವರ ಮನೆಯ ಮುಂಭಾಗದಲ್ಲಿ ಕೂಡ ಸಿಮೆಂಟ್ ಪೈಪ್ ಅಳವಡಿಕೆ ಗಾಗಿ ಕಾಂಪೌಂಡ್ ನ ಸುತ್ತ ಅಗೆಯಲಾಗಿತ್ತು. ಕಾಂಪೌಂಡ್ ನ ಬದಿಯಲ್ಲಿ ಮತ್ತು ಅಡಿಪಾಯದವರಗೆ ಅಗೆದ ಪರಿಣಾಮ ಜೊತೆಗೆ ಸಡಿಲ ಮಣ್ಣಿನ ಕಾರಣದಿಂದ ಕಾಂಪೌಂಡ್ ಗೋಡೆ ಜರಿದು ಬಿದ್ದಿದೆ. ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್ ಕಂಪೆನಿ ಸ್ಥಳೀಯರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸುವಂತೆ ಮತ್ತು ರಸ್ತೆ ಅಗಲೀಕರಣದ ಸರಿಯಾದ ಸರ್ವೇ ಕಾರ್ಯದ ಮಾಹಿತಿ ನೀಡುವಂತೆ ಅಗ್ರಹಿಸಿದ್ದಾರೆ.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English