ಹಿರಿಯ ರಂಗನಟ ಸೀತಾರಾಮ ಶೆಟ್ಟಿ ನಿಧನ

9:09 PM, Friday, January 28th, 2022
Share
1 Star2 Stars3 Stars4 Stars5 Stars
(No Ratings Yet)
Loading...

Seetaram-Kulalಮಂಗಳೂರು: ತುಳು ನಾಟಕ ರಂಗದ ಹಿರಿಯ ಕಲಾವಿದದ, ದಿ. ಕೆ. ಎನ್. ಟೈಲರ್ ರವರ ನಾಟಕ,ಚಲನ ಚಿತ್ರ ರಂಗದ ಒಡನಾಡಿ ಆಗಿದ್ದ ಜೆ. ಸೀತಾರಾಮ ಶೆಟ್ಟಿ (83) ಅವರು ಪಚ್ಚನಾಡಿಯ ಸ್ವಗೃಹದಲ್ಲಿ ನಿಧನರಾದರು. ಸುಮಾರು 65 ವರ್ಷಗಳಿಂದ ತುಳು ನಾಟಕ ರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ ಕಲಾಸೇವೆಯಲ್ಲಿ ತೊಡಗಿರುವ ಅವರು ಕೆ. ಎನ್. ಟೇಲರ್ ರವರ ಗಣೇಶ ನಾಟಕ ಸಭಾದಲ್ಲಿ 48 ವರ್ಷಗಳ ಕಾಲ ಸಕ್ರಿಯರಾಗಿದ್ದರು.

ತನ್ನ 80ರ ಹರೆಯದಲ್ಲೂ ಪುರಭವನದಲ್ಲಿ ನಡೆದ ಸೀತಾರಾಮ 80ರ ಕಾರ್ಯಕ್ರಮದಲ್ಲಿ ಅಭಿಮಾನಿಗಳಿಂದ ಸನ್ಮಾನಿಸಲ್ಪಟ್ಟು, ತಾನು ನಟಿಸಿದ ನಾಟಕದ ವಿವಿಧ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿರುವುದೇ ಅವರ ಕಲಾ ಜೀವನದ ಕೊನೆಯ ಅಭಿನಯವಾಗಿರುತ್ತದೆ. ಅವರು ಪತ್ನಿ, ನಾಲ್ವರು ಪುತ್ರಿಯರನ್ನು, ಅಗಲಿರುತ್ತಾರೆ.

ಅವರ ನಿಧನಕ್ಕೆ ತುಳು ನಾಟಕ ಕಲಾವಿದರ ಒಕ್ಕೂಟ, ಕಲಾ ಸಂಗಮ ಮಂಗಳೂರು, ಚಾ ಪರ್ಕ ಕಲಾವಿದರ ತಂಡ, ಲಕುಮಿ ನಾಟಕ ತಂಡ ಸಂತಾಪ ಸೂಚಿಸಿದೆ.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English