ಧರ್ಮಸ್ಥಳದಲ್ಲಿ ನಡೆದ ಮಹಾ ಮೃತ್ಯುಂಜಯ ಯಾಗದ ಪ್ರಸಾದ ಪ್ರಧಾನಿಗೆ ತಲುಪಿಸಿದ ಶಾಸಕ ಹರೀಶ್​ ಪೂಂಜಾ

4:40 PM, Monday, January 31st, 2022
Share
1 Star2 Stars3 Stars4 Stars5 Stars
(5 rating, 1 votes)
Loading...

Harish Poonjaಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹಿತಕ್ಕಾಗಿ ಹಾರೈಸಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಯಾಗ ನೆರವೇರಿಸಿ ಇದೀಗ ಆ ಯಾಗದ ಪ್ರಸಾದ ನೇರವಾಗಿ ಪ್ರಧಾನಿಯವರನ್ನೇ ತಲುಪಿದೆ.

ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಖುದ್ದಾಗಿ ಈ ಪ್ರಸಾದವನ್ನು ಕೊಂಡೊಯ್ದು ಪ್ರಧಾನಿ ಮೋದಿಯವರಿಗೆ ಹಸ್ತಾಂತರಿಸಿದ್ದಾರೆ. ಅಷ್ಟೇ ಅಲ್ಲ ಯಾಗದಲ್ಲಿ ಮುಖ್ಯವಾಗಿ ಪಾಲ್ಗೊಂಡಿದ್ದ ಪುರೋಹಿತವೃಂದ ಕೂಡ ಶಾಸಕರೊಂದಿಗೆ ತೆರಳಿ ಮೋದಿಯವರಿಗೆ ಆಶೀರ್ವದಿಸಿದೆ.

ಪ್ರಧಾನಿಯವರಿಗೆ ದೀರ್ಘಾಯಸ್ಸು ಕೋರಿ ಹಾಗೂ ಅವರ ಆರೋಗ್ಯವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಯಾಗವನ್ನು ನೆರವೇರಿಸಲಾಗಿತ್ತು. ಆ ಯಾಗದ ಪ್ರಸಾದದ ಜೊತೆಗೆ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ನೀಡಿದ್ದ ಪೂಜಾ ಕೈಂಕರ್ಯ ಕಿಟ್ ಕೂಡ ಪ್ರಧಾನಿಯವರಿಗೆ ತಲುಪಿಸಿದೆ ಎಂಬುದಾಗಿ ಶಾಸಕ ಹರೀಶ್ ಪೂಂಜಾ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಸ್ವರ್ಣಖಚಿತ ಸ್ಫಟಿಕ ರುದ್ರಾಕ್ಷಿ ಹಾರವನ್ನು ಆಚಾರ್ಯರ ಮುಖೇನ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರಿಗೆ ಸಮರ್ಪಿಸುವ ಸೌಭಾಗ್ಯ ನನ್ನದಾಯಿತು ಎಂಬುದನ್ನೂ ಅವರು ಹೇಳಿಕೊಂಡಿದ್ದಾರೆ. ಮಹಾ ಮೃತ್ಯುಂಜಯ ಯಾಗದ ಮಹಾಪ್ರಸಾದವನ್ನು ಪ್ರಧಾನಿ ಮೋದಿ ಮಾತ್ರವಲ್ಲದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೂ ಪೂಂಜಾ ತಲುಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English