ಮಂಗಳೂರು ; ಗಡಿನಾಡಿನಲ್ಲಿ ಸಂಭ್ರಮಿಸಿದ ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವ

8:56 PM, Tuesday, February 1st, 2022
Share
1 Star2 Stars3 Stars4 Stars5 Stars
(No Ratings Yet)
Loading...

Kannada Jagruti ಉಳ್ಳಾಲ: ಸಾಮರಸ್ಯದ ಬಾಳಿಗೆ ಗಡಿನಾಡುಗಳೇ ಆಡಿಪಾಯವಾಗಿವೆ. ಆದುದರಿಂದ ಭಾಷೆಗಳ ಒಳಗಿನ ದ್ವೇಷ ಸಲ್ಲದು. ಗಡಿನಾಡಿನ ಭಾಗದಲ್ಲಿನ ಸಾಹಿತಿಗಳು, ಕಲಾವಿದರು, ಪತ್ರಕರ್ತರು ಅಲ್ಲದೆ ಎಲ್ಲಾ ಪ್ರತಿಭೆಗಳನ್ನು ಗುರುತಿಸುವಂತಾದಾಗ ನಮ್ಮ ಭಾಷೆಗಳು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆ ಮೂಲಕ

ಇನ್ನೂ ಕನ್ನಡ ನಾಡು ನುಡಿಯ ಸೇವೆ ನಿರಂತರವಾಗಿ ನಡೆಯಬೇಕು ಎಂದು ಕರ್ನಾಟಕ ವಿಧಾನಸಭಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕ, ಮಾಜಿ ಸಚಿವ ಮತ್ತು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಯು.ಟಿ ಖಾದರ್ ತಿಳಿಸಿದರು.

ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಂಜುನಾಥ್ ಎಜ್ಯುಕೇಷನ್ ಟ್ರಸ್ಟ್ ಮಂಗಳೂರು (ಎಂಇಟಿಎಂ) ಇವುಗಳ ಸಹಯೋಗದಲ್ಲಿ ಇಂದಿಲ್ಲಿ ಸೋಮವಾರ ಬೆಳಿಗ್ಗೆ ತಲಪಾಡಿ ತೊಕ್ಕೊಟ್ಟು ಉಚ್ಚಿಲ ಇಲ್ಲಿನ ಶ್ರೀ ಕೃಷ್ಣ ಕಲ್ಯಾಣ ಮಂಟಪದ ಸಂಕೋಳಿಗೆ ಸಭಾಗೃಹದಲ್ಲಿ ಜರುಗಿದ ಗಡಿನಾಡ ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಶಾಸಕ ಖಾದರ್ ಮಾತನಾಡಿದರು.

ಎಂಇಟಿಎಂ ಅಧ್ಯಕ್ಷ ಇಂ| ಕೆ.ಪಿ ಮಂಜುನಾಥ್ ಸಾಗರ್ ಅಧ್ಯಕ್ಷತೆಯಲ್ಲಿ ಜರುಗಿದ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರು ನಗರಸಭೆಯ ಆಯುಕ್ತ ಮಧು ಎಸ್.ಮನೋಹರ್, ಅತಿಥಿ ಅಭ್ಯಾಗತರುಗಳಾಗಿ ಸ್ವಾಮಿ ಎಂಟರ್‌ಪ್ರೈಸಸ್, ಬೆಂಗಳೂರು ಇದರ ಆಡಳಿತ ನಿರ್ದೇಶಕ ಗೋ.ನಾ.ಸ್ವಾಮಿ, ರೋಟರಿ ಕ್ಲಬ್ ಮೊಡಂಕಾಪು ಘಟಕದ ಅಧ್ಯಕ್ಷ ಎಲಿಯಾಸ್ ಸಾಂಕ್ತೀಸ್, ಅರಣ್ಯ ಅಧಿಕಾರಿ ಸೋಮಶೇಖರ್ ಹಿಪ್ಪರಗಿ, ಗುರುಪ್ರಸಾದ್ ಕೋಟೆಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಮನಾಥ ಸಾಂಸ್ಕೃತಿಕ ಭವನ ಸಮೂಹದ ನಾಡಗೀತೆಯೊಂದಿಗೆ ಉತ್ಸವ ಆದಿಗೊಂಡಿತು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸಿ ಪ್ರಸ್ತಾವನೆಗೈದರು.

ಅರ್ಚನಾ ಬಂಗೇರ ಕುಂಪಲ ಮತ್ತು ಕೀರ್ತನ ಸನಿಲ್ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಆರೀಫ್ ಕಲ್ಕಟ್ಟ ವಂದಿಸಿದರು.

ಸಾಂಸ್ಕೃತಿಕ ಉತ್ಸವದ ಅಂಗವಾಗಿ ನಾಡು ನುಡಿಯ ಕುರಿತು ಕವನ ವಾಚನ, ರಾಮನಾಥ ಸಾಂಸ್ಕೃತಿಕ ಭವನ ಸಮೂಹ ಕಾಸರಗೋಡು ಇವರಿಂದ ಸಮೂಹ ಗಾನ, ಸರೋಜ ರಾವ್ ಮತ್ತು ತಂಡ ಮಂಗಳೂರು ಇವರಿಂದ ಜಾನಪದ ನೃತ್ಯ, ಹರಿದಾಸ ಜಯಾನಂದ ಕುಮಾರ್ ಸಂಯೋಜನೆಯಲ್ಲಿ ಜಯ ಜನನಿ ನಿನಾದ ಕಾಸರಗೋಡು ತಂಡದಿಂದ ಕವಿಗಾನ ಕನ್ನಡಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಂಡವು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English