ಸಂಸ್ಕೃತಿ-ಪರಂಪರೆಯ ಪ್ರತೀಕ ಮಂಗಳೂರು ರಥೋತ್ಸವ

9:09 PM, Monday, February 7th, 2022
Share
1 Star2 Stars3 Stars4 Stars5 Stars
(No Ratings Yet)
Loading...

Venkataramana ಮಂಗಳೂರು : ಶ್ರೀ ಮಂಗಳಾದೇವಿಯ ನೆಲೆಬೀಡಾದ ಮಂಗಳೂರು ಗೌಡ ಸಾರಸತ್ತ ಬ್ರಾಹ್ಮಣ ಸಮಾಜದ  ಪಾಲಿಗೂ ಸಾಧನೆಯ ಕ್ಷೇತ್ರ. ಇಲ್ಲಿನ ರಥಬೀದಿಯ ಶ್ರೀ ವೆಂಕಟರಮಣ ದೇವಳ ಸಮಾಜದ ಧರ್ಮ ಪೀಠಗಳಲ್ಲೊಂದಾದ ಶ್ರೀ ಕಾಶೀಮಠ ಸಂಸ್ಥಾನ್ ವಾರಾಣಸಿಯ ಒಂದ್ದು ಕಣ್ಣಿನಂತೆ ಮತ್ತು ದೇಶದ ಪ್ರಮುಖ ದೇವಾಲಯ ಎಂದು ಬಿಂಬಿತವಾಗಿದೆ ಕಾಲ ಉರುಳಿದ ಪ್ರಭಾವ ಇಲ್ಲಿನ ವಾರ್ಷಿಕ ರಥೋತ್ಸವ ಒಂದು. ಸಮಗ್ರ ಭಜಕ ವೃಂದದವರಿಗೆ ಅವರ್ಣನೀಯ ಪುಳಕೋತ್ಸವ, ಧನ್ಯತೆಯಿಂದ ಬೀಗುವ ಸಂದರ್ಭ.

ಪ್ರತಿ ಮಾಘ ಮಾಸದ ಶುದ್ಧ ತದಿಗೆಯಂದು ಆರಂಭವಾಗಿ ಅಷಮಿಯಂದು ಮುಕಾಯಗೊಳ್ಳುವ ರಥೋತ್ಸವ ಕಾರ್ಯಕ್ರಮದಲ್ಲಿ ರಥಸಪ್ತಮಿಯ ಶುಭದಿನ ದಂದು ಆ ಬ್ರಹ್ಮರಥೋತ್ಸವ ನಡೆಯುವುದು ವಾಡಿಕೆ. ಮಂಗಳೂರು ರಥ ಎಂದು ಅಭಿದಾನಗೈದಿರುವ ಶ್ರೀ ರಥೋತ್ಸವ ಧಾರ್ಮಿಕ ವಿಧಿ ಆಚರಣೆಗೆ ಮಾತ್ರ ಸೀಮಿತಗೊಳ್ಳದ ಲೌಕಿಕ-ಪಾರಲೌಕಿಕ ಸಾಮಾಜಿಕ, ಸೌಹಾರ್ದತೆಗಳನ್ನೊಳಗೊಂಡು ಸಂಸ್ಕೃತಿ – ಪರಂಪರೆಯ ಕೊಂಡಿಯಾಗಿ ಅನುಸೂತ್ರವಾಗಿ ಮುಂದುವರಿದು ಭಾವೀ ಪೀಳಿಗೆಗೆ ವರ್ಗಾಯಿಸುವ ಸಂಪ್ರದಾಯಗಳ ಹಿನ್ನೆಲೆಯ ಮಹಾಪರ್ವ ಮತ್ತು ದಕ್ಷಿಣ ಭಾರತದ ಮಹೋತ್ಸವಗಳ ಪೈಕಿ ಒಂದು ಪ್ರಮುಖ ಮಹೋತ್ಸವವಾಗಿ ರೂಪುಗೊಂಡಿದೆ . ಶ್ರೀ ಕಾಶಿ ಮಠದ ಪೀಠಾಧಿಪತಿ ಶ್ರೀಮದ್ ಸಂಯಮೀಂದ್ರತೀರ್ಥ ಸ್ವಾಮೀಜಿಗಳವರ ಈ ಬಾರಿಯ ಉಪಸ್ಥಿತಿ ರಥೋತವವನ್ನು ಚಂದಗಾಣಿಸಲು ಸಂಭ್ರಮಿಸಲು ಕಾರಣವಾಗುತ್ತದೆ.

ಈ ಬಾರಿ 201 ನೇ ವರ್ಷಾಚರಣೆಯಲ್ಲದೆ ನೂತನ ಬ್ರಹ್ಮ ರಥ ದಲ್ಲಿ ರಥೋತ್ಸವ ದೇಶ ವಿದೇಶಗಳಿಂದ ಸಹಸ್ರಾರು ಭಜಕರು ಪಾಲ್ಗೊಂಡು ಪುನೀತರಾದರು . ಶ್ರೀ ದೇವಳದ ಮೊಕ್ತೇಸರರಾದ ಸಿ ಎಲ್ ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ಕೊಡುಗೈ ದಾನಿ ಪಿ . ದಯಾನಂದ ಪೈ , ಮುಂಡ್ಕುರ್ ರಾಮದಾಸ್ ಕಾಮತ್ , ಮಂಗಳೂರು ದಕ್ಷಿಣ ಶಾಸಕ ಡಿ . ವೇದವ್ಯಾಸ್ ಕಾಮತ್ ಉಪಸ್ಥಿತರಿದ್ದರು .

ಚಿತ್ರ : ಮಂಜು ನೀರೇಶ್ವಾಲ್ಯ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English