ಬೆಳ್ತಂಗಡಿ : ಜೈನ ಧರ್ಮದ ಆರಾಧ್ಯ ದೇವರಾದ ಗೊಮಟೇಶ್ವರ ಸ್ವಾಮಿಯ ಬಗ್ಗೆ ಅಶ್ಲೀಲ , ಅವಹೇಳನಕಾರಿಯಾಗಿ ಸಂದರ್ಶನವೊಂದರಲ್ಲಿ ಆಯುಬ್ ಖಾನ್ ಹೇಳಿಕೆ ನೀಡಿದ್ದು ಜೈನ ಧರ್ಮದ ಧಾರ್ಮಿಕ ಭಾವನೆಗಳಿಗೆ ನೋವು ಉಂಟಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಳಿದ ಸಮುದಾಯಗಳಂತೆ ಜೈನಧರ್ಮವು ಧಾರ್ಮಿಕ ಪರಂಪರೆ ಹಾಗೂ ಭಗವಾನ್ ಮಹಾವೀರರ ವಾಣಿಯಂತೆ ಬದುಕು ಮತ್ತು ಬದುಕಲು ಬಿಡು ಎನ್ನುವ ತತ್ವ-ಸಿದ್ಧಾಂತ ದೊಂದಿಗೆ ಎಲ್ಲಾ ಧರ್ಮದವರೊಂದಿಗೆ ಸಾಮರಸ್ಯದಿಂದ ಬಾಳುತ್ತಿರುವ ಆಹಿಂಸಾಮಯ ಜೈನ ಧರ್ಮವಾಗಿದೆ. ಜೈನ ಧರ್ಮದ ಭಗವಾನ್ ಬಾಹುಬಲಿಯ ಸಂದೇಶಗಳ ಆದ ಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ದಿ, ಎಂಬುದು ಜಗತ್ತಿಗೆ ಶಾಂತಿ ನೆಮ್ಮದಿಯನ್ನು ತಂದಿರುವಂತಹದ್ದು. ದಿನಾಂಕ 8. 2 .22 ರಂದು ಅಯೂಬ್ ಖಾನ್, ಅಶ್ಲೀಲ, ದುರುದ್ದೇಶ ಹೇಳಿಕೆ ನೀಡುವ ಮೂಲಕ ಜೈನ ಸಮಾಜದ ಭಾವನೆಗಳಿಗೆ ನೋವುಂಟು ಮಾಡಿದೆ ಮತ್ತು ಧರ್ಮ-ಧರ್ಮಗಳ ನಡುವೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡುವ ಸಮಾಜದ ಸ್ವಾಸ್ಥ್ಯ ಕದಡುವ ಹೇಳಿಕೆ ನೀಡಿರುವ ಅಯೂಬ್ ಖಾನ್ , ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಮುಂದೆ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಮತಿ ವಿಕಲ್ಪರಿಗೆ ಇದೊಂದು ಪಾಠವಾಗಬೇಕಿದೆ
ಈ ಬಗ್ಗೆ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಶ್ರೀ ಬಾಹುಬಲಿ ಸ್ವಾಮಿ ಸೇವಾ ಸಮಿತಿಯ ವತಿಯಿಂದ ದೂರು. ನೀಡಲಾಗಿದೆ ಈ ಸಂದರ್ಭದಲ್ಲಿ ಮಹಾವೀರ ಅಜ್ರಿ , ಉದಯ ಜೈನ್, ಪದ್ಮಪ್ರಸಾದ್, ಮಲ್ಲಿನಾಥ ಜೈನ್, ಹರ್ಷಿತ್ ಜೈನ್, ರಾಜೇಂದ್ರ ಶೆಟ್ಟಿ, ಅಕ್ಷಯ್ ಜೈನ್,ಮಲ್ಲಿಕ್ ಜೈನ್, ನಾಗರಾಜ್. ಉಪಸ್ಥಿತರಿದ್ದರು.
Click this button or press Ctrl+G to toggle between Kannada and English