ಆತ್ಮನಿರ್ಭರ ಕೇಂದ್ರ ಬಜೆಟ್ – ಜಿಲ್ಲಾ ಬಿಜೆಪಿ

7:02 PM, Saturday, February 12th, 2022
Share
1 Star2 Stars3 Stars4 Stars5 Stars
(No Ratings Yet)
Loading...

nirmala-seetharamanಮಂಗಳೂರು  : ಗೌರವಾನ್ವಿತ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಮಂಡಿಸಿದ ಬಜೆಟ್ ಸ್ವಾತಂತ್ರ್ಯೋತ್ತರದ 100 ವರ್ಷಗಳ ಭಾರತ ಎಂಬ ದೂರದೃಷ್ಟಿ ಸಾಧಿಸುವ ಗುರಿಯನ್ನು ಬಜೆಟ್ ಹೊಂದಿದೆ: ಈ ಬಜೆಟ್ ಮುಂದಿನ 25 ವರ್ಷಗಳಲ್ಲಿ ಭಾರತದ ಸಮಗ್ರ ಪ್ರಗತಿಯ ನೀಲನಕ್ಷೆಯನ್ನು ಹಾಕಲು ಪ್ರಯತ್ನಿಸುತ್ತದೆ. ಭಾರತವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತದೆ.

ಕಳೆದ 2ವರ್ಷಗಳಲ್ಲಿ ಸವಾಲುಗಳನ್ನು ಎದುರಿಸಿ ಆರೋಗ್ಯ ಮೂಲಸೌಕರ್ಯಗಳ ಸುಧಾರಣೆ ಭಾರತವು ಪ್ರಬಲ ಸ್ಥಾನದಲ್ಲಿದೆ. ಆರ್ಥಿಕತೆಯ ಚೇತರಿಕೆಯು ಭಾರತದ ಬಲವಾದ ಸ್ಥಿತಿಸ್ಥಾಪಕತ್ವವನ್ನು ಪ್ರತಿಬಿಂಬಿಸುತ್ತದೆ. ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಎಲ್ಲಾ ದೊಡ್ಡದರಲ್ಲಿ 9.2% ಅತ್ಯಧಿಕವಾಗಿದೆ ಎಂದು ಅಂದಾಜಿಸಲಾಗಿದೆ. ಆರ್ಥಿಕತೆಗಳು ಮತ್ತು ಸಬ್ಕಾ ಪ್ರಯಾಸ್ ನೊಂದಿಗೆ ನಾವು ನಮ್ಮ ಬಲವಾದ ಬೆಳವಣಿಗೆಯ ಪ್ರಯಾಣವನ್ನು ಮುಂದುವರಿಸುತ್ತೇವೆ. ವ್ಯಾಕ್ಸಿನೇಶನ್ ಅಭಿಯಾನದ ವೇಗ ಮತ್ತು ಕವರೇಜ್ ಹೆಚ್ಚು ಮತ್ತು ವೇಗವರ್ಧನೆಯೊಂದಿಗೆ ಸಹಾಯ ಮಾಡಿದೆ.

2022-23ರಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲವನ್ನು25.000 ಕಿ.ಮೀ.ಗಳ? ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಕವಚ್ ಕಾರ್ಯಕ್ರಮದ ಅಡಿಯಲ್ಲಿ 2000 ಸಾವಿರ ಕಿ.ಮೀ. ಗಳ ರೈಲು ಮಾರ್ಗಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ವಂದೇ ಭಾರತ – 400 ಹೊಸ ವಂದೇ ಭಾರತ್ ರೈಲುಗಳ ಘೋಷಣೆ ಮಾಡಲಾಗಿದೆ. ಪರ್ವತ ಶ್ರೇಣಿಗಳಲ್ಲಿ ರಸ್ತೆ ಅಭಿವೃದ್ಧಿಗೆ ಪಿಪಿಪಿ ಮಾಡೆಲ್‌ನಲ್ಲಿ ರಸ್ತೆ ನಿರ್ಮಾಣ ಯೋಜನೆ, ಗಂಗಾ ನದಿಯ ೫ ಕಿ.ಮೀ. ಅಕ್ಕಪಕ್ಕದಲ್ಲಿ ಸಾವಯವ ಕೃಷಿಗೇ ಆದ್ಯತೆ ನೀಡಿದೆ. ಸಿರಿ ಧಾನ್ಯ ಬೆಳೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಾರುಕಟ್ಟೆ ಒದಗಿಸುವಿಕೆ,  ಭೂ ದಾಖಲೆಗಳಿಗೆ ಕಿಸಾನ್ ಡ್ರೋನ್‌ಗಳ ಬಳಕೆ, 2023 ಅಂತರಾಷ್ಟೀಯ ಸಿರಿಧಾನ್ಯ ವರ್ಷವೆಂದು ಘೋಷಣೆ ಮಾಡಲಾಗಿದೆ. ಮೂಲ ಸೌಕರ್ಯಕ್ಕೆ 20 ಸಾವಿರ ಕೋಟಿ, ಹೈಡ್ರೋ ಸೋಲಾರ್ ಪವರ್‌ಗೆ 43,000 ಕೋಟಿ ರೂ., ದೇಶದ 5 ನದಿಗಳ ಜೋಡಣೆಗೆ 44,605  ಕೋಟಿ ರೂ. ಕಾವೇರಿ ನದಿ ಸೇರಿದಂತೆ 5 ನದಿ ಜೋಡಣೆಗೆ ನಿರ್ಧಾರ, 2023  ಮಾರ್ಚ್ ವರೆಗೂ ಕ್ರೆಡಿಟ್ ಗ್ಯಾರಂಟಿ ಸ್ಕೀಂ ವಿಸ್ತರಣೆ. ೫ ಲಕ್ಷ ಕೋಟಿ ರೂ. ಸಾಲ ಗ್ಯಾರಂಟಿ ಯೋಜನೆ., ಮಹಿಳಾ ಸಬಲೀಕರಣಕ್ಕೆ ಸಕ್ಷಮ ಅಂಗನವಾಡಿ ಯೋಜನೆ 2 ಲಕ್ಷ ಅಂಗನವಾಡಿ ಉನ್ನತೀಕರಣ, 2 ವರ್ಷದಲ್ಲಿ 19 ಕೋಟಿ ಮನೆಗಳಿಗೆ ನಲ್ಲಿ ನೀರು ಪೂರೈಕೆ,ಮನೆ ನಿರ್ಮಾಣದ ದಾಖಲೀಕರಣ ಸರಳ. ರಾಜ್ಯ ಸರ್ಕಾರಗಳೊಂದಿಗೆ ದಾಖಲೀಕರಣ, ಸರಳೀಕರಣಕ್ಕೆ ಕ್ರಮ. 2023 ರೊಳಗೆ 80 ಲಕ್ಷ ಮನೆಗಳ ನಿರ್ಮಾಣದ ಗುರಿ. ಪಿ.ಎಂ. ಆವಾಸ್ ಯೋಜನೆಯಡಿ 48 ಸಾವಿರ ಕೋಟಿ ರೂ. ಮೀಸಲು. 1 ರಿಂದ 12ನೇ ತರಗತಿವರೆಗೆ ಸರ್ಕಾರಿ ಶಾಲೆ ಮಕ್ಕಳಿಗೆ ಒನ್ ಕ್ಲಾಸ್ ಒನ್ ಟಿ.ವಿ. ಕಾರ್ಯಕ್ರಮ. 200 ಟಿ.ವಿ ಚಾನಲ್‌ಗಳ ಮೂಲಕ ಪರ್ಯಾಯ ಶಿಕ್ಷಣ. ಕೊರೋನಾ ಕಾರಣದಿಂದ ಶಿಕ್ಷಣ ವಂಚಿತ ಮಕ್ಕಳಿಗೆ ಸ್ಥಳೀಯ ಭಾಷೆಗಳಲ್ಲಿ ಡಿಜಿಟಲ್ ಪಾಠ. ಒನ್ ನೇಷನ್ ಒನ್ ರಿಜಿಸ್ಟ್ರೇಷನ್ ಯೋಜನೆ ಘೋಷಣೆ. ಜಮೀನು ದಾಖಲೆಗಳ ಡಿಜೀಟಲೀಕರಣಕ್ಕೆ ಹೊಸ ಯೋಜನೆ. 8 ಭಾಷೆಗಳಲ್ಲಿ ಜಮೀನು ದಾಖಲೆಗಳ ಡಿಜೀಟಲೀಕರಣ.
ದೇಶದ ಪ್ರತಿ ಹಳ್ಳಿಗೆ ಓಎಫ್‌ಸಿ ವ್ಯವಸ್ಥೆ ಜಾರಿ. ಪ್ರತಿಯೊಂದು ಗ್ರಾಮಕ್ಕೂ ಆಫ್ಟಿಕಲ್ ಫೈಬರ್ ಮೂಲಕ ಇಂಟರ್‌ನೆಟ್ ವ್ಯವಸ್ಥೆ. ಖಾಸಗೀ ಸಹಭಾಗಿತ್ವದಲ್ಲಿ ಆಫ್ಟಿಕಲ್ ಫೈಬರ್ ಮೂಲಕ ಇಂಟರ್‌ನೆಟ್ ಸಂಪರ್ಕ. 2022ರಲ್ಲೇ 5ಜಿ ತರಂಗಾಂತರ ಹರಾಜು. 5ಜಿ ಸಂಬಂಧಿ ವಸ್ತುಗಳ ಉತ್ಪಾದನೆಗೆ ಪ್ರೋತ್ಸಾಹ ಧನ.ರಕ್ಷಣಾ ಇಲಾಖೆಯಲ್ಲಿ ಆತ್ಮ ನಿರ್ಭರಕ್ಕೆ ಒತ್ತು. ಸ್ಥಳೀಯ ಉದ್ಯಮಗಳಿಗೆ ಉತ್ತೇಜನ ನೀಡಲು ಕ್ರಮ. ಎಸ್.ಸಿ./ಎಸ್.ಟಿ. ವರ್ಗದ ರೈತರಿಗೆ ಆರ್ಥಿಕ ನೆರವು.ಇ-ಪಾಸ್‌ಪೋರ್ಟ್ ಜಾರಿ. ಚಿಪ್ ಒಳಗೊಂಡ ಹೊಸ ತಂತ್ರಜ್ಞಾನದೊಂದಿಗೆ ಇ-ಪಾಸ್‌ಪೋಟ್ ಜಾರಿಗೆ ನಿರ್ಧಾರ.ಸಹಕಾರ ಸಂಘಗಳ ತೆರಿಗೆ 18% ರಿಂದ 15%ಕ್ಕೆ ಇಳಿಕೆ ಮಾಡಲಾಗಿದ್ದು ಈ ಬಜೆಟ್ ಜನಪರ ಹಾಗೂ ಆತ್ಮನಿರ್ಭರ ಭಾರತದ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರಿಗೆ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ ರವರು ಅಭಿನಂದನೆಯನ್ನು ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English