ಮಹಾಕಾಳಿಪಡ್ಪು ಭಾರತೀ ವಾಚ್ ವರ್ಕ್ಸ್ ನ ಜೆ.ಚಂದ್ರಶೇಖರ್ ನಿಧನ

11:48 AM, Monday, February 14th, 2022
Share
1 Star2 Stars3 Stars4 Stars5 Stars
(5 rating, 1 votes)
Loading...

j Chandrashekarಮಂಗಳೂರು : ಜಪ್ಪು ಮಹಾಕಾಳಿಪಡ್ಪು ಭಾರತೀ ವಾಚ್ ವರ್ಕ್ಸ್ ಇದರ ಮಾಲಕ ಜೆ.ಚಂದ್ರಶೇಖರ್ (82) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ.

1967ರಲ್ಲಿ ವಾಚ್ ವರ್ಕ್ಸ್ ಆರಂಭಿಸಿದ ಇವರು ಮೊದಲು ಮಂಗಳೂರಿನ ಕೆನರಾ ವಾಚ್ ವರ್ಕ್ಸ್ ನಲ್ಲಿ ತನ್ನ ವೃತ್ತಿ ಆರಂಭಿಸಿದರು. ಬಳಿಕ 1977ರಲ್ಲಿ ಸ್ವತ: ತಾವೇ ಜಪ್ಪು ಮಹಾಕಾಳಿಪಡ್ಪು ನಲ್ಲಿ  ಭಾರತೀ ವಾಚ್ ವರ್ಕ್ಸ್ ಸಂಸ್ಥೆ ಸ್ಥಾಪಿಸಿ ತನ್ನ ವೃತ್ತಿ ನಿರ್ವಹಿಸಿದ್ದರು.

ಮಂಗಳೂರಿನ ಜಪ್ಪು ಪಟ್ನ, ನಂತರ ಎಕ್ಕೂರು ಇಲ್ಲಿ ಸ್ವಂತ ಮನೆಯಲ್ಲಿ ನೆಲೆಸಿದ್ದರು. ಇತ್ತೀಚಿಗೆ ಜಲ್ಲಿಗುಡ್ಡೆಯ ತನ್ನ ಮಗನ ಜೊತೆ ವಾಸವಾಗಿದ್ದರು. ವಯೋ ಸಹಜ ಕಾಯಿಲೆಯಿಂದ ಕಳೆದ ಗುರುವಾರ ಮಂಗಳೂರಿನ ಎಸ್ ಸಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು.

ಮೃತರು ಪತ್ನಿ ಪುಷ್ಪ ಮೂವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರವು ನಂದಿಗುಡ್ಡ ರುದ್ರಭೂಮಿಯಲ್ಲಿ ಸಂಜೆ ನೆರವೇರಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English