ಮಾರ್ಚ್12 ರಂದು ಜಪ್ಪು ಮಹಾಕಾಳಿಪಡ್ಪು `ಮಹಾಕಾಳಿ ನೇಮೋತ್ಸವ’

5:45 PM, Friday, March 4th, 2022
Share
1 Star2 Stars3 Stars4 Stars5 Stars
(5 rating, 1 votes)
Loading...

Mahakaliಮಂಗಳೂರು : ಜಪ್ಪು ಗ್ರಾಮದ ಮಹಾಕಾಳಿ ಪಡ್ಡುವಿನ ಮಹಾಕಾಳಿ ನೇಮೋತ್ಸವವು ಮಾರ್ಚ 12 ರ ಶನಿವಾರ ಸಂಜೆ ಭಂಡಾರ ಬಂದು ರಾತ್ರಿ 7 ರಿಂದ ನಡೆಯಲಿರುವುದು.

ತಾ:11-03-2022ನೇ ಶುಕ್ರವಾರ ಸಂಜೆ ಗಂಟೆ 7-15ಕ್ಕೆ ಪೂಜೆ ಕಳೆದ ಮಹಾಕಾಳಿಯ ಫೋಟೋ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಉತ್ಸವ ನಡೆಯುವ ಜಾಗಕ್ಕೆ ಹೊರಡುವುದು. ಗಂಟೆ 7-30ಕ್ಕೆ ಪ್ರಸಾದ ಹಾರಿಸುವುದು, ತದನಂತರ ಸ್ಥಳ ಶುದ್ದೀಕರಣ, ಗಣಹೋಮ, ಬ್ರಹ್ಮರ ಗುಂಡ ಶುದ್ದೀಕರಣ ಇತ್ಯಾದಿ ನಡೆಯಲಿದೆ.

ತಾ. 12-03-2022ನೇ ಶನಿವಾರ ಸಂಜೆ ಗಂಟೆ 5-00ಕ್ಕೆ ಸರಿಯಾಗಿ ದೇವಸ್ಥಾನದಿಂದ ಭಂಡಾರ ಉತ್ಸವ ಸ್ಥಳಕ್ಕೆ ಹೊರಡುವುದು. ಗಂಟೆ 7-00ಕ್ಕೆ ಉಳ್ಳಾಯ ನೇಮ ಪ್ರಾರಂಭ ವಾಗುವುದು, ಗಂಟೆ 10-00ಕ್ಕೆ ಶ್ರೀ ಮಹಾಕಾಳಿ ದೇವಿಗೆ ಗಗ್ಗರ ಸೇವೆ ಕಟ್ಟುವ ಸಂಭ್ರಮ ದಿಂದೊಡಗೂಡಿ ಮರಳಿ ಶ್ರೀ ಆದಿಮಹೇಶ್ವರಿ ದೇವಿಯ ದರ್ಶನವನ್ನು ಪಡೆದು ಮುಂದೆ ವಿಜೃಂಭಣೆಯಿಂದ ಉತ್ಸವ ಜಾಗಕ್ಕೆ ಹಿಂತಿರುಗಿ, ತದನಂತರ ರಾತ್ರಿ ಗಂಟೆ 2-00ರಿಂದ ಮಾರಿ ಓಡಿಸಿಕೊಂಡು (ರೈಲ್ವೆಗೇಟಿನ ಬಳಿ) ಗಡಿಪಾಡಿ ಜಾಗಕ್ಕೆ ಬಂದು ಶ್ರೀ ಮಹಾಕಾಳಿಯ ಪರಿವಾರ ಗಣಾದಿಗಳಿಗೆ ಆವರಣೆ, ಗಂಟೆ 3-00ಕ್ಕೆ ಮುಗೇರ ನೇಮ ಪಾರಂಭಗೊಳ್ಳುವುದು ಎಂದು ಶ್ರೀ ಆದಿ ಮಹೇಶ್ವರಿ ದೇವಸ್ಥಾನ ವೈದ್ಯನಾಥ ಭಜನಾ ಮಂಡಳಿಯ ಪ್ರಕಟಣೆ ತಿಳಿಸಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English