ಮಂಗಳೂರು: ನಗರದ ವಿಶ್ವವಿದ್ಯಾನಿಲಯದ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಪೂರ್ವತನ ಪ್ರಾಂಶುಪಾಲ ಡಾ. ಹರೀಶ್ ಎ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ಆಂಗ್ಲ ವಿಭಾಗ ಮುಖ್ಯಸ್ಥೆ ಡಾ. ಎನ್ ಕೆ ರಾಜಲಕ್ಷ್ಮೀ, ಮಹಿಳೆ ಅಥವಾ ಪುರುಷನನ್ನು ಒಂದು ಚೌಕಟ್ಟಿನೊಳಗಿಡುವುದು ಸರಿಯಲ್ಲ. ಮಹಿಳೆ ಸಂತೋಷದ ಸೆಲೆ, ಪ್ರೀತಿಯೇ ಅವಳ ಶಕ್ತಿ ಎಂದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್, ತಮ್ಮನ್ನು ಯಾವುದೇ ಬೇಧಭಾವ ವಿಲ್ಲದೆ ಬೆಳೆಸಿ ಶಿಕ್ಷಣ ಕೊಡಿಸಿದ ಹೆತ್ತವರನ್ನು ನೆನಪಿಸಿಕೊಂಡರು. “ಕಷ್ಟ ಬಂದಾಗ ಹೆಣ್ಣಿನ ಸಹನೆ, ತಾಳ್ಮೆ ಮುಖ್ಯವಾಗುತ್ತದೆ. ಆಕೆ ತನ್ನ ಕುಟುಂಬಕ್ಕೆ ಆಧಾರವಾಗಬಲ್ಲಳು,” ಎಂದರು.
ʼಅದೃಷ್ಟಶಾಲಿ ಮಹಿಳೆʼಯರನ್ನು ಅದೃಷ್ಟ ಪರೀಕ್ಷೆಯ ಮೂಲಕ ಆರಿಸಿ ಬಹುಮಾನ ವಿತರಿಸಲಾಯಿತು. ಸೂಕ್ಷ್ಮಾಣುಜೀವಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಭಾರತಿ ಪ್ರಕಾಶ್ ಹಾಗೂ ಭೌತಶಾಸ್ತ್ರ ವಿಭಾಗದ ಅರುಣಾ ಕುಮಾರಿ ಕಾರ್ಯಕ್ರಮ ಸಂಘಟಿಸಿದರು. ರೇಖಾ ಶೆಟ್ಟಿ ತಮ್ಮ ಪ್ರಾರ್ಥನೆಯ ಮೂಲಕ ಗಮನ ಸೆಳೆದರು. ಹಿಂದಿ ವಿಭಾಗ ಮುಖ್ಯಸ್ಥೆ ಡಾ. ನಾಗರತ್ನಾ ಎನ್. ರಾವ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಭಾಗವಾಗಿ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು.
Click this button or press Ctrl+G to toggle between Kannada and English