ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನ : ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನ

9:08 PM, Friday, March 11th, 2022
Share
1 Star2 Stars3 Stars4 Stars5 Stars
(No Ratings Yet)
Loading...

Sutarpeteಮಂಗಳೂರು : ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್ ಪೇಟೆಯ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಮಾರ್ಚ್-5ರಿಂದ 8ರವರೆಗೆ ನಡೆದ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ವೈಭವದ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನಗೊಂಡಿದೆ. ವಿಶಿಷ್ಠ ರೀತಿಯ ಭೂತಾರಾಧನೆಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಶ್ರೀ ಕ್ಷೇತ್ರದ ನೇಮೋತ್ಸವಕ್ಕೆ ಊರ ಪರಊರಿನ ಸರ್ವಧರ್ಮದ ಸಾವಿರಾರು ಭಕ್ತರು ಆಗಮಿಸಿ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿದರು .

ನೇಮೋತ್ಸವದ ಮೊದಲು ಮಾರ್ಚ್ -4ರಂದು ಧರ್ಮದರ್ಶಿ ಶ್ರೀ ಭಾಸ್ಕರ್ ಐತಾಳ್ ಅವರ ಪೌರೋಹಿತ್ಯದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ನಂತರ ನಾಲ್ಕು ದಿನಗಳ ಕಾಲ ಸ್ಥಳದ ಗುಳಿಗ , ಶ್ರೀಬಬ್ಬುಸ್ವಾಮಿ – ತನ್ನಿಮಾನಿಗ, ರಾಹು ಗುಳಿಗ , ಪಂಜುರ್ಲಿ-ಗುಳಿಗ , ಧರ್ಮದೈವ , ಸುಬ್ಯಮ್ಮ – ಸುಬ್ಬಿ ಗುಳಿಗ , ಸಂಕಲೆ ಗುಳಿಗ ಹಾಗೂ ಕೊರಗಜ್ಜ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು . ನೇಮೋತ್ಸವದ ನಾಲ್ಕು ದಿನವೂ ಶ್ರೀ ಕ್ಷೇತ್ರದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಪಾರಂಪರಿಕ ಭೂತಾರಾಧನೆ :
ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನಕ್ಕೆ ಸುಮಾರು 150 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಇಲ್ಲಿ ಪಾರಂಪರಿಕ ಭೂತಾರಾಧನೆಯನ್ನು ವೈಶಿಷ್ಟ್ಯಪೂರ್ಣವಾಗಿ ನಡೆಸಲಾಗುತ್ತಿದೆ. ಶ್ರೀ ಕ್ಷೇತ್ರವು ಸರ್ವಧರ್ಮಿಯರ ಆರಾಧನ ಕೇಂದ್ರವಾಗಿ ಬೆಳಗುತ್ತಿದೆ . ಇಲ್ಲಿ ಬಬ್ಬು ಸ್ವಾಮಿಯ ಕಾರ್ನಿಕದ ಶಕ್ತಿ ಇದೆ . ಶ್ರೀ ಕ್ಷೇತ್ರದ ಆರಾಧನಾ ಕ್ರಮವು ಪಾರಂಪರಿಕವಾಗಿದ್ದು ಎಲ್ಲರ ಶ್ರದ್ಧಾ ಭಕ್ತಿಯ ಸ್ಥಾನವಾಗಿದೆ ಎಂದು ದೈವಸ್ಥಾನದ ಗುರಿಕಾರರಾದ ಶ್ರೀ ಎಸ್.ರಾಘವೇಂದ್ರ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದೈವಸ್ಥಾನದ ಗೌರವ ಸಲಹೆಗಾರರಾದ ಕೆ.ಪಾಂಡುರಂಗ , ಎಸ್.ಬಾಬು , ಪ್ರಧಾನ ಕಾರ್ಯದರ್ಶಿ ಎಸ್. ಜಗದೀಶ್ಚಂದ್ರ ಅಂಚನ್, ಕೋಶಾಧಿಕಾರಿ ಎಸ್. ನವೀನ್ , ಪ್ರಧಾನ ಅರ್ಚಕರಾದ ಎಸ್.ಗಣೇಶ, ಅರ್ಚಕರಾದ ಜಯ , ಪದಾಧಿಕಾರಿಗಳಾದ ಎಸ್.ಪವಿತ್ರ , ಎಸ್.ಮೋಹನ್ , ಬಿ.ವಿಶ್ವನಾಥ್ ಸಾಲ್ಯಾನ್, ಎಸ್.ಜನಾರ್ದನ, ಬಿ.ಗಣೇಶ್ , ಎಸ್. ವಸಂತ , ಎಸ್.ಸುರೇಶ್, ಎಸ್.ಉಪೇಂದ್ರ , ಎಸ್. ಪ್ರವೀಣ್, ರಂಜಿತ್ , ಭೋಜ , ಶ್ರೀಮತಿ ಅನ್ನಪೂರ್ಣ ರಘುರಾಮ್, ಉಮಾಪ್ರಸಾದ್ , ಪುರುಷೋತ್ತಮ ಪದಕಣ್ಣಾಯ , ಸುನಿಲ್ ರಾಜ್ ಪದಕಣ್ಣಾಯ , ಕಿರಣ್ ರಾಜ್ ಪದಕಣ್ಣಾಯ , ಅಪ್ಪಿ ಎಸ್. ಸುದೇಶ್ ಕುಮಾರ್,‌ ತಿಲಕ್ ರಾಜ್ , ರಾಹುಲ್ ಎಸ್, ಸಂತೋಷಕುಮಾರಿ , ಸಂದೀಪ್ , ಕಿಶೋರ್, ರಕ್ಷಿತ್, ಶ್ರೀಮತಿ ಇಂದಿರಾ ಮೋಹನ್ ದಾಸ್ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English