ಮಂಗಳೂರು: ಕುಳಾಯಿ ಪುರಾತನ ಕೋಟೆದ ಬಬ್ಬು ದೈವಸ್ಥಾನದ ಜಾತ್ರೆ ಅಂಗವಾಗಿ ನಡೆಯುವ ಮೀನು ಹಿಡಿಯುವ ಉತ್ಸವ 8 ವರ್ಷದ ಬಳಿಕ ಮತ್ತೆ ಶುರುವಾಗಿದೆ.
ಪ್ರತಿವರ್ಷ ಇಲ್ಲಿನ ಜಾತ್ರೆ ಸಂದರ್ಭ ಮೀನ ಸಂಕ್ರಮಣದಂದು ಮೀನು ಹಿಡಿಯುವ ಉತ್ಸವ ನಡೆಯುತ್ತದೆ. 2014ರಿಂದ ಈ ಆಚರಣೆ ನಿಂತು ಹೋಗಿತ್ತು. ಬಗ್ಗುಂಡಿ ಕೆರೆ ಉಳಿಸಿ ಅಭಿಯಾನದ ಬಳಿಕ ಸೋಮವಾರ ಮೀನು ಹಿಡಿಯುವ ಉತ್ಸವ ಮತ್ತೆ ಆರಂಭಗೊಂಡಿತು.
ಸೋಮವಾರ ಬೆಳಗ್ಗೆ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪ್ರಸಾದವನ್ನು ಕೆರೆಗೆ ಹಾರಿಸಲಾಯಿತು. ಬಳಿಕ ಮೂರು ಬಾರಿ ಕದೊನಿ ಸಿಡಿಸಿ ಹಿಂದಿನ ಸಂಪ್ರದಾಯದಂತೆ ಮೀನು ಹಿಡಿಯಲು ಚಾಲನೆ ನೀಡಲಾಯಿತು. ಸುಮಾರು 50ರಷ್ಟು ಜನ ಮೀನು ಹಿಡಿಯಲು ಕೆರೆಗೆ ಇಳಿದರು. ಮಕ್ಕಳು, ಹಿರಿಯ ನಾಗರಿಕರು ಉತ್ಸಾಹದಿಂದ ಕೆರೆಗೆ ಇಳಿದರು. ಅರ್ಧ ಗಂಟೆಯೊಳಗೆ ಮುಗುಡು, ಮಡೆಂಜಿ ಇತ್ಯಾದಿ ಮೀನುಗಳು ಬಲೆಗೆ ಬಿದ್ದವು.
ಸ್ಥಳೀಯ ಕಾರ್ಪೊರೇಟರ್ ವೇದಾವತಿ, ವರುಣ್ ಚೌಟ, ಹಿರಿಯರಾದ ಎಂ.ಜೆ ಶೆಟ್ಟಿ, ಸ್ಪಂದನಾ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ದೀಪಕ್ ಕುಳಾಯಿ, ಅಧ್ಯಕ್ಷ ಬಿ.ಬಿ ರೈ, ಪ್ರಮುಖರಾದ ರಮೇಶ್ ಅಳಪೆ, ಪುಷ್ಪರಾಜ್ ಕುಳಾಯಿ, ದೀಕ್ಷಿತ್ ಮೊದಲಾದವರು ಹಾಜರಿದ್ದರು.
Click this button or press Ctrl+G to toggle between Kannada and English