ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ವಾದದಿಂದ ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ : ಬೃಂದಾ ಕಾರಟ್

4:24 PM, Monday, March 21st, 2022
Share
1 Star2 Stars3 Stars4 Stars5 Stars
(No Ratings Yet)
Loading...

brinda karatಮಂಗಳೂರು:  ಮುಸ್ಲಿಂ ಮೂಲಭೂತವಾದಿ ಸಂಘಟನೆಗಳಾದ ಪಿಎಫ್ಐ, ಎಸ್ ಡಿಪಿಐ ಮೊದಲಾವುಗಳು ಹಿಜಾಬ್ ಕುರಿತ ತೀರ್ಪಿನ ವಿಚಾರಗಳನ್ನು ವಿರೋಧಿಸುವುದರೊಂದಿಗೆ ಹೆತ್ತವರು, ವಿದ್ಯಾರ್ಥಿನಿಯರಿಗೆ ಒತ್ತಡ ಹೇರುವ ಕೆಲಸ ಮಾಡುತ್ತಿದೆ. ಆ ಮೂಲಕ ಮೂಲಭೂತವಾದಿಗಳ ಪ್ರಮುಖ ಆಶಯವಾಗಿರುವ ಹೆಣ್ಣುಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿಸುವ ಕೆಲಸವೂ ನಡೆಯುತ್ತಿದೆ. ಹೆಣ್ಣು ಮಕ್ಕಳು ಹಿಜಾಬ್ ಧರಿಸಬೇಕೇ ಬೇಡವೇ ಎಂದು ಹೆತ್ತವರು ತೀರ್ಮಾನಿಸಲಿ ಎಂದು ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಆರೋಪಿಸಿದ್ದಾರೆ.

ಸಿಪಿಐಎಂ ವತಿಯಿಂದ ಸೋಮವಾರ ಮಂಗಳೂರಿನ ಪುರಭವನದಲ್ಲಿ ಜರುಗಿದ ಸೌಹಾರ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

ದೇಶಗಳಲ್ಲಿ ಸೌಹಾರ್ದ‌ತೆ ಕದಡುವಲ್ಲಿ, ಬಾಹ್ಯ ಶಕ್ತಿಗಳಿಗಿಂತ ಆಂತರಿಕ‌‌ ಶಕ್ತಿಗಳ ಪಾತ್ರ‌ ದೊಡ್ಡದಿದೆ. ಬಿಜೆಪಿ ಸಂಘಪರಿವಾರಗಳೇ ದೇಶದ ಸೌಹಾರ್ದತೆಗೆ ದೊಡ್ಡ ಅಪಾಯವಾಗಿದೆ ಎಂದರು.

ಕರ್ನಾಟಕದ ಮತಾಂತರ ನಿಷೇಧ ಕಾಯ್ದೆ ಸಂವಿಧಾನ ದ ಮೇಲೆ ಪ್ರಜಾಪ್ರಭುತ್ವ ದ ಮೇಲೆ ನಡೆಯುತ್ತಿರುವ ದಾಳಿಯ ಒಂದು ಉದಾಹರಣೆ. ಮತಾಂತರ ನಿಷೇಧ ಕಾಯಿದೆ ಸಂವಿಧಾನ ನೀಡಿರುವ ಹಕ್ಕು ನ್ನು ನಿರಾಕರಿಸುವ ಅತ್ಯಂತ ಕೆಟ್ಟ ಶಾಸನ ಇದು ಬಲವಂತದ ಮರುಮತಾಂತರವನ್ನು ಕಾನೂನಿನ ಮೂಲಕ ತಂದಿದೆ’ ಎಂದು ಬೃಂದಾ ಕಾರಟ್ ತಿಳಿಸಿದ್ದಾರೆ.

‘ಕರ್ನಾಟಕದ ಹಿಜಾಬ್ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ನೀಡಿ ರುವ ತೀರ್ಪು ದುರಾದೃಷ್ಟ. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯ ನೀಡಬಹುದು ಎನ್ನುವ ವಿಶ್ವಾಸವಿದೆ. ಈ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸಲಾ ಗುತ್ತಿದೆ. ಪಂಜಾಬ್ ನಲ್ಲಿ ಸಿಖ್ ಸಮುದಾಯದ ವಿದ್ಯಾರ್ಥಿಗಳಿಗೆ ಶಿರವಸ್ತ್ರ ಧರಿಸಲು ಅವಕಾಶ ವಿದೆ .ಭಾರತದ ಸಂವಿಧಾನದ ಲ್ಲಿ ಶಿಕ್ಷಣ ಪಡೆಯುವ ಹಕ್ಕು ಎಲ್ಲರಿಗೂ ಇದೆ ಅದನ್ನು ನಿರಾಕರಿಸುವುದು ಸಂವಿಧಾನ ವಿರೋಧಿ ಯಾಗಿದೆ ‘ ಎಂದು ಬೃಂದಾ ಕಾರಟ್ ತಿಳಿಸಿದ್ದಾರೆ.

‘ಸ್ವಾತಂತ್ರ್ಯ ದ ಹೋರಾಟಕ್ಕೆ ಕೊಡುಗೆ ನೀಡದೆ ಇರುವ ಸಂಘ ಪರಿವಾರ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ದ ಆಚರಣೆಯ ಸಂದರ್ಭದಲ್ಲಿ ಜನರನ್ನು ಒಡೆದು ಆಳುವ ನೀತಿ ಯನ್ನು ಸರಿಸುತ್ತಿದೆ.ಸ್ವಾತಂತ್ರ್ಯ ಹೋರಾಟವನ್ನು ಹೈಜಾಕ್ ಮಾಡಲು ಹೊರಟಿದೆ’ ಎಂದು ಬೃಂದಾ ಕಾರಟ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಸಿಪಿಐಎಂ ದ.ಕ ಜಿಲ್ಲಾ ಕಾರ್ಯದರ್ಶಿ ‌ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರು, ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ರಾದ ಯಾದವ ಶೆಟ್ಟಿ ಅಧ್ಯಕ್ಷ ತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ರಾದ ಕೆ.ನೀಲಾ,ಯಮುನಾ ಗಾಂವ್ಕರ್, ವಸಂತ ಆಚಾರಿ,ಮುನೀರ್ ಕಾಟಿಪಳ್ಳ, ಬಾಲಕೃಷ್ಣ ಶೆಟ್ಟಿ,ಡಾ.ಕೆ.ಪ್ರಕಾಶ್, ಗುರುಶಾಂತ್, ಮಹಾಂತೇಶ ಹಾಗೂ ಸಿಪಿಐಎಂ ಮುಖಂಡರಾದ ಡಾ.ಕೃಷ್ಣ ಪ್ಪ ಕೊಂಚಾಡಿ, ಸುಕುಮಾರ್, ಪದ್ಮಾವತಿ, ಜಯಂತಿ ಶೆಟ್ಟಿ,ರಮಣಿ,ವಸಂತಿ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English