ಸಾಂಸ್ಕೃತಿಕ ಲೋಕ ಬೆಳಗಿಸುವ ಹೊಣೆ ಯುವಜನತೆಯದು : ಕ್ಯಾ. ಕಾರ್ಣಿಕ್

1:57 PM, Saturday, March 26th, 2022
Share
1 Star2 Stars3 Stars4 Stars5 Stars
(5 rating, 1 votes)
Loading...

Samskrutika-sourabhaಮಂಗಳೂರು  : ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ತ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ನಾವು ಸೌಹಾರ್ದ ಪ್ರಿಯರು ಎಂಬ ಧ್ಯೇಯ ವಾಕ್ಯದೊಂದಿಗೆ ಆದರ್ಶ ಸಂಗೀತ ಅಕಾಡೆಮಿ ಟ್ರಸ್ಟ್ ಬೆಂಗಳೂರು ಹಾಗು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ 29 ನೇ ಅಂತಾರಾಷ್ಟ್ರೀಯ ವಿಹಾರ ನೌಕೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವು ಮಂಗಳೂರಿನ ಬೊಕ್ಕಪಟ್ಟಣದ ಅಬ್ಬಕ್ಕ ನೌಕೆಯ ವೇದಿಕೆಯಲ್ಲಿ ಅರ್ಥಪೂರ್ಣವಾಗಿ ಜರುಗಿತು .

ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಅನಿವಾಸಿ ಕನ್ನಡಿಗರ ಕೋಶ ಇದರ ಮಾಜಿ ಉಪಾಧ್ಯಕ್ಷರಾದ ಕ್ಯಾ . ಗಣೇಶ್ ಕಾರ್ಣಿಕ್ ರವರು ಉದ್ಹಾಟಿಸಿ ನಾಡಿನ ಕಲೆ ,ಸ್ಕೃತಿ , ಸಾಹಿತ್ಯ ಸಂಗೀತ ಉಳಿಸಲು ಎಡೆಬಿಡದೆ ಕಾರ್ಯಕ್ರಮಗಳನ್ನು ಆಯೋಜಿಸಿ ಉಳಿಸಲು ಪ್ರಯತ್ನಿಸಬೇಕು . ಯುವಜನತೆ ಎಲ್ಲಾ ಪ್ರಕಾರದ ಕಲೆಗಳಲ್ಲಿ ತೊಡಗಿಕೊಂಡು ಸಾಂಸ್ಕೃತಿಕ ಲೋಕವನ್ನು ಬೆಳಗಿಸಬೇಕು ಎಂದರು .

ಡಾ.ಮನೋಜ್ ಶರ್ಮ ಗುರೂಜಿ ಸಾನಿಧ್ಯ ವಹಿಸಿದ್ದರು .ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಎಚ್ .ಭೀಮರಾವ್ ವಾಷ್ಠರ್ , ಆದರ್ಶ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷರಾದ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ , ಬೆಂಗಳೂರಿನ ವಾಟಿಕಾ ಕ್ಲಬ್ ಮತ್ತು ರೆಸಾರ್ಟ್ ನ ಶ್ರೀ ಆರ್ ಕಾರ್ತಿಕ್ ರೆಡ್ಡಿ , ಡಾ.ಎಸ್ ಎಮ್ ಶಿವಪ್ರಕಾಶ್ , ಪ್ರೊ.ಪಿ ಎಲ್ ಧರ್ಮ , ಗೋಪಾಲ್ ಡಿ ರಾಥೋಡ್ ರವರು ಮುಖ್ಯ ಅತಿಥಿಗಳಾಗಿದ್ದರು.

Samskrutika-sourabhaಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷವಾಗಿ ಸಾಧನೆ ಮಾಡಿದ ಡಾ.ಎಸ್ ಎಮ್ ಗೋಪಾಲಕೃಷ್ಣ ಆಚಾರ್ಯ , ಶ್ರೀ ಗೋಪಾಲಕೃಷ್ಣ ರಾಠೋಡ್ ಚಿತ್ತಾಪುರ , ಡಾ.ಬಿ ಕೆ ಮೋನಪ್ಪ ಆಚಾರ್ಯ , ಶ್ರೀ ಎಚ್ .ಭೀಮರಾವ್ ವಾಷ್ಠರ್ ಸುಳ್ಯ , ಶ್ರೀ ಮಿತ್ರದೇವ ಮಡಪ್ಪಾಡಿ , ಡಾ.ಮನೋಜ್ ಶರ್ಮ ಗುರೂಜಿ , ಶ್ರೀ ಗೋಪಾಲಕೃಷ್ಣ ಭಟ್ ಕಟ್ಟತ್ತಿಲ ಅವರಿಗೆ ಐಕಾನಿಕ್ ಆಫ್ ಇಂಡಿಯಾ ಅವಾರ್ಡ್ ರಾಷ್ಟ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು . ನಾರಾಯಣ ನಾಯ್ಕ ಕುದುಕೋಳಿ ಮತ್ತು ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಅವರಿಗೆ ಸಿರಿಕನ್ನಡ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿ ಖ್ಯಾತ ತಾರಸಿ ಕೃಷಿಕರಾದ ಕೃಷ್ಣಪ್ಪಗೌಡ ಪಡ್ಡಂಬೈಲ್ ಅವರನ್ನು ಗಣ್ಯರು ಸಮ್ಮಾನಿಸಿದರು .

ಭೀಮರಾವ್ ವಾಷ್ಠರ್ ಸಾಹಿತ್ಯ ರಚಿಸಿ ಹಾಡಿದ ಶ್ರೀ ಸಜ್ಜಲಾಂಬೆ ಶರಣಮ್ಮ ದೇವಿ ಎಂಬ ಭಕ್ತಿಗೀತೆ ಆಲ್ಬಮ್ ನ್ನು ಬಿಡುಗಡೆ ಮಾಡಲಾಯಿತು .

ಸರೋಜಾರಾವ್ ಮತ್ತು ತಂಡದ ಪ್ರತಿಭಾ ಸಾಲಿಯಾನ್ , ಸ್ಮಿತಾ ಮಹೇಶ್ , ರೇಶ್ಮಾ ಮೊರಸ್ ಅವರಿಂದ ಜಾನಪದ ನೃತ್ಯ ನಡೆಯಿತು . ಗಾಯನ ಕಾರ್ಯಕ್ರಮದಲ್ಲಿ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಎಚ್ .ಭೀಮರಾವ್ ವಾಷ್ಠರ್ , ಶೀಲಾ ಪಡೀಲ್ , ಶಿವರಾಜ್ ಪಾಂಡೇಶ್ವರ್ ಇನ್ನಿತರರು ನಡೆಸಿಕೊಟ್ಟರು . ನಂತರ ನಡೆದ ಸಾಗರ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಶಿವಣ್ಣ ಶೀತರ್ ಮೈಸೂರ್ , ಮಮತಾ ಅರಸೀಕೆರೆ , ಪೆರುಮಾಳ್ ಲಕ್ಷ್ಮಣ್ ಐವರ್ನಾಡು , ಜ್ಯೋತಿಲಕ್ಷ್ಮಿ ಕೂಟೇಲು , ಪೂರ್ಣಿಮಾ ಪೆರ್ಲಪಾಡಿ , ನಾರಾಯಣ ನಾಯ್ಕ ಕುದುಕೋಳಿ ಮತ್ತು ಗೋಪಾಲ್ ಕೃಷ್ಣ ಭಟ್ ಕಟ್ಟತ್ತಿಲ ಭಾಗವಹಿಸಿದ್ದರು.

ಕವಿಗೋಷ್ಠಿ ಅಧ್ಯಕ್ಷತೆಯನ್ನು ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಹಾಗೂ ಖ್ಯಾತ ಸಾಹಿತಿ ಮತ್ತು ಜ್ಯೋತಿಷಿ ಎಚ್ .ಭೀಮರಾವ್ ವಾಷ್ಠರ್ ರವರು ವಹಿಸಿದ್ದರು . ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾದ ಇಂ. ಕೆ ಪಿ ಮಂಜುನಾಥ್ ಸಾಗರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರು . ಮೀನಾಕ್ಷಿ ಕುದುಕೋಳಿ ಮತ್ತು ಗೀತಾಕುಮಾರಿ ಪ್ರಾರ್ಥನೆ ಹಾಡಿದರು. ಆಕೃತಿ ಭಟ್ ಮಂಗಳೂರು ರವರು ಕಾರ್ಯಕ್ರಮ ನಿರೂಪಿಸಿದರು .

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English