ಮಂಗಳೂರು : ಬಾಬು ಜಗಜೀವನರಾಂ ಅವರ ಬದುಕು ಸಾರ್ವಕಾಲಿಕ ಶ್ರೇಷ್ಠತೆ ಹೊಂದಿರುವಂತದ್ದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಹೇಳಿದರು.
ಅವರು ಏ.5ರ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಡಾ. ಬಾಬು ಜಗಜೀವನರಾಂ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನರಾಂ ಅವರ ಬಾಲ್ಯವೇ ಒಂದು ಹೋರಾಟವಾಗಿತ್ತು ಅಸ್ಪøಶ್ಯತೆ ಹೆಚ್ಚಾಗಿದ್ದ ಬಿಹಾರದಂತಹ ರಾಜ್ಯದಲ್ಲಿ ಎದುರಾದ ಅವಮಾನಗಳನ್ನೆಲ್ಲ ಎದುರಿಸಿ ಹದಿಹರೆಯದಲ್ಲೇ ರಾಜಕೀಯ ಪ್ರವೇಶಿಸಿ ಐವತ್ತು ವರ್ಷಗಳ ಕಾಲ ರಾಜಕೀಯದಲ್ಲಿ ತೊಡಗಿಸಿಕೊಂಡು ಹಸಿರು ಕ್ರಾಂತಿಗೆ ಒತ್ತುಕೊಟ್ಟು ಜನರ ಆತ್ಮವಿಶ್ವಾಸ, ನಂಬಿಕೆಗಳೊಂದಿಗೆ ಭದ್ರವಾಗಿ ನೆಲೆಯೂರುವುದರೊಂದಿಗೆ ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ಹೆಸರು ಪಡೆದದ್ದು ಅವರ ಜನಪರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಜೀವನದ ಕಷ್ಟಗಳಿಗೆ ಹಣೆಬರಹವನ್ನು ಹೊಣೆಯಾಗಿಸದೆ ಶಿಕ್ಷಣದ ಮೂಲಕ ಎಂತಹಾ ಸಾಧನೆಯನ್ನು ಕೂಡ ಮಾಡಬಹುದು ಎಂದು ತೋರಿಸಿಕೊಟ್ಟ ಅವರ ಬದುಕು ಸಾರ್ವಕಾಲಿಕ ಶ್ರೇಷ್ಠವಾದದ್ದು. ಜಿಲ್ಲೆಯಲ್ಲಿರುವ ಎಲ್ಲ ಗ್ರಂಥಾಲಯ ಹಾಗೂ ಪುಸ್ತಕ ಗೂಡುಗಳಲ್ಲಿ ಇರುವ ಇವರ ಪುಸ್ತಕಗಳನ್ನು ಓದುವಂತೆ ಜಿಲ್ಲೆಯ ಜನತೆಗೆ ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕುಮಾರ್ ಮಾತನಾಡಿ, ಇಂದು ಜಾರಿಯಲ್ಲಿರುವ ಯೋಜನೆಗಳಾದ ಕನಿಷ್ಠ ವೇತನ, ಭವಿಷ್ಯ ನಿಧಿ, ಕಾರ್ಮಿಕ ವಂತಿಕೆಗಳನ್ನು ಬಾಬು ಜಗಜೀವನರಾಂ ಅವರು ಅಂದಿನ ಕಾಲದಲ್ಲೇ ಜಾರಿಗೊಳಿಸಿದ್ದರು.
ದೇಶದ ಅಭಿವೃದ್ಧಿಗೆ ಕಾರ್ಮಿಕನೂ ಕೂಡ ಮುಖ್ಯ ಎಂಬ ಸಿದ್ದಾಂತವನ್ನು ದೇಶದಾದ್ಯಂತ ಜಗಜ್ಜಾಹಿರುಗೊಳಿಸಿದ ಹಾಗೂ ಬರ ಪರಿಸ್ಥಿತಿಯನ್ನು ಎದುರಿಸಿ ಹಸಿರುಕ್ರಾಂತಿಗೆ ಮುನ್ನುಡಿ ಬರೆದ ನಿಜವಾದ ಜನನಾಯಕ ಅವರು ಎಂದರು.
ಕೃಷಿ ಸಚಿವರಾಗಿ, ಕಾರ್ಮಿಕ ಸಚಿವರಾಗಿ, ರಕ್ಷಣಾ ಸಚಿವರಾಗಿ, ಉಪ ಪ್ರಧಾನಿಯಾಗಿ ಹಲವು ಖಾತೆಗಳನ್ನು ನಿರ್ವಹಿಸಿ ಒಬ್ಬ ಸಮರ್ಥ ಆಡಳಿತಗಾರಾಗಿದ್ದ ಅವರ ಬದುಕು ಇಂದಿನ ಯುವಕರನ್ನು ತಲುಪುವಂತಾಗಬೇಕು ಎಂದರು.
ನಂತರ ಮೀನುಗಾರಿಕೆ ಮಹಾವಿದ್ಯಾಲಯದ ಡೀನ್ ಶಿವಕುಮಾರ್ ಮಗದ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತರಾದ ಶಶಿಕುಮಾರ್, ಪೆÇಲೀಸ್ ಅಧೀಕ್ಷಕ ಸೋನಾವಣೆ ಋಷಿಕೇಶ್ ಭಗವಾನ್ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ಧಲಿಂಗೇಶ ಬೇವಿನ ಮಟ್ಟಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English