ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ರಹೀಮ್ ಉಚ್ಚಿಲ್ ವಜಾ

7:51 PM, Wednesday, April 6th, 2022
Share
1 Star2 Stars3 Stars4 Stars5 Stars
(No Ratings Yet)
Loading...

Rahim-Uchil ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ರಹೀಮ್ ಉಚ್ಚಿಲ್ ಅವರನ್ನು ಪದಚ್ಯುತಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಏಪ್ರಿಲ್ 5 ರ ಮಂಗಳವಾರದಂದು ವಜಾ ಆದೇಶವನ್ನು ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಉಚ್ಚಿಲ್, “ವಜಾಗೊಳಿಸಿದ ಕಾರಣದ ಬಗ್ಗೆ ನನಗೆ ತಿಳಿದಿಲ್ಲ. ಆದೇಶ ಬಂದ ನಂತರವೇ ನನ್ನನ್ನು ವಜಾ ಮಾಡಿರುವ ವಿಚಾರ ತಿಳಿಯಿತು. ಎರಡು ಬಾರಿ ಅಧ್ಯಕ್ಷನಾಗಿ ಉಳಿಯಲು ಪಕ್ಷ ನನಗೆ ಸಹಾಯ ಮಾಡಿದೆ. ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ” ಎಂದು ರಹೀಮ್ ಉಚ್ಚಿಲ್ ಪ್ರತಿಕ್ರಿಯಿಸಿದ್ದಾರೆ.

“ನಾನು  ಕಾರಣ ಕೇಳಿ ತಿಳಿಯುವ ಪ್ರಯತ್ನ ಮಾಡಿದ್ದೇನೆ. ಪಕ್ಷದಲ್ಲಿ ಕೂಡಾ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೀರಿ ಅಂತಾ ಯಾರೂ ಹೇಳಿಲ್ಲ. ಸರ್ಕಾರದ ಮುಖ್ಯಸ್ಥರೂ ಯಾವುದೇ ಕಾರಣವನ್ನೂ ಹೇಳಿಲ್ಲ. ನನಗೂ ಈ ಆದೇಶದಲ್ಲಿ ಏನೂ ಅರ್ಥ ಆಗುತ್ತಿಲ್ಲ. ನನಗೇ ಗೊತ್ತಿಲ್ಲದೇ ಅಕಾಡೆಮಿ‌ ಅಧ್ಯಕ್ಷ ಆಗಿ ನೇಮಕ ಆದೆ. ಗೊತ್ತಿಲ್ಲದೆಯೇ ಆಗಿಯೇ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷನೂ ಆದೆ. ಈಗಲೂ ಸೂಚನೆಯೇ ಇಲ್ಲದೇ ಪದಮುಕ್ತಗೊಳಿಸಲಾಗಿದೆ. ನಾನೂ ಕಾರಣದ ಹುಡುಕಾಟದಲ್ಲಿದ್ದೇನೆ. ಏನಾದರೂ ಕಾರಣ ಇರಬಹುದು ಹುಡುಕಾಟದಲ್ಲಿದ್ದೇನೆ” ಎಂದರು.

“ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಭಾಗವಾಗಿ ನನನ್ನು ಪದಮುಕ್ತಗೊಳಿಸಿದ್ದಾರೆ ಎಂಬುದನ್ನು ನಾನು ಒಪ್ಪುವುದಿಲ್ಲ. ನಾನು ಮುಸಲ್ಮಾನ ಅಂತಾ ನನ್ನನ್ನು ಅಕಾಡೆಮಿಯಿಂದ ತೆಗೆದಿದ್ದಾರೆ ಎನ್ನುವುದನ್ನು ಒಪ್ಪಲ್ಲ. ನಾನು 17 ವರ್ಷಗಳಿಂದ ಮುಸಲ್ಮಾನನಾಗಿ ಭಾಜಪಾದಲ್ಲಿದ್ದೇನೆ. ನನಗೆ ಪಕ್ಷ ಎಲ್ಲಾ ಅವಕಾಶಗಳನ್ನು ನೀಡಿದೆ. ಬೇರೆ ರಾಜ್ಯಗಳಿಗೂ ಪಕ್ಷ ಪ್ರಭಾರಿಯಾಗಿ ಕಳುಹಿಸಿತ್ತು. ಪಕ್ಷ ಜವಾಬ್ದಾರಿಗಳನ್ನು ಕೊಡುವಾಗ ಪಕ್ಷಕ್ಕೆ ನಾನು ಮುಸಲ್ಮಾನ ಅಂತಾನೇ ಗೊತ್ತಿತ್ತು. ನನ್ನ ಧರ್ಮದ ಕಾರಣಕ್ಕಾಗಿ ನನ್ನನ್ನು ಪದಮುಕ್ತಗೊಳಿಸಲಾಗಿದೆ ಅನ್ನೋದು ಸತ್ಯಕ್ಕೆ ದೂರವಾದದ್ದು. ಇತ್ತೀಚಿಗೆ ನಡೆದ ಬೆಳವಣಿಗಗಳಲ್ಲೂ ಸರ್ಕಾರದ ಪರ ಮಾತನಾಡಿದ್ದೇನೆ. ಹಾಗಾಗಿ ಅದೇ ಕಾರಣ ಅನ್ನೋದನ್ನು ಒಪ್ಪುವುದಿಲ್ಲ” ಎಂದು ರಹೀಂ ಉಚ್ಚಿಲ ಸ್ಪಷ್ಟಪಡಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English