ಏ.ಜೆ. ದಂತ ವೈದ್ಯಕೀಯ ಕಾಲೇಜಿನಿಂದ ವಿಶ್ವ ಆರೋಗ್ಯ ದಿನಾಚರಣೆ

6:07 PM, Thursday, April 7th, 2022
Share
1 Star2 Stars3 Stars4 Stars5 Stars
(No Ratings Yet)
Loading...

AJ Dentalಮಂಗಳೂರು  : ಏ. ಜೆ. ದಂತ ವೈದ್ಯಕೀಯ ಕಾಲೇಜಿನ ಸಮುದಾಯ ದಂತ ಚಿಕಿತ್ಸ ವಿಭಾಗ , ಎನ್.ಯಸ್.ಯಸ್ ಯೂನಿಟ್ ಹಾಗು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ದಕ್ಷಿಣ ಕನ್ನಡ ಬ್ರಾಂಚ್ ಇದರ ಸಹಯೋಗದೊಂದಿಗೆ ಏಪ್ರಿಲ್ 7 ರಂದು ವಿಶ್ವ ಅರೋಗ್ಯ ದಿನಚಹರಣೆ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯ ಡಿಡಿಪಿಐ, ಸುಧಾಕರ ಕೆ ಹಾಗು ಏ.ಜೆ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ ಕೆ ನಿಲ್ಲನ್ ಶೆಟ್ಟಿ ಯವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.

ಸಮುದಾಯ ದಂತ ಚಿಕಿತ್ಸ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಹೆಗ್ಡೆ ಸ್ವಾಗತಿಸಿದರು.

ಡಿ.ಡಿ.ಪಿ.ಐ ಸುಧಾಕರ ಕೆ ಯವರು ಮಾತನಾಡಿ ಈ ಕಾರ್ಯಕ್ರಮದ ಮೂಲಕ ಜಿಲ್ಲೆಯ ಎಲ್ಲ ಶಿಕ್ಷಕರಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುವಲ್ಲಿ ಸರಕಾರದಜೊತೆ ಕೈಜೋಡಿಸಿದ ಏ.ಜೆ ದಂತ ವೈದ್ಯಕೀಯ ಕಾಲೇಜು ಹಾಗು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಕೃತಜ್ಞತೆ ಸಲ್ಲಿಸಿದರು ಹಾಗು ಮುಂದೆಯೂ ಇಂತಹ ಕಾರ್ಯಕ್ರಮಗಳಿಗೆ ತಮ್ಮ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಆನ್ಲೈನ್ಮೂಲಕ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಕರಿಗೆ ಕ್ಯಾನ್ಸರ್ ಹಾಗು ಅದರ ಪರಿಣಾಮಗಳು ಮತ್ತು ಪ್ರಾರಂಭಿಕ ಹಂತದಲ್ಲಿ ಅದರ ತಡೆಗಟ್ಟುವ ವಿಧಾನಗಳ ಬಗ್ಗೆ ಮಾಹಿತಿಯನ್ನುನೀಡಲಾಯಿತು.

ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ವಾಜಿದ ಹಾಗು ಡಾ.ಅನುರಾಧ ಇವರುಗಳು ಈ ಕಾರ್ಯಕ್ರಮವನ್ನು ಯೆಶಸ್ವಿಯಾಗಿ ನಡೆಸಿಕೊಟ್ಟರು.

ಇಂಡಿಯನ್ ಡೆಂಟಲ್ ಅಸೋಸಿಯೇಷನ್ ದಕ್ಷಿಣ ಕನ್ನಡ ಬ್ರಾಂಚ್ ಕಾರ್ಯದರ್ಶಿ ಡಾ. ಭರತ್ ಪ್ರಭು, ಖಜಾಂಚಿ ಡಾ.ಪ್ರಸನ್ನ ಕುಮಾರ್ , ಎನ್.ಯಸ್.ಯಸ್ ಯೂನಿಟ್ ಮುಖ್ಯಸ್ಥೆ ಡಾ. ಶ್ರೇಷ್ಟ ಶೆಟ್ಟಿ ಉಪಸ್ಥಿತರಿದ್ಧರು.

ಡಾ. ಧೀಕ್ಷಾ ಈ ಕಾರ್ಯಕ್ರಮವನ್ನು ನಿರೂಪಿಸಿದರು.

ಜಿಲ್ಲೆಯ ಸುಮಾರು ಸಾವಿರಕ್ಕೂ ಅಧಿಕ ಶಿಕ್ಷಕರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English