ಪುತ್ತೂರು : ಪುತ್ತಿಲ ಪರಿವಾರ ಪ್ರಾರಂಭವಾಗಿ ಶತ ದಿನ ಕಳೆದಿದ್ದು, ಹಲವು ಸೇವಾ ಚಟುವಟಿಕೆಗಳನ್ನು ಪೂರೈಸಿದೆ. ಚುನಾವಣೆಯಲ್ಲಿ ಉಳಿಕೆ ಹಣವನ್ನು ಹಲವು ಆನಾರೋಗ್ಯ ಪೀಡಿತರಿಗೆ, ಮಳೆಗಾಲದಲ್ಲಿ ಹಾನಿಯಾದ ಹಲವು ಮನೆಗಳಿಗೆ ವಿತರಿಸಿದ್ದು, ನಂತರ ಪುತ್ತಿಲ ಪರಿವಾರ ಪ್ರಾರಂಭವಾಗಿ ನೂರು ದಿನಗಳಲ್ಲಿ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ಸೇರಿದವರಿಗೆ, ಅಪಘಾತದಿಂದ ಗಾಯಗೊಂಡವರಿಗೆ, ಗೋಮಾತೆಯ ರಕ್ಷಣೆಗೆ , ವಿದ್ಯಾಭ್ಯಾಸಕ್ಕೆ ಸಹಾಯ ಸಹಿತ ಹಲವು ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.
ಕಾರ್ಯಕರ್ತರಿಗೆ ಕಾನೂನಿನ ನೆರವಿನ ಸಹಾಯವನ್ನು ಪುತ್ತಿಲ ಪರಿವಾರದಿಂದ ಒದಗಿಸಲಿದೆ.
ಪುತ್ತಿಲ ಪರಿವಾರ ನಡೆಸುವ ಸೇವಾ ಸಮರ್ಪಣೆಗಳನ್ನು ಕಂಡು ನೂರಾರು ಜನ ತಮ್ಮಿಂದಾದ ಕೊಡುಗೆಗಳನ್ನು ನೀಡಲು ಮುಂದೆ ಬಂದಿದ್ದಾರೆ.
ಆ ಕಾರಣಗಳಿಂದ ಸೇವಾ ಸಮರ್ಪಣೆಗಳಿಗೆ ನಿಮ್ಮ ಕೊಡುಗೆ ಎಂಬ ಯೋಜನೆಯನ್ವಯ ಕ್ಯೂಆರ್ ಕೋಡ್ ಮತ್ತು ಬ್ಯಾಂಕ್ ಖಾತೆ ನಂಬರ್ ಬಿಡುಗಡೆಗೊಳಿಸಲಾಗಿದೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಅಪಘಾತದಿಂದ ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯೋರ್ವರಿಗೆ ವಿದ್ಯಾಭ್ಯಾಸಕ್ಕೆ ಸಹಾಯಕ್ಕಾಗಿ ಲ್ಯಾಪ್‌ಟಾಪ್ ನೀಡಿ ಈ ಯೋಜನೆಗೆ ಚಾಲನೆ ನೀಡಲಾಗಿದೆ.
ಇದರಲ್ಲಿ ಇರುವ ಖಾತೆ ನಂಬರ್ ಅರುಣ್ ಕುಮಾರ್ ಪುತ್ತಿಲ ಹಾಗೂ ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲ್ ಅವರ ಜಂಟಿ ಖಾತೆಯಾಗಿದ್ಧು, ಇದಕ್ಕೆ ಸಂದಾಯವಾಗುವ ಹಣದ ಸೇವಾ ಸಮರ್ಪಣೆಗೆ ಮಾತ್ರ ಉಪಯೋಗವಾಗಲಿದ್ದು, ಪ್ರತಿ 6 ತಿಂಗಳಿಗೊಮ್ಮೆ ವ್ಯಾವಹಾರಿಕ ಲೆಕ್ಕಾಚಾರ ಬಿಡುಗಡೆಯಾಗಲಿದೆ.
ಇಚ್ಚೆ ಇದ್ದವರು ತಮ್ಮಿಂದಾದ ನೆರವನ್ನು ಪುತ್ತಿಲ ಪರಿವಾರದ ಕ್ಯೂ ಆರ್ ಕೋಡ್ ಅಥವಾ ಖಾತೆ ನಂಬರ್ ಗೆ ಸಂದಾಯ ಮಾಡಬಹುದು ಎಂದು ಪುತ್ತಿಲ ಪರಿವಾರ ಪ್ರಕಟಣೆಯಲ್ಲಿ ತಿಳಿಸಿದೆ
Click this button or press Ctrl+G to toggle between Kannada and English